ಮೈಸೂರು

ಹೋಂ ಕ್ವಾರೆಂಟೈನ್ ನಲ್ಲಿರುವವರಿಗೆ ಹಾಲುಕೊಡದಿರುವುದು, ತರಕಾರಿ ಕೊಡದಿರುವುದು ಮಾಡಿದರೆ ಕಠಿಣ ಕ್ರಮ : ಸಿ.ಬಿ.ರಿಷ್ಯಂತ್ ಎಚ್ಚರಿಕೆ

ಮೈಸೂರು,ಏ.6:-ಹೋಂ ಕ್ವಾರೆಂಟೈನ್ ನಲ್ಲಿರುವವರಿಗೆ ಹಾಲುಕೊಡದಿರುವುದು, ತರಕಾರಿ ಕೊಡದಿರುವುದು, ಇಲ್ಲಿ ಬರಬೇಡಿ ಅಂತ ಹೇಳಿ ಕಳುಹಿಸುವುದು ಮಾಡಿದರೆ ಅಂತಹವರ ಮೇಲೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಎಚ್ಚರಿಸಿದರು.

ಅವರಿಂದು ವಾರ್ತಾ ಮತ್ತು ಸಂಪರ್ಕ ಇಲಾಖಾ ಫೇಸ್ ಬುಕ್ ಫೇಜ್ ನಲ್ಲಿ ನೇರ ಮಾಹಿತಿ ನೀಡಿದ್ದು, ಕೆಲವು ಕಡೆ ನಮಗೆ ದೂರು ಬಂದಿದೆ. ಪ್ರೈಮರಿ ಕಾಂಟೆಕ್ಟ್ ಇರ್ತಾರೆ.   ಸೋಂಕಿತರಾಗಿರಬಹುದುದೆಂಬ ಅನುಮಾನದ ಮೇಲೆ ಕ್ವಾರೆಂಟೈನ್ ಮೇಲೆ ಇರ್ತಾರೆ ಅವರಿಗೆ ತರಕಾರಿ ಕೊಡದಿರುವುದು, ಹಾಲು ಕೊಡದಿರುವುದು, ಇಲ್ಲಿ ಬರಬೇಡಿ ಹೋಗಿ ಎಂದು ಕಳುಹಿಸುವುದು ಎಲ್ಲ ಮಾಡ್ತಿದ್ದಾರೆ. ಇಂತದ್ದೆಲ್ಲ ದೂರು ಬಂದಿದೆ. ಇದೆಲ್ಲ ಯಾರೂ ಮಾಡಬೇಡಿ. ಹಾಗೆಲ್ಲ ಮಾಡಿದರೆ ಸ್ಟ್ರಿಕ್ಟ್ ಆ್ಯಕ್ಷನ್ ತಗೋತೆವೆ ಎಂದು ಎಚ್ಚರಿಕೆ ನೀಡಿದರು.

ಪಾಸಿಟಿವ್ ಇರೋರು ಆಸ್ಪತ್ರೆಯಲ್ಲಿ ಶಿಫ್ಟ್ ಆಗಿರ್ತಾರೆ. ಅವರೆಲ್ಲ ಹೋಂ ಕ್ವಾರೆಂಟೈನ್ ನಲ್ಲಿ ಇರಲ್ಲ. ಬೇರೆಯವರಂತೆ ಅವರೂ ಕೂಡ ಸಾಮಾನ್ಯರು. ಅವರ ಮೇಲೆ ಅನುಮಾನಪಟ್ಟರೆ ಕ್ರಿಮಿನಲ್ ಕೇಸ್ ಮಾಡುತ್ತೇವೆ ಎಂದರು. ಜನಸೇರೋದು, ಪ್ರಾರ್ಥನೆ ಮಾಡೋದು ಎಲ್ಲ ಮಾಡಬೇಡಿ. ಪ್ರಾರ್ಥನೆ ನಿಮ್ಮ ಮನೆಗಳಲ್ಲಿ ಮಾಡಿ. ನಿನ್ನೆ ಹುಣಸೂರಿನಲ್ಲಿ ಒಂದು ಕೇಸ್ ಆಗಿದೆ. ಕೇಸ್ ಫೈಲ್ ಮಾಡಿದೇವೆ ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: