ಮೈಸೂರು

ಹೋಂಕ್ವಾರೆಂಟೈನ್ ನಲ್ಲಿರುವವರು ಮನೆಯ ಮುಂದೆ ಅಂಟಿಸಿದ ಸ್ಟಿಕ್ಕರ್ ಕಿತ್ತು ಹಾಕಿದರೆ ಕ್ರಿಮಿನಲ್ ಕೇಸ್ ದಾಖಲು : ಅಭಿರಾಮ್ ಜಿ.ಶಂಕರ್ ಎಚ್ಚರಿಕೆ

ಮೈಸೂರು,ಏ.6:- ನಂಜನಗೂಡಿನಲ್ಲಿ ಹೋಂಕ್ವಾರೆಂಟೈನ್ ನಲ್ಲಿರುವವರು ಮನೆಯ ಮುಂದೆ ಅಂಟಿಸಿದ ಸ್ಟಿಕ್ಕರ್ ಕಿತ್ತು ಹಾಕಿದ್ದಾರೆ. ಮತ್ತೆ ಅಂಟಿಸಿದರೆ ಮತ್ತೆ ಕಿತ್ತು ಹಾಕಿದಾರೆ. ನಂಜನಗೂಡಿನ ಕೆಲವು ಮನೆಗಳಲ್ಲಿ ಈ ರೀತಿ ಕಂಡು ಬಂದಿದೆ. ಇದು ಲಾಸ್ಟ್ ವಾರ್ನಿಂಗ್ ಮನೆಯ ಮುಂದೆ ಕ್ವಾರೆಂಟೈನ್ ಗೆ ಸಂಬಂಧಿಸಿ ಅಂಟಿಸಿದ ಸ್ಟಿಕ್ಕರ್ ಕಿತ್ತು ಹಾಕಿದರೆ ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು  ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಎಚ್ಚರಿಕೆ ನೀಡಿದರು.

ವಾರ್ತಾ ಮತ್ತು ಸಂಪರ್ಕ ಇಲಾಖೆಯ ಫೇಸ್ ಬುಕ್ ಪೇಜ್ ನಲ್ಲಿ ನೇರ ಮಾಹಿತಿ ನೀಡಿದ ಅವರು ನಿಮ್ಮ ಮತ್ತು ನಿಮ್ಮ ಪ್ರಾಂತ್ಯದಲ್ಲಿರುವ ಜನರ ಸುರಕ್ಷತೆಗೆ ಸ್ಟಿಕ್ಕರ್ ಅಂಟಿಸುವುದಾಗಿದೆ. ಅದನ್ನು ನಿಮ್ಮಿಷ್ಟಕ್ಕೆ ಕಿತ್ತು ಹಾಕಲು ನಿಮಗೆ ಅಧಿಕಾರವಿಲ್ಲ. ಆರೋಗ್ಯ ಇಲಾಖೆಯವರು, ಸಂಬಂಧಪಟ್ಟ ಅಧಿಕಾರಿಗಳು ಬಂದು ಕಿತ್ತು ಹಾಕಬಹುದು. ಹೋಂ ಕ್ವಾರೆಂಟೈನ್ ಮುಗಿದಿದೆ ಅಂತಲೂ ಅದನ್ನು ಕೀಳಬೇಡಿ. ಮತ್ತೆ ಹದಿನಾಲ್ಕು ದಿನ ನಿಗಾ ಇಡಲಿದ್ದು, ದೇಶಾದ್ಯಂತ ಹದಿನಾಲ್ಕು ದಿನ ಮುಗಿದ ಮೇಲೆಯೂ ಪಾಸಿಟಿವ್ ಆಗುವ ಪರಿಸ್ಥಿತಿ ಕಂಡು ಬಂದಿದೆ ಎಂದರು.

ಮೈಸೂರಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 35ಕ್ಕೇರಿದೆ. ಇಂದು 7ಪ್ರಕರಣಗಳು ದೃಢಪಟ್ಟಿವೆ. ಮೂರು ಮಂದಿ ಪಾಸಿಟಿವ್ ತಬ್ಲಿಘ್ ಜಮಾತ್ ನಲ್ಲಿ ಪಾಲ್ಗೊಂಡವರ ಜೊತೆ ಸಂಪರ್ಕದಲ್ಲಿದ್ದವರು  ಪಾಸಿಟಿವ್ ಆಗಿದ್ದಾರೆ.  ಆದರೆ ಇವರು ದೆಹಲಿ ನಿವಾಸಿಗಳಲ್ಲ. ಬೆಂಗಳೂರು, ಮಂಡ್ಯ ಬೇರೆ ಬೇರೆ ಕಡೆ ಓಡಾಡಿದ್ದಾರೆ.  ಉಳಿದಿಬ್ಬರು ಜ್ಯುಬಿಲಿಯೆಂಟ್ ಕಾರ್ಖಾನೆ ಉದ್ಯೋಗಿ, ಸಂಪರ್ಕದಲ್ಲಿರುವವರು, 2ನೇ ಪಾಸಿಟಿವ್ ಕೇಸ್ ಹತ್ತಿರದ ಸಂಬಂಧಿಕರು ನಿಗಾದಲ್ಲಿದ್ದವರು ಪಾಸಿಟಿವ್ ಆಗಿದ್ದಾರೆ, ಓರ್ವರು ದುಬೈನಿಂದ ಮರಳಿದವರು ಎಂದು ತಿಳಿಸಿದರು.

ಇಂದು 2902ಮಂದಿ ಅಬ್ಸರ್ವೇಶನ್ ನಲ್ಲಿದ್ದಾರೆ. 2ನೇ ವಾರ ಹೋಕ್ವಾರೆಂಟೈನ್ ಮುಗಿಸಿದವರು 1533 ಅರ್ಧಕ್ಕಿಂತ ಹೆಚ್ಚು ಮಂದಿ ಕಂಪ್ಲೀಟ್ ಮಾಡಿದ್ದಾರೆ.  ಇವತ್ತಿನ ಡೇಟಿಗೆ ಐಸೋ;ಲೇಶನ್ ನಲ್ಲಿ ಕಂಟಿನ್ಯೂ ಆಗುವವರು 1334ಮಂದಿ ಜ್ಯುಬಿಲಿಯೆಂಟ್ ಗೆ ಸಂಬಂಧಿಸಿದವರು ಎಂದರು.

ಷಬ್ ಎ ಬರಾತ್ ಅದ್ಧೂರಿ ಆಚರಣೆ ಮಾಡದಂತೆ ಮನವಿ

ಏ.9ರಂದು ಷಬ್ ಎ ಬರಾತ್ ಹಬ್ಬ ನಡೆಯಲಿದ್ದು, ಅದ್ಧೂರಿ ಆಚರಣೆ ಆಗತ್ತೆ.  ಆದರೆ ಈ ಬಾರಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಹೆಚ್ಚು ಜನ ಸೇರಬಾರದೆಂಬ ದೃಷ್ಟಿಯಲ್ಲಿ ಅವರವರ ಮನೆಗಳಲ್ಲಿ ಪ್ರಾರ್ಥನೆ ಮಾಡಿ ಆಚರಣೆ ಮಾಡಿಕೊಳ್ಳಬೇಕೆಂದು ವಕ್ಫ್ ಬೋರ್ಡ್ ನಿಂದ ಸೂಚನೆ ಬಂದಿದೆ.  ಆರೋಗ್ಯದ ದೃಷ್ಟಿಯಿಂದ ಮನೆಯಲ್ಲಿಯೇ ಪ್ರಾರ್ಥನೆ ಮಾಡುವಂತೆ ಜಿಲ್ಲಾ ವಕ್ಫ್ ಅಧಿಕಾರಿಗಳು ಜಾರಿಗೆ ತರಬೇಕೆಂದು ಸೂಚನೆ ಕೊಟ್ಟಿದ್ದಾರೆ. ಈ ಬಾರಿ ವಿಶೇಷ ಸನ್ನಿವೇಶ ಇರುವುದರಿಂದ ಮನೆಯಲ್ಲಿಯೇ ಮಾಡಿಕೊಳ್ಳಿ ಎಂದು ತಿಳಿಸಿದರು.

ಪಡಿತರ ಎಲ್ಲರಿಗೂ ಸಿಗತ್ತೆ ಆತಂಕ ಬೇಡ

ಪಡಿತರ ಮನೆಮನೆಗೂ ಹಂಚುವುದು ಆರಂಭವಾಗಿದೆ.  ಮನೆಗೆ ಬರ್ತಿಲ್ಲ ಅಂತ ಸ್ಥಳಕ್ಕೆ ಬಂದು ನೂಕು ನುಗ್ಗಲು ಮಾಡಿ ಮೈಮೇಲೆ ಬೀಳುತ್ತಿದ್ದಾರೆ  ಅಂತ ಹೇಳಲಾಗ್ತಿದೆ. ಮೈಮೇಲೆ ಬೀಳಬೇಡಿ. ಅಂತರ ಕಾಪಾಡಿಕೊಳ್ಳಿ. ಜಿಲ್ಲೆಯಲ್ಲಿ 30%ಪಡಿತರ ಹಂಚಲಾಗಿದೆ. ಯಾರೂ ಮಿಸ್ ಯೂಸ್ ಮಾಡಿಕೊಳ್ಳಲ್ಲ. ಪಾರದರ್ಶಕವಾಗಿರಲಿದೆ. ಎಲ್ಲರಿಗೂ ಪಡಿತರ ಸಿಗಲಿದೆ ಎಂದು ಸ್ಪಷ್ಟಪಡಿಸಿದರು . (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: