ಮೈಸೂರು

ಲಾಕ್ ಡೌನ್ ಹಿನ್ನೆಲೆ : ಕಡುಬಡವರಿಗೆ ಜೈನ ಸಮುದಾಯದ ವತಿಯಿಂದ 1000 ಬಡ ಕುಟುಂಬಗಳಿಗೆ ಧವಸಧಾನ್ಯ ವಿತರಣೆ

ಮೈಸೂರು,ಏ.6:-  ಚಾಮರಾಜ ವಿಧಾನ ಸಭಾ ಕ್ಷೇತ್ರದ  ಶಾಸಕರಾದ   ಎಲ್. ನಾಗೇಂದ್ರ ಅವರು ಇಂದು  ಮೈಸೂರು ನಗರದ ಹಳ್ಳದಕೇರಿಯಲ್ಲಿ ಜೈನ ಸಮುದಾಯದ ಜೈನ ಮಂದಿರದಲ್ಲಿ ಜೈನ ಗುರುಗಳಾದ ನಯಾಚಂದ್ರ ಜೈನ್ ಹಾಗೂ ಅಜಿತ್ ಜೈನ್ ಅವರ ಆಶೀರ್ವಾದ ಪಡೆದು ಮಹಾವೀರ ಜಯಂತಿಯ ಸರಳ ಕಾರ್ಯಕ್ರಮದಲ್ಲಿ ಭಾಗವಹಿಸಿ ತದನಂತರ ಜೈನ ಸಮುದಾಯದ ವತಿಯಿಂದ 1000 ಬಡ ಕುಟುಂಬಗಳಿಗೆ ಉಚಿತ ಧವಸ ಧಾನ್ಯ ವಿತರಣೆ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು,

ಈ ಸಂದರ್ಭಲ್ಲಿ ಜೈನ ಸಮುದಾಯದ ಮುಖಂಡರುಗಳಾದ   ಶಾಂತಿಲಾಲ್ ಜೈನ್,   ಹಂಸರಾಜ್ ಜೈನ್, ನವಯುವಕ ಮಂಡಲದ ಅಧ್ಯಕ್ಷರಾದ   ಪ್ರವೀಣ್ ಜೈನ್,   ಪ್ರವೀಣ್ ಹರಣ್ ಮುಂತಾದವರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: