ಮೈಸೂರು

ಬಡವರಿಗೆ ಸಹಾಯ ಹಸ್ತ ನೀಡುವ ಮೂಲಕ ಮಹಾವೀರ ಜಯಂತಿ ಆಚರಣೆ

ಮೈಸೂರು,ಏ.6:- ಮಹಾವೀರ ಜಯಂತಿ ಪ್ರಯುಕ್ತ ಸ್ಥಾನಕ ವಾಸಿ ಜೈನ್ ಯುವ ಸಂಘಟನೆ ಇವರ ಆಶ್ರಯದಲ್ಲಿ ಮೈಸೂರಿನ ವಿದ್ಯಾರಣ್ಯಪುರಂ ನಲ್ಲಿರುವ ಜೈನ್ ಮಂದಿರದಲ್ಲಿಂದು ನೂರಾರು ಬಡ ಕುಟುಂಬ ಗಳಿಗೆ, ಮೈಸೂರು ಮಹಾನಗರ ಪಾಲಿಕೆ ಸದಸ್ಯರಾದ ಮಾ. ವಿ. ರಾಮಪ್ರಸಾದ್ ಅವರ ನೇತೃತ್ವದಲ್ಲಿ ಅಕ್ಕಿ, ಬೇಳೆ, ರವೆ, ಅಡಿಗೆ ಎಣ್ಣೆ, ಉಪ್ಪು, ಮಸಾಲೆ ಸಾಮಾನುಗಳು, ಟೀ ಪೌಡರ್ ಪದಾರ್ಥಗಳನ್ನು ಹಾಕಿರುವ ಬಾಕ್ಸ್ ಗಳನ್ನು ನೀಡಲಾಯಿತು.

ಯುವ ಸಂಘದ ವತಿಯಿಂದ ಯರಗನಹಳ್ಳಿ , ಸಿಐಟಿಬಿ ಛತ್ರ, ಸಿದ್ದಾರ್ಥ ನಗರ, ನಜರ್ ಬಾದ್ , ವಿದ್ಯಾರಣ್ಯಪುರಂ ಸೇರಿದಂತೆ ಒಟ್ಟು 1500 ಕುಟುಂಬಗಳಿಗೆ ನೀಡಲಾಯಿತು.

ಬಳಿಕ ಮಾತನಾಡಿದ ಮಾ.ವಿ.ರಾಂಪ್ರಸಾದ್ ಮಹಾವೀರ್ ಜಯಂತಿಯನ್ನು   ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ, ಕಷ್ಟದಲ್ಲಿರುವ ಸಂದರ್ಭದಲ್ಲಿ ಈ ರೀತಿ ಸಹಾಯ ಮಾಡುತ್ತಿರುವುದು ತ್ಯಾಗ ಬಲಿದಾನದ ಸಂಕೇತವಾಗಿರುವ ಮಹಾವೀರರ ಜಯಂತಿಗೆ ಅರ್ಥ ತಂದಿದೆ, ಇದೇ ರೀತಿ ಉಳ್ಳವರು, ಸಿರಿವಂತರು ಬಡವರ ಬಗ್ಗೆ ಕಾಳಜಿ ವಹಿಸಿ ಸಹಾಯ ಮಾಡಬೇಕು ಆಗ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷರಾದ ಸಿ.ಕೆ.ಮಹೇಂದ್ರ    ಭಾಗವಹಿಸಿ ಮಾತನಾಡಿ ಜೈನ್ ಸಂಘಟನೆ ಯಾವತ್ತೂ ಸಹ ಈ ಬಡವರಿಗೆ ಸಹಾಯ ಹಸ್ತ ಚಾಚುವ ಕೆಲಸವನ್ನು ಮಾಡುತ್ತಿದೆ ಎಂದು ಪ್ರಶಂಸಿಸಿದರು.

ಕಾರ್ಯಕ್ರಮದಲ್ಲಿ ಜೈನ್ ಸಂಘದ ಅಧ್ಯಕ್ಷರಾದ ರಾಜನ್ ಬಾಗ್ಮರ್, ದೀಪಕ್ ಬೊಹರಾ, ಮನೋಹರ್ ಸಂಕ್ಲಾ, ರಾಜೇಶ್ ಬಾಂಟಿಯ, ಕಿರಣ್ ಸಾಲೀಚಾ, ಕಮಲ ಕಿಶೋರ್, ಸುಭಾಷ್ ಚಂದ್ ಧೋಕಾ , ಮೋಹನ್ ಲಾಲ್ ಕೊಠಾರಿ, ಮಹಾವೀರ್ ಕಮಲ್ ಜೈನ್ ಮುಂತಾದವರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: