ಮೈಸೂರು

ಮೈಸೂರು ನಿವಾಸಿಗಳ ನಿದ್ದೆಗೆಡಿಸಿದ ಹೋಂ ಕ್ವಾರೆಂಟೈನ್‍ನಲ್ಲಿರುವ ತಿರುಗಾಟ : ದೂರು ; ಜಿಲ್ಲಾಡಳಿತದಿಂದ ಕ್ರಮ

ಮೈಸೂರು,ಏ.6:-  ಮೈಸೂರಿನಲ್ಲಿ   ಹೋಂ ಕ್ವಾರೆಂಟೈನ್‍ನಲ್ಲಿರುವ ಜ್ಯುಬಿಲಿಯಂಟ್  ಕಾರ್ಖಾನೆಯ ನೌಕ ರರೂ ಸೇರಿದಂತೆ ಹಲವರು ಮನೆಯಿಂದ ಹೊರಗಡೆ ಬಂದು ಓಡಾಡುತ್ತಿದ್ದು, ಸುತ್ತಲ ನಿವಾಸಿಗಳ  ನಿದ್ದೆಗೆಡಿಸಿದೆ.

ಮೈಸೂರಿನ ಅಗ್ರಹಾರ, ವಿಜಯನಗರ, ಗೋಕುಲಂ ಸೇರಿದಂತೆ ವಿವಿಧೆಡೆ ಇರುವ ಮನೆಗಳಲ್ಲಿ ಕ್ವಾರೆಂಟೈನ್ ನಲ್ಲಿರುವ ಕೊರೋನಾ ಸೋಂಕು ತಗುಲಿರಬಹುದಾದ ಶಂಕೆ ಇರುವವರು ಮನೆಯಿಂದ ಹೊರಬರುತ್ತಿದ್ದಾರೆ ಎಂದು ಸ್ಥಳೀಯರು ಜಿಲ್ಲಾಡಳಿತಕ್ಕೆ ದೂರು ನೀಡಿದ್ದಾರೆ.

ದೂರು ಬಂದ ಸ್ಥಳಗಳಿಗೆ  ನಿನ್ನೆ  ಮುಂಜಾನೆಯೇ ತಕ್ಷಣ ಧಾವಿಸಿದ ಜಿಲ್ಲಾಡಳಿತದ ತಂಡ, ಸ್ವಗೃಹಗಳಲ್ಲಿ ಕ್ವಾರೆಂಟೈನ್ ಆಗಿದ್ದವರನ್ನು ಅಲ್ಲಿಂದ ವಾಹನಗಳಲ್ಲಿ ಕರೆದೊಯ್ದಿದ್ದು,   ಜಿಲ್ಲಾಡಳಿತವೇ ವ್ಯವಸ್ಥೆ ಮಾಡಿಸಿದ್ದ  ಕ್ವಾರೆಂಟೈನ್  ಲಾಡ್ಜ್‍ಗಳಲ್ಲಿ ಇರಿಸಿದೆ. ಕ್ವಾರೆಂಟೈನ್‍ನ ಉಳಿದ ಅವಧಿ ಪೂರ್ಣಗೊಳ್ಳುವವರೆಗೂ ಅವರನ್ನು ಲಾಡ್ಜ್‍ನಲ್ಲಿಯೇ ಇರಿಸಲು ಕ್ರಮ ಕೈಗೊಂಡಿದೆ.

ಕೊರೋನಾ ಸೋಂಕು ಮೈಸೂರಿನಲ್ಲಿ ಕ್ಷಿಪ್ರವಾಗಿ ಹರಡು ತ್ತಿರುವ ಕಾರಣ  ಚಿಂತೆಗೀಡಾಗಿರುವ ಜಿಲ್ಲಾಡಳಿತ `ಲಾಕ್ ಡೌನ್’ ಕ್ರಮವನ್ನು ಇನ್ನಷ್ಟು ಕಟ್ಟುನಿಟ್ಟಿನಿಂದ ಜಾರಿಗೊಳಿಸಲು ನಿರ್ಧರಿಸಿದ್ದು,  ನಗರದಲ್ಲಿ  ಎಲ್ಲಾ ಅಂಗಡಿಗಳನ್ನು ಬಂದ್ ಮಾಡಿಸಿದೆ. ಇದರಿಂದ ಅನಗತ್ಯವಾಗಿ ರಸ್ತೆಯಲ್ಲಿ ಓಡಾಡುವವರಿಗೆ ಕಡಿವಾಣ ಹಾಕಲು ಸಾಧ್ಯವಾಗಲಿದೆ ಎಂಬುದು ಜಿಲ್ಲಾಡಳಿತದ  ಚಿಂತನೆ. ಒಟ್ಟಿನಲ್ಲಿ ಕೊರೋನಾ ವೈರಸ್ ಸೋಂಕು ಪತ್ತೆ ಪ್ರಕರಣ ಹೆಚ್ಚುತ್ತಲೇ ಇದ್ದು, ಜನತೆ ಕಂಗೆಟ್ಟಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: