ಕರ್ನಾಟಕಪ್ರಮುಖ ಸುದ್ದಿ

ಏಪ್ರಿಲ್ 17 ರಂದೇ ನಿಖಿಲ್-ರೇವತಿ ಮದುವೆ: ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು,ಏ.6-ನಟ ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ಅವರ ವಿವಾಹ ಮಹೋತ್ಸವ ಏಪ್ರಿಲ್ 17 ರಂದೇ ನಡೆಯಲಿದೆ.

ಈ ಬಗ್ಗೆ ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ನಿಖಿಲ್ ಮತ್ತು ರೇವತಿ ವಿವಾಹ ಈ ಹಿಂದೆ ನಿಶ್ಚಯಿಸಿದಂತೆ ಏ.17ರಂದೇ ನಡೆಯಲಿದೆ. ಮನೆಯ ಆವರಣದಲ್ಲೇ ಸರಳವಾಗಿ ಮದುವೆ ನಡೆಯಲಿದೆ ಎಂದರು.

ಲಾಕ್ ಡೌನ್ ಹಿನ್ನೆಲೆಯಲ್ಲಿ ಜನರ ನಡುವೆ ಮದುವೆ ಮಾಡಲು ಆಗದು. ಎರಡೂ ಕುಟುಂಬ ಸದಸ್ಯರು ಮಾತ್ರ ಸೇರಿ ಅಂದೇ ಮದುವೆ ಶಾಸ್ತ್ರ ಮುಗಿಸುತ್ತೇವೆ. ಮುಂದೆ ಅವಕಾಶ ಸಿಕ್ಕರೆ ರಾಮನಗರದಲ್ಲಿ ಕಾರ್ಯಕ್ರಮ ಆಯೋಜಿಸುತ್ತೇವೆ ಎಂದು ಹೇಳಿದ್ದಾರೆ.

ನಿಖಿಲ್ ಮತ್ತು ರೇವತಿಯವರ ನಿಶ್ಚಿತಾರ್ಥ ಫೆ.10 ರಂದು ಅದ್ಧೂರಿಯಾಗಿ ನಡೆದಿತ್ತು. ನಿಖಿಲ್ ಮದುವೆಯನ್ನು ಚೆನ್ನಪಟ್ಟಣದ ಜಾನಪದ ಲೋಕದಲ್ಲಿ ಅದ್ಧೂರಿಯಾಗಿ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದರು. ಆ ಸ್ಥಳದಲ್ಲಿ ಪೂಜೆ ಮಾಡಿದ್ದರು. ಕಲ್ಯಾಣ ಮಂಟಪದ ಅದ್ದೂರಿ ಸೆಟ್ ನಿರ್ಮಾಣಕ್ಕೆ ಗುದ್ದಲಿ ಪೂಜೆ ಮಾಡಲಾಗಿತ್ತು. ವಾಸ್ತು ಪ್ರಕಾರ ಕೂಡ ಕಲ್ಯಾಣ ಮಂಟಪ ನೋಡಿ ನಿಗದಿ ಮಾಡಲಾಗಿತ್ತು. ಖ್ಯಾತ ವಾಸ್ತುತಜ್ಞರು, ಜ್ಯೋತಿಷಿಗಳು, ಶಾಸ್ತ್ರಿಗಳಿಂದ ಆ ಜಾಗಕ್ಕೆ ವಿಶೇಷ ಪೂಜೆ ಮಾಡಲಾಗಿತ್ತು. 8 ಲಕ್ಷ ಮದುವೆಯ ಮಮತೆಯ ಕರೆಯೋಲೆ ಕೂಡ ಸಿದ್ಧವಾಗಿತ್ತು. ಈಗಾಗಲೇ ಹಲವರಿಗೆ ನಿಖಿಲ್-ರೇವತಿ ಕಲ್ಯಾಣದ ಆಹ್ವಾನ ಪತ್ರಿಕೆ ಹೋಗಿತ್ತು. (ಎಂ.ಎನ್)

Leave a Reply

comments

Related Articles

error: