ಮೈಸೂರು

ಕೀಳನಪುರ ಗ್ರಾ.ಪಂ ವ್ಯಾಪ್ತಿಯಲ್ಲಿ ಮಾಸ್ಕ್ ವಿತರಣೆ

ಮೈಸೂರು,ಏ.6:- ಮೈಸೂರಿನಲ್ಲಿ 10 ಸಾವಿರ ಮಾಸ್ಕ್ ವಿತರಣೆ ಮಾಡಲಾಗುತ್ತಿದ್ದು, ಇಂದಿನಿಂದ ಕೀಳನಪುರ ಗ್ರಾ.ಪಂ ವ್ಯಾಪ್ತಿಯಲ್ಲಿ ಮಾಸ್ಕ್ ವಿತರಣೆಗೆ ಚಾಲನೆ ನೀಡಲಾಯಿತು.

ವರುಣಾ ಕ್ಷೇತ್ರದ ಕೀಳನಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಗ್ರಾ.ಪಂ, ಹಾಲು ಉತ್ಪಾದಕರ ಸಂಘ ಮತ್ತು ಸಂಘದ ನೇತೃತ್ವದಲ್ಲಿ ಕೀಳನುಪುರ ಗ್ರಾಮದ ಪ್ರತಿಯೊಬ್ಬರಿಗೂ ಮಾಸ್ಕ್ ನೀಡಲು ನಿರ್ಧರಿಸಲಾಗಿದೆ. 9ಸಾವಿರಕ್ಕೂ ಹೆಚ್ಚು ಜನರನ್ನು    ಕೀಳನಪುರ ಗ್ರಾಮ ಹೊಂದಿದೆ. ಈ‌ ಹಿನ್ನಲೆಯಲ್ಲಿ ಪ್ರತಿಯೊಬ್ಬರಿಗೂ ಮಾಸ್ಕ್ ವಿತರಣೆ ಮಾಡಲಾಗಿದೆ. ಇಓ ಕೃಷ್ಣಕುಮಾರ್ ನೇತೃತ್ವದಲ್ಲಿ ಮಾಸ್ಕ್ ವಿತರಣೆ ಮಾಡಲಾಗಿದ್ದು, ಮಾಸ್ಕ್ ವಿತರಣೆಗೆ ಸ್ವಯಂ ಸೇವಕರು, ಗ್ರಾಮದ ಯುವಕರನ್ನು ಬಳಕೆ ಮಾಡಿಕೊಳ್ಳಲಾಗಿದೆ. ಈ ವೇಳೆ ಯುವಕರು  ಸಾಮಾಜಿಕ ಅಂತರದ ಬಗ್ಗೆಯೂ ಅರಿವು ಮೂಡಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: