ಮೈಸೂರು

ಉಪಚುನಾವಣೆಯಲ್ಲಿ ಜೆಡಿಎಸ್ ಸ್ಪರ್ಧಿಸಲ್ಲ : ಹೆಚ್.ಡಿ.ದೇವೇಗೌಡ ಸ್ಪಷ್ಟನೆ

ನಾನು ಬಜೆಟ್ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಮುಂದಿನ ಚುನಾವಣೆಯಲ್ಲಿ ಕುಮಾರಸ್ವಾಮಿ ಗೆಲುವು ತಡೆಯಲು ಸಾಲ ಮನ್ನಾ ಮಾಡುತ್ತಾರೆ ಅಂದುಕೊಂಡಿದ್ದೆ.
ಆ ಮೂಲಕ ಕುಮಾರಸ್ವಾಮಿ ಹೋರಾಟಕ್ಕೆ ಹಿನ್ನಡೆಯಾಗುವಂತೆ ಮಾಡುತ್ತಾರೆ ಅಂದುಕೊಂಡಿದ್ದೆ. ಆದರೆ ಸಿದ್ದರಾಮಯ್ಯ ಹಾಗೆ ಮಾಡಿಲ್ಲ. ಯಾಕೆ ಅಂತ  ನನಗೂ ಗೊತ್ತಿಲ್ಲ.
ಅವರ ಬಳಿ ಆರ್ಥಿಕವಾಗಿ ಶಕ್ತಿ ಇದೇಯೇ ಇಲ್ಲವೋ ಅನ್ನೋದೇ ಗೊತ್ತಿಲ್ಲ. ಬಜೆಟ್ ಬಗ್ಗೆ ಕುಮಾರಸ್ವಾಮಿ ಹಾಗೂ ಜಗದೀಶ್ ಶೆಟ್ಟರ್ ಮಾತನಾಡಿದ್ದಾರೆ.  ಈ ಕುರಿತು  ಹಾರಿಕೆಯ ಉತ್ತರ ನೀಡೋಕೆ‌ ನನಗಿಷ್ಟವಿಲ್ಲ ಎಂದರು.
ನಂಜನಗೂಡು ಉಪಚುನಾವಣೆ ಜೆಡಿಎಸ್ ತಟಸ್ಥವಾಗಿರುವ ಬಗ್ಗೆ ನಿರ್ಧಾರ ಮಾಡಲಾಗಿದೆ.
ಎರಡು ಕಡೆಯ ಜೆಡಿಎಸ್ ಕಾರ್ಯಕರ್ತರಿಗೆ ನಾವು ತಟಸ್ಥವಾಗಿರುವ ಬಗ್ಗೆ ತಿಳಿಸಿ ಹೇಳುತ್ತೇವೆ. ಉಪಚುನಾವಣೆಯ ಫಲಿತಾಂಶ ಮುಂದಿನ ಚುನಾವಣೆಗೆ ದಿಕ್ಸೂಚಿ ಅನ್ನೋದು ಭ್ರಮೆ. ಜಯಲಲಿತಾ 15 ಉಪಚುನಾವಣೆಗೆ ಸ್ಪರ್ಧೆಯನ್ನೆ ಮಾಡಲಿಲ್ಲ.ಆದರೆ ಸಾರ್ವತ್ರಿಕ ಚುನಾವಣೆಯಲ್ಲಿ ಭಾರಿ ಯಶಸ್ಸನ್ನು ಕಂಡಿದ್ದರು.ಉಪಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳ ಹಣಬಲದ ಜೊತೆ ಹೋರಾಟ ಮಾಡೋಕೆ ಆಗೋಲ್ಲ.ಮತ್ತೆ 8 ತಿಂಗಳಲ್ಲಿ ಬರುವ ಚುನಾವಣೆಗೆ ನಾವು ಅಭ್ಯರ್ಥಿಗಳನ್ನು ಹಾಕುತ್ತೇವೆ.ಆದರೆ  ಈ ಉಪಚುನಾವಣೆಗೆ ಜೆಡಿಎಸ್‌ ಸ್ಪರ್ಧೆ ಮಾಡಲ್ಲ ಎಂದರು.ಉಪಚುನಾವಣೆಯಲ್ಲಿ ಅಕ್ರಮ ತಡೆಯೋಕೆ ಚುನಾವಣಾ ಆಯೋಗದಿಂದ ಸಾಧ್ಯವಿಲ್ಲ. ಇದು ಜಗತ್ತಿಗೆ ಗೊತ್ತಿರೋ ವಿಚಾರ.ಉಪಚುನಾವಣೆ ಅಷ್ಟೇ ಅಲ್ಲ ಎಲ್ಲ ಚುನಾವಣೆಯಲ್ಲು ಅಕ್ರಮ ನಡೆಯುತ್ತದೆ.ಈಗ ನಡೆದ ಉತ್ತರಪ್ರದೇಶ ಚುನಾವಣೆಯಲ್ಲೂ ಭಾರಿ ಅಕ್ರಮ ನಡೆದಿರೋದು ಎಲ್ಲರಿಗು ಗೊತ್ತಿದೆ.ಚುನಾವಣೆಯಲ್ಲಿ ಅಕ್ರಮ ತಡೆಯೋಕೆ ಕಾನೂನು ಕಾಯ್ದೆ ತರಬೇಕು ಎಂದರು. ಯಾರೊಂದಿಗೂ ಮೈತ್ರಿಯ ಪ್ರಶ್ನೆಯೇ ಇಲ್ಲ.
ಉಪಚುನಾವಣೆಯಲ್ಲಿ ಮಾತ್ರ ನಾವು ತಟಸ್ಥವಾಗಿ ಇರೋದು. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ 224 ಕ್ಷೇತ್ರದಲ್ಲು ಜೆಡಿಎಸ್‌ ಸ್ಪರ್ಧೆ ಮಾಡುತ್ತೆ.ಈಗ ಉಪಚುನಾವಣೆ ನಡೆಯುತ್ತಿರುವ ನಂಜನಗೂಡು ಹಾಗೂ ಗುಂಡ್ಲುಪೇಟೆಯೂ ಸೇರಿಕೊಂಡಂತೆ ನಾವು ಸ್ಪರ್ಧೆ ಮಾಡುತ್ತೇವೆ.ತಟಸ್ಥವಾದ ತಕ್ಷಣ ಯಾರೊಂದಿಗೋ ಹೊಂದಾಣಿಕೆ ಮಾಡಿಕೊಂಡಿದ್ದೇವೆ ಅಂತ ಅಲ್ಲ.ಮುಂದಿನ ವಿಧಾನಸಭೆ ಚುನಾವಣೆಗೆ ಜೆಡಿಎಸ್‌ ಏಕಾಂಗಿ ಸ್ಪರ್ಧಿಸಲಿದೆ ಎಂದರು. ಶಾಸಕ ಜಿ.ಟಿ.ದೇವೇಗೌಡ ಮತ್ತು ಜೆಡಿಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು. (ಎಸ್.ಎನ್-ಎಸ್.ಎಚ್)

Leave a Reply

comments

Related Articles

error: