ಕರ್ನಾಟಕಪ್ರಮುಖ ಸುದ್ದಿ

ಉಡುಪಿ: ಹೋಂ ಕ್ವಾರಂಟೈನ್‌ ಉಲ್ಲಂಘಿಸಿದ ಕೊರೊನಾ ಸೋಂಕಿತನ ವಿರುದ್ಧ ಪ್ರಕರಣ ದಾಖಲು

ಉಡುಪಿ,ಏ.6-ಹೋಂ ಕ್ವಾರೆಂಟೈನ್ ನಲ್ಲಿರಬೇಕಾದವ ನಿಯಮ ಉಲ್ಲಂಘಿಸಿದ ಕಾಪು ತಾಲೂಕಿನ ಕೊರೊನಾ ಸೋಂಕಿತನ ವಿರುದ್ಧ ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ದುಬೈನಿಂದ ಆಗಮಿಸಿದ್ದ ಸೋಂಕಿತ ವ್ಯಕ್ತಿ ಆಸ್ಪತ್ರೆಗೆ ದಾಖಲಾಗುವವರೆಗೆ ಹಲವು ಬಾರಿ ಹೋಂ ಕ್ವಾರಂಟೈನ್ ಉಲ್ಲಂಘಿಸಿ ಸಾರ್ವಜನಿಕವಾಗಿ ಓಡಾಡಿದ್ದಾನೆ. ಈತನಿಗೆ ಕೊರೊನಾ ಸೋಂಕು ದೃಢಪಟ್ಟ ಬಳಿಕ ಈತನ ಸಂಪರ್ಕಕಕ್ಕೆ ಬಂದಿದ್ದ  ಪ್ರತಿಯೊಬ್ಬರನ್ನೂ ಗುರುತಿಸಿ ಹೋ ಕ್ವಾರಂಟೈನ್‌ ಮಾಡಲಾಗಿದೆ ಎಂದು ಡಿಎಚ್‌ಒ ಡಾ. ಸುಧೀರ್‌ಚಂದ್ರ ಸೂಡಾ ತಿಳಿಸಿದ್ದಾರೆ.

ಪ್ರಸ್ತುತ ಕೊರೊನಾ ಸೋಂಕಿತರಾಗಿರುವ ಮೂವರ ಆರೋಗ್ಯ ಉತ್ತಮವಾಗಿದೆ. ಜಿಲ್ಲೆಯಲ್ಲಿ 14 ದಿನಗಳ ಕ್ವಾರಂಟೈನ್‌ ಮುಕ್ತಾಯಗೊಳಿಸಿದವರನ್ನು ಮತ್ತೆ 14 ದಿನಗಳ ಅಬ್ಸರ್ವೇಶನ್‌ನಲ್ಲಿ ಇಡಲಾಗುವುದು. ಪ್ರಸ್ತುತ ಹೋಂ ಕ್ವಾರಂಟೈನ್‌ನಲ್ಲಿರುವವರು ಹೊರಗೆ ಓಡಾಡುವುದು ಕಂಡುಬಂದಲ್ಲಿ ಸಹಾಯವಾಣಿ ಸಂಖ್ಯೆ 9663957222, 9663950222ಗೆ ಮಾಹಿತಿ ನೀಡಬಹುದು. ಸಹಾಯವಾಣಿಗೆ ಇದುವರೆಗೆ 1,136 ಕರೆಗಳು ಬಂದಿವೆ. ಉಡುಪಿ ಜಿಲ್ಲೆಗೆ ಹೊರ ಜಿಲ್ಲೆ, ರಾಜ್ಯದಿಂದ ಬಂದವರ ಮೇಲೂ ಸಹ ಆರೋಗ್ಯ ಇಲಾಖೆ ನಿಗಾ ವಹಿಸಿದೆ ಎಂದರು.

ಜಿಲ್ಲೆಯಲ್ಲಿ ಇದುವರೆಗೆ 1,976 ಶಂಕಿತರನ್ನು ಗುರುತಿಸಿದ್ದು, 172 ಮಂದಿ 28 ದಿನಗಳ ಕ್ವಾರಂಟೈನ್‌ ಮತ್ತು 1,070 ಮಂದಿ 14 ದಿನಗಳ ಕ್ವಾರಂಟೈನ್‌ ಅವಧಿ ಮುಗಿಸಿದ್ದಾರೆ. ಪ್ರಸ್ತುತ 717 ಮಂದಿ ಹೋಂ ಕ್ವಾರಂಟೈನ್‌ ಮತ್ತು 87 ಮಂದಿ ಹಾಸ್ಪಿಟಲ್‌ ಕ್ವಾರಂಟೈನ್‌ನಲ್ಲಿದ್ದಾರೆ. 79 ಮಂದಿಯನ್ನು ಡಿಸ್ಚಾರ್ಜ್ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. (ಎಂ.ಎನ್)

Leave a Reply

comments

Related Articles

error: