ಮೈಸೂರು

ಯೋಗ, ಧ್ಯಾನ, ಪ್ರಾಣಾಯಾಮ ಪ್ರತಿಯೊಬ್ಬ ವ್ಯಕ್ತಿಯನ್ನು ದೈಹಿಕವಾಗಿ, ಮಾನಸಿಕವಾಗಿ ಗಟ್ಟಿ ಮಾಡಲಿದೆ : ಎಸ್. ಸಿದ್ದರಾಮಪ್ಪ

ಮೈಸೂರು,ಏ.6:- ಯೋಗ, ಧ್ಯಾನ, ಪ್ರಾಣಾಯಾಮ ಪ್ರತಿಯೊಬ್ಬ ವ್ಯಕ್ತಿಯನ್ನು ದೈಹಿಕವಾಗಿ, ಮಾನಸಿಕವಾಗಿ ಗಟ್ಟಿ ಮಾಡಲಿದೆ ಎಂದು ನೆಹರು ಯುವ ಕೇಂದ್ರದ ಜಿಲ್ಲಾ ಸಮನ್ವಯಾಧಿಕಾರಿ ಸಿದ್ದರಾಮಪ್ಪ ತಿಳಿಸಿದರು.

ಅವರಿಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಫೇಸ್ ಬುಕ್ ಪೇಜ್ ನಲ್ಲಿ ಕ್ವಾರೆಂಟೈನ್ ನಲ್ಲಿರುವ ಹಾಗೂ ಮನೆಯಲ್ಲಿಯೇ ಇರುವ ಜನರಿಗೆ ಮಾನಸಿಕ ಧೈರ್ಯ ತುಂಬುವ ಕೆಲಸ ಮಾಡಿದರಲ್ಲದೇ, ಈ ವೇಳೆ ಯಾವ ರೀತಿ ನಮ್ಮನ್ನು ನಾವು ಬ್ಯುಸಿಯಾಗಿಸಿಕೊಳ್ಳಬೇಕೆಂದು ತಿಳಿಸಿದರು.

ನೆಹರು ಯುವ ಕೇಂದ್ರ ಭಾರತ ಸರ್ಕಾರದ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯದ  ಒಂದು ಸ್ವಾಯತ್ತ ಸಂಸ್ಥೆ.  ಇದು ದೇಶದ 623 ಜಿಲ್ಲೆಗಳಲ್ಲಿ  ಯುವಜನರನ್ನು ಸಂಘಟನೆ ಮಾಡುವುದರಲ್ಲಿ ತೊಡಗಿದೆ.  ಮುಖ್ಯವಾಗಿ ಗ್ರಾಮೀಣ ಪ್ರದೇಶದಲ್ಲಿ ಹಾಗೂ ನಗರ ಪ್ರದೇಶದಲ್ಲಿ ಯುವಜನರನ್ನು ಯುವಕ ಸಂಘ, ಯುವತಿ ಮಂಡಳಿ, ಹಾಗೂ ಮಹಿಳಾ ಮಂಡಳಿ ಮೂಲಕವಾಗಿ ಅವರನ್ನು ಸಂಗಟನೆ ಮಾಡಿ ಹಲವಾರು ಪ್ರಕಾರದ ತರಬೇತಿ ನೀಡುವುದರೊಂದಿಗೆ ಅವರು ಸಾಂಸ್ಕೃತಿಕವಾಗಿ ಕ್ರೀಡೆಯಲ್ಲಿ, ಗ್ರಾಮೀಣಾಭಿವೃದ್ಧಿಯಲ್ಲಿ ತೊಡಗುವಂತೆ ಮಾಡುತ್ತೇವೆ ಎಂದರು.

ಈ ಒಂದು ಸಂಸ್ಥೆಯಲ್ಲಿ ನಾವು ಸಂಘ-ಸಂಸ್ಥೆಗಳನ್ನು ಯುವಕ ಮಂಡಳಗಳನ್ನು, ಮಹಿಳಾ ಮಂಡಳಗಳನ್ನು ಮಾಡುತ್ತಿದ್ದೇವೆ. ಕಳೆದ ಕೆಲವಾರು ದಿನಗಳಿಂದ ಮೈಸೂರು ಜಿಲ್ಲೆಯಾದ್ಯಂತ ಮೈಸೂರು ಜಿಲ್ಲಾಡಳಿತ ಕೊರೋನಾ ವೈರಸ್ ಸೋಂಕು ತಡೆಯ ಜಾಗೃತಿ ಕಾರ್ಯಕ್ರಮ ಮಾಡುತ್ತಿದೆ. ಆ ಕಾರ್ಯಕ್ರಮದಲ್ಲಿ ಮುಖ್ಯವಾಗಿ ನಾವು ನಮ್ಮ ಸಮುದಾಯ  ಲಾಕ್ ಡೌನ್  ಅವಧಿಯಲ್ಲಿ ಮುಖ್ಯವಾಗಿ ಕ್ವಾರೆಂಟೈನ್ ಏನಿದ್ದಾರೆ ಅವರು ತಮ್ಮ ಸಮಯ ಮತ್ತು ಒತ್ತಡವನ್ನು ಯಾವ ರೀತಿ ಕಡಿಮೆ ಮಾಡಿಕೊಳ್ಳಬೇಕು ಎನ್ನುವುರ ಬಗ್ಗೆ ಜಿಲ್ಲಾಡಳಿತದ ಮಾರ್ಗದರ್ಶನದಲ್ಲಿ ಮೈಸೂರು ಜಿಲ್ಲೆಯ ವಾರ್ತಾ ಮತ್ತು ಸಂಪರ್ಕ ಇಲಾಖೆ  ಕಾರ್ಯಕ್ರಮ ಹಮ್ಮಿಕೊಂಡಿದೆ. ಆ ಕಾರ್ಯಕ್ರಮ ಸರಣಿಯ ಮೊದಲನೇ ವಿಷಯದ ಕುರಿತು ಮಾತನಾಡುತ್ತಿದ್ದೇನೆ. ಇಲ್ಲಿ ಮುಖ್ಯವಾಗಿ ನಮ್ಮ ಸಮಯವನ್ನು ಹೇಗೆ ಹೊಂದಾಣಿಕೆ ಮಾಡಿಕೊಳ್ಳಬೇಕು? ಒತ್ತಡದಲ್ಲಿ ನಮ್ಮನ್ನು ನಾವು ಹೇಗೆ ಹೊಂದಾಣಿಕೆ ಮಾಡಿಕೊಂಡು ಈ ಒತ್ತಡದಿಂದ ಹೊರಬಂದು ಆದಷ್ಟು ಸಂತಸಮಯವಾಗಿ ಮಾಡಿಕೊಳ್ಳಬೇಕು ಎಂಬುದರ ಕುರಿತು ತಿಳಿಸಿದರು.

ದೈಹಿಕವಾಗಿ  ಮತ್ತು ಮಾನಸಿಕವಾಗಿ ತುಂಬಾ ಬ್ಯುಸಿಯಾಗಬೇಕು. ಅಂದರೆ ಸರಳವಾದ ಅರ್ಥದಲ್ಲಿ ನಾವು ಬಿಡುವಾಗಿರುವ ಸಮಯದಲ್ಲಿ ಬ್ಯುಸಿಯಾಗಬೇಕು.ಬಾಕಿ ಸಮಯದಲ್ಲಿ ನಾವು ಬ್ಯುಸಿಯಾಗಿರ್ತೇವೆ. ಹೊಲಗಳಲ್ಲಿ, ಕಛೇರಿಗಳಲ್ಲಿ, ಬ್ಯುಸಿಯಾಗಿರ್ತೇವೆ. ಆದರೆ ಇದು ವಿಚಿತ್ರ ಸನ್ನಿವೇಶ. ಈ ಸಮಯದಲ್ಲಿ ನಾವು ಬ್ಯುಸಿಯಾಗಬೇಕು ಅದಕ್ಕೆ ಬಾಲ್ಯದ ಸ್ನೇಹಿತರನ್ನು ಗುರುತಿಸಿ ಮಾತಾಡಬೇಕು, ಕಾಲೇಜು ಸ್ನೇಹಿತರ ಜೊತೆ ಗುರುತಿಸಿ ಮಾತನಾಡಬೇಕು. ಭಾವನಾತ್ಮಕ ಸಂಬಂಧ ಬಲಪಡಿಸತ್ತೆ. ಮುಖ್ಯವಾದ ಪುಸ್ತಕಗಳನ್ನು ಓದಬೇಕು. ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಎಲ್ಲ ವಿಚಾರಗಳು ನ್ಯೂಸ್ ಪೇಪರ್ ನಲ್ಲಿರುತ್ತವೆ.ಅದನ್ನು ಓದಬೇಕು. ಹಲವಾರು ವಿಚಾರಗಳನ್ನು ಬಂದುಬಳಗದವರಲ್ಲಿ, ಸ್ನೇಹಿತರ ಬಳಿ ಹಂಚಿಕೊಳ್ಳೋದಿಕ್ಕೆ ಸಾಧ್ಯ. ಎಷ್ಟೋ ದಿನ ಅಡಿಗೆ ಮನೆ ಹೋಗಿರಲ್ಲ. ಗಾರ್ಡನ್ ಕೆಲಸ ಮಾಡಲು ಸಾಧ್ಯವಾಗಿರಲ್ಲ. ಆ ಕೆಲಸಗಳನ್ನು ಪ್ಲಾನ್ ಮಾಡಿಕೊಂಡು ನಮ್ಮನ್ನು ನಾವು ಬ್ಯುಸಿ ಮಾಡ್ಕೊಂಡು ಸಮಯ ಕಳೆಯಬಹುದು. ಸಂಗೀತ ಕೇಳುವ ಆಸಕ್ತಿ ಇರತ್ತೆ.  ಕೆಲಸವರಿಗೆ ಚಿತ್ರ ಕಲೆಯಲ್ಲಿ ಆಸಕ್ತಿ ಇರತ್ತೆ. ಇದು ಒಳ್ಳೆಯ ಸಮಯ, ನಾವು ಬರೆದ ಕವನಗಳನ್ನು ಕಥೆಗಳನ್ನು ಸ್ನೇಹಿತರ ಗ್ರೂಪ್ ನಲ್ಲಿ ಶೇರ್ ಮಾಡಿಕೊಳ್ಳಬಹುದು. ಯಾಂತ್ರಿಕ ಜೀವನದಲ್ಲಿ ಮುಳುಗಿರುತ್ತೇವೆ. ಒಂದಷ್ಟು ಆನ್ ಲೈನ್ ಕೋರ್ಸ್ ಗಳನ್ನು ಕೂಡ ಮಾಡಬಹುದು. ವಿಚಾರಗಳನ್ನು ಆನ್ ಲೈನ್ ನಲ್ಲಿ ಸ್ನೇಹಿತರ ಜೊತೆ ಶೇರ್ ಮಾಡಿಕೊಳ್ಳಲು ಸಾಧ್ಯವಾಗಲಿದೆ. ನಾಳೆ ನಾನು ಏನು ಮಾಡಬೇಕೆಂದು ಪ್ಲಾನ್ ಮಾಡಬೇಕು. ದೈಹಿಕ ಚಟುವಿಕೆಗಳಾದ ಯೋಗ, ಧ್ಯಾನ, ಪ್ರಾಣಾಯಾಮ ಮಾಡಬೇಕು.   ಯೋಗ, ಧ್ಯಾನ, ಪ್ರಾಣಾಯಾಮ ಪ್ರತಿಯೊಬ್ಬ ವ್ಯಕ್ತಿಯನ್ನು ದೈಹಿಕವಾಗಿ, ಮಾನಸಿಕವಾಗಿ ಗಟ್ಟಿ ಮಾಡಲಿದೆ.  ದೈಹಿಕ ಚಟುವಟಿಕೆಗಳಿಗೆ ಪೂರಕವಾಗಿ ಆರೋಗ್ಯಯುತ ಆಹಾರ ಸೇವನೆ ಕೂಡ ಮುಖ್ಯ. ಸಂದಿಗ್ಧ ಸನ್ನಿವೇಶದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಹವ್ಯಾಸ ರೂಢಿಸಿಕೊಳ್ಳಬೇಕು. ಸಾಧ್ಯವಾದಷ್ಟು ಬೆಳಗಿನ ವೇಳೆ ಬಿಸಿ ನೀರನ್ನು ಕುಡಿಯಬೇಕು. ಮಾಡುವ ಅಡಿಗೆಯಲ್ಲಿ ಅರಿಶಿನ, ಜೀರಿಗೆ, ಕೊತ್ತಂಬರಿ ಹೇರಳವಾಗಿ ಬಳಸಬೇಕು. ಹೀಗೆ ಹಲವಾರು ಟಿಪ್ಸ್ ಗಳನ್ನು ನೀಡಿದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: