ಮೈಸೂರು

ಹಾಡು ಹೇಳಿ ಜನರಲ್ಲಿ ಕೊರೋನಾ ವೈರಸ್ ಕುರಿತು ಟ್ರಾಫಿಕ್ ಇನ್ಸಪೆಕ್ಟರ್ ಮುನಿಯಪ್ಪ ಜಾಗೃತಿ

ಮೈಸೂರು,ಏ.6:- ಮಾರಕ ವೈರಸ್ ಕೊರೋನಾ ಸೋಂಕು ಹರಡುವುದನ್ನು ತಡೆಯಲು, ಜನತೆ ಮನೆಯಿಂದ ಹೊರಗೆ ಬರುವುದನ್ನು ತಪ್ಪಿಸಲು ಪೊಲೀಸರು ನಾನಾ ರೀತಿಯ ಕಸರತ್ತು ನಡೆಸುತ್ತಿದ್ದಾರೆ.

ಮೈಸೂರು ದೇವರಾಜ ಸಂಚಾರ ಪೊಲೀಸ್ ಠಾಣೆಯ ಟ್ರಾಫಿಕ್ ಇನ್ಸಪೆಕ್ಟರ್ ಮುನಿಯಪ್ಪ ಅವರು ಹಾಡು ಹೇಳುವ ಮೂಲಕ ಜನರಲ್ಲಿ ಕೊರೋನಾ ವೈರಸ್ ಹರಡುವುದನ್ನು ತಡೆಯುವಂತೆ ವಿನೂತನವಾಗಿ ಜಾಗೃತಿ ಮೂಡಿಸುತ್ತಿದ್ದಾರೆ.  ‘ ಕೊರೋನಾ ನ ಓಡಿಸೋಣ, ಕೊರೋನನಾ ಅಳಿಸೋಣ, ನಿಮ್ಮಿಂದಲೇ ಅದು ಸಾಧ್ಯ, ಎಂಬುವುದು  ತಿಳಿದಿರಲಿ, ದೂರ ದೂರನೇ ನಿಲ್ಲಬೇಕು, ಕೈಕಾಲೆಲ್ಲ ತೊಳಿಬೇಕು, ಮುಖಕ್ಕೆ ಮಾಸ್ಕ್ ನ್ನು ಹಾಕಬೇಕು, ಜಾಗೃತಿ ಮಾಡಬೇಕು’,  ಬಿಸಿ ನೀರನ್ನೇ ಕುಡಿಯಬೇಕು, ತಂಪು ಪಾನೀಯ ಬಿಡಬೇಕು, ಬಿಸಿ ಆಹಾರ ತಿನ್ನಬೇಕು, ಮನೆಯಲ್ಲೇ ಇರಬೇಕು. ನೀವೆಲ್ಲರು ನಮ್ಮವರೇ, ನಮ್ಮ ಮಾತನ್ನು ಕೇಳಿರಿ’ ಎಂದು ಪ್ರೀತಿಯಿಂದ ಹಾಡುವ ಮೂಲಕ ಜನತೆಯನ್ನು ಮನೆಯಲ್ಲೇ ಕಟ್ಟಿ ಹಾಕಲು ಯತ್ನಿಸುತ್ತಿದ್ದಾರೆ. ಪೊಲೀಸರ ಜನಪರ ಕಾಳಜಿ ಮೆಚ್ಚಲೇ ಬೇಕು.

ಆದರೆ ಕೆಲವು ಜನರು ಮಾತ್ರ ಯಾರಿಗೋ ಕೊರೋನಾ ಬಂದರೆ ನಮಗೇನು ಎಂದು ಅಸಡ್ಡೆಯಿಂದ ಲಾಕ್ ಡೌನ್ ಉಲ್ಲಂಘನೆ ಮಾಡೋದು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಇರುವುದು, ಸುಖಾಸುಮ್ಮನೆ ಮನೆಯಿಂದ ಹೊರಗೆ ಬಂದು ಅಡ್ಡಾಡುವುದನ್ನು ಮುಂದುವರಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: