ಪ್ರಮುಖ ಸುದ್ದಿ

ಕೊಡ್ಲಿಪೇಟೆ ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕ ಜಾಗೃತಿ ಸಭೆ : ಹೊರ ರಾಜ್ಯದವರ ಮಾಹಿತಿ ನೀಡಲು ಸೂಚನೆ

ರಾಜ್ಯ( ಮಡಿಕೇರಿ) ಏ.6 :- ಕೊಡಗಿನ ಗಡಿ ಬಾಗದಲ್ಲಿರುವ ಶನಿವಾರಸಂತೆ ಪೊಲೀಸ್ ಠಾಣೆ ವ್ಯಾಪ್ತಿಗೊಳಪಡುವ ಕೊಡ್ಲಿಪೇಟೆ ಉಪ ಠಾಣೆಯಲ್ಲಿ ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಸರ್ವಧರ್ಮೀಯರ ಹಾಗೂ ವಿವಿಧ ಸಂಘ ಸಂಸ್ಥೆಗಳ, ರಾಜಕೀಯ ಪಕ್ಷಗಳ ಮುಖಂಡರುಗಳ ಜಾಗೃತಿ ಸಭೆ ನಡೆಯಿತು.
ಶನಿವಾರಸಂತೆ ಆರಕ್ಷಕ ಉಪ ನಿರೀಕ್ಷಕರಾದ ಕೃಷ್ಣನಾಯಕ್ ಹಾಗೂ ಸೋಮವಾರಪೇಟೆ ವೃತ್ತ ನಿರೀಕ್ಷಕ ನಂಜುಂಡೇಗೌಡ ಅವರು ಮಾತನಾಡಿ ಕೊರೋನಾ ವೈರಸ್ ವಿರುದ್ಧ ತೆಗೆದುಕೊಳ್ಳಬೇಕಾದ ಮುಂಜಾಗೃತಾ ಕ್ರಮಗಳ ಬಗ್ಗೆ ವಿವರಿಸಿದರು.
ವಾರದ ಸೋಮವಾರ, ಬುಧವಾರ, ಶುಕ್ರವಾರ ಅಗತ್ಯ ವಸ್ತುಗಳ ಖರೀದಿಗೆ ಸಮಯ ನಿಗದಿಪಡಿಸಿದ್ದು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಸಲಹೆ ನೀಡಿದರು. ಇತರ ದಿನ ಮತ್ತು ಸಮಯದಲ್ಲಿ ಅನಗತ್ಯ ಸಂಚಾರ ಕಂಡು ಬಂದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದೆಂದರು.
ಆರೋಗ್ಯ ಸಮಸ್ಯೆಗಳಿದ್ದಾಗ ಮತ್ತು ತುರ್ತು ಸಂದರ್ಭಗಳಲ್ಲಿ ಮಾತ್ರ ಮಾನವೀಯ ನೆಲೆಗಟ್ಟಿನಲ್ಲಿ ಅವಕಾಶ ನೀಡಲಾಗುತ್ತದೆ. ತರಕಾರಿ ಮತ್ತು ದಿನಸಿ ಇನ್ನಿತರ ವಸ್ತುಗಳನ್ನು ಸಾಗಾಟ ಮಾಡುವ ವಾಹನಗಳು ಆಙSP ಕಚೇರಿಯಿಂದ ಅನುಮತಿ ಪಡೆಯಬೇಕು.
ಯಾವುದೇ ಧಾರ್ಮಿಕ ಆಚರಣೆಗಳು ಮತ್ತು ಸಾಮೂಹಿಕ ಪ್ರಾರ್ಥನೆಗೆ ಅವಕಾಶವಿಲ್ಲ. ಮಂದಿರ, ಮಸೀದಿ, ಚರ್ಚ್‍ಗಳಿಗೆ ಕಳೆದ ಎರಡು ತಿಂಗಳಿಂದೀಚೆಗೆ ಹೊರ ರಾಜ್ಯದವರು ಪ್ರವಚನ ಇನ್ನಿತರ ಚಟುವಟಿಕೆಗಳಿಗೆ ಬಂದಿದ್ದರೆ ಅವರ ಮಾಹಿತಿಯನ್ನು ಖಡ್ಡಾಯವಾಗಿ ನೀಡಬೇಕು. ದೆಹಲಿಗೆ ಅಥವಾ ಇನ್ನಿತರ ಕಡೆಗಳಿಗೆ ತಬ್ಲಿಗ್ ಜಮಾತ್‍ಗೆ ತೆರಳಿರುವವ ಮಾಹಿತಿಯನ್ನು ಕೂಡ ಮಸೀದಿಯ ಪ್ರಮುಖರು ತಿಳಿಸಬೇಕೆಂದು ಪೊಲೀಸ್ ಅಧಿಕಾರಿಗಳು ಸೂಚನೆ ನೀಡಿದರು.
ಧಾರ್ಮಿಕ ಆಚರಣೆ ಮತ್ತು ಕೃಷಿ ಚಟುವಟಿಕೆ ಕುರಿತು ಇದ್ದ ಸಂಶಯಗಳನ್ನು ಸಭೆಯಲ್ಲಿದ್ದವರು ಬಗೆ ಹರಿಸಿಕೊಂಡರು. ಕ್ರಿಮಿ ನಾಶಕವನ್ನು ಸಿಂಪಡಿಸುವಂತೆ ಸ್ಥಳೀಯ ಗ್ರಾ.ಪಂ ಗೆ ಸಲಹೆ ನೀಡಲಾಯಿತು.
ಕೊಡ್ಲಿಪೇಟೆ ಕೃಷಿಪತ್ತಿನ ಸಹಕಾರ ಸಂಘದ ಅದ್ಯಕ್ಷ ಎಸ್.ಡಿ.ತಮ್ಮಯ್ಯ, ಉಪಾಧ್ಯಕ್ಷ ಯತೀಶ್ ಬಿ.ಕೆ., ಸದಸ್ಯ ವಹಾಬ್, ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಯತೀಶ್, ಕಾರ್ಯದರ್ಶಿ ಜಿ.ಆರ್.ಸುಬ್ರಹ್ಮಣ್ಯ, ಜುಮ್ಮಾ ಮಸೀದಿಯ ಅಧ್ಯಕ್ಷ ಸುಲ್ಯೆಮಾನ್, ಕಾರ್ಯದರ್ಶಿ ಹನೀಫ್, ಸದಸ್ಯ ಬಾಸಿತ್, ಕೊಡ್ಲಿಪೇಟೆ ಜಾಮೀಯಾ ಮಸೀದಿ ಅಧ್ಯಕ್ಷ ಮನ್ಸೂರ್, ಸದಸ್ಯ ಇದ್ರೀಸ್,
ಪ್ರಮುಖರಾದ ಔರಂಗಜೇಬ್, ತಬ್ಲೀಗ್ ಜಮಾಅತ್ ಅಧ್ಯಕ್ಷ ಅಬ್ದುಲ್ ರಹಮಾನ್, ಗ್ರಾ.ಪಂ ಸದಸ್ಯರಾದ ದಿವಾಕರ್, ಮಹೇಶ್, ರಿಜ್ವಾನ್, ವಿವಿಧ ಸಂಘಟನೆಗಳ ಮತ್ತು ರಾಜಕೀಯ ಪಕ್ಷಗಳ ಮುಖಂಡರುಗಳಾದ ಭೂಪಾಲ್, ಜನಾರ್ದನ್ .ಜೆ.ಆರ್, ಭಗವಾನ್, ವೀರಭದ್ರ, ಲೊಬೋ., ಶೋಭಿತ್ ಮತ್ತಿತರ ಪ್ರಮುಖರು ಹಾಗೂ ಪೊಲೀಸ್ ಸಿಬ್ಬಂದಿಗಳು ಸಭೆಯಲ್ಲಿ ಹಾಜರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: