ದೇಶಪ್ರಮುಖ ಸುದ್ದಿ

ಬಾಲಿವುಡ್ ಗಾಯಕಿ ಕನ್ನಿಕಾ ಕಪೂರ್ ಆಸ್ಪತ್ರೆಯಿಂದ ಡಿಸ್ಚಾರ್ಜ್

ನವದೆಹಲಿ,ಏ.6-ಕೊರೊನಾ ವೈರಸ್ ಸೋಂಕಿನಿಂದ ಬಳಲುತ್ತಿದ್ದ ಬಾಲಿವುಡ್ ಗಾಯಕಿ ಕನ್ನಿಕಾ ಕಪೂರ್ ಚಿಕಿತ್ಸೆ ನಂತರ ಗುಣಮುಖರಾಗಿದ್ದು, ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.

ಇಲ್ಲಿನ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕನ್ನಿಕಾ ಕಪೂರ್ ಅವರನ್ನು ಆರನೇ ಬಾರಿಗೆ ಪರೀಕ್ಷೆ ನಡೆಸಿದ ವೈದ್ಯರು ಕೊರೊನಾ ಸೋಂಕು ನೆಗೆಟಿವ್ ಎಂದು ಬಂದ ಕಾರಣ ಬಿಡುಗಡೆ ಮಾಡಿದ್ದಾರೆ. ಈ ಹಿಂದೆ ಅವರಿಗೆ ಐದು ಬಾರಿ ಪರೀಕ್ಷೆ ಮಾಡಿದ್ದರೂ, ಅಷ್ಟು ಬಾರಿಯೂ ಅವರಿಗೆ ಪಾಸಿಟಿವ್‌ ವರದಿ ಬಂದಿತ್ತು. 6ನೇ ಬಾರಿಗೆ ಮಾಡಿದ ಪರೀಕ್ಷೆಯಲ್ಲಿ ರಿಪೋರ್ಟ್ ನೆಗೆಟಿವ್​ ಬಂದಿದೆ.

ಕನ್ನಿಕಾ ಕಪೂರ್ ಮಾರ್ಚ್ ನಲ್ಲಿ ಲಂಡನ್‌ನಿಂದ ಭಾರತಕ್ಕೆ ಮರಳಿದ್ದರು. ಆದರೂ ಇದನ್ನು ಮುಚ್ಚಿಟ್ಟು ರಾಜಕೀಯ ನಾಯಕರು ಭಾಗವಹಿಸಿದ್ದ ಪಾರ್ಟಿ ಹಾಗೂ ಸಂಗೀತ ಕಾರ್ಯಕ್ರಮ ಸೇರಿದಂತೆ ಹಲವೆಡೆ ಸಂಚರಿಸಿದ್ದರು. ಕನ್ನಿಕಾ ಕಪೂರ್ ಗೆ ಶೀತ, ಜ್ವರ ಕಾಣಿಸಿಕೊಂಡಾಗ ವೈದ್ಯರನ್ನು ಸಂಪರ್ಕಿಸಿದ್ದರು. ವೈದ್ಯರು ತಕ್ಷಣ ಕೊರೊನಾ ಸೋಂಕು ಪರೀಕ್ಷೆ ನಡೆಸಿದ್ದರು. ಸೋಂಕು ತಗುಲಿರುವುದು ವರದಿಯಿಂದ ದೃಢಪಟ್ಟ ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಿ ಪ್ರತ್ಯೇಕ ಕೊಠಡಿಯಲ್ಲಿ ಚಿಕಿತ್ಸೆ ನೀಡಲಾಗಿತ್ತು.

ಈ ಸಂಬಂಧ ಕನ್ನಿಕಾಕಪೂರ್ ಕೊರೊನಾ ಸೋಂಕಿದ್ದರೂ ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಿ ಲಕನೌ ಪೊಲೀಸರು ಮೂರು ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕವಾಗಿ ಎಫ್ ಐಆರ್ ದಾಖಲಿಸಿಕೊಂಡಿದ್ದರು. ಈ ಸಂಬಂಧ ಕನ್ನಿಕಾ ಅವರನ್ನು ಭೇಟಿಯಾಗಿದ್ದ ಹಲವು ಮಂದಿ ವಿಐಪಿಗಳು ಸ್ವಯಂ ಕ್ರಾರಂಟೈನ್‌ಗೆ ಒಳಪಟ್ಟಿದ್ದರು.

ವಿಐಪಿಗಳಲ್ಲಿ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾರಾಜೇ, ಬಿಜೆಪಿ ಸಂಸದ ದುಶ್ಯಂತ ಸಿಂಗ್ ಸ್ವಯಂ ಕ್ವಾರಂಟೈನ್‌ಗೆ ಒಳಪಡಿಸಿಕೊಂಡ ಪ್ರಮುಖರು. (ಎಂ.ಎನ್)

Leave a Reply

comments

Related Articles

error: