ಮೈಸೂರು

  ಅಂತರರಾಷ್ಟ್ರೀಯ ಖ್ಯಾತಿಯ ತರಬೇತುದಾರ ಬಿ.ವೈಭವ್ ಅವರಿಂದ  ಸ್ಫೂರ್ತಿದಾಯಕ ಸಂದೇಶ

ಮೈಸೂರು,ಏ.7:- ಧ್ಯಾನ ಹಾಗೂ ಪ್ರಾಣಿಕ್ ಹೀಲಿಂಗ್ ತರಬೇತಿಯನ್ನು ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ನೀಡುತ್ತಿರುವ ಖ್ಯಾತಿ ಹೊಂದಿದ  ವೈಭವ್.ಬಿ ಅವರು ಏಪ್ರಿಲ್ 7 ರಂದು ಬೆಳಿಗ್ಗೆ 11.30 ಕ್ಕೆ ವಾರ್ತಾ ಇಲಾಖೆಯ ಎಫ್ ಬಿ ಲೈವ್ ನಲ್ಲಿ  ಸ್ಫೂರ್ತಿದಾಯಕ ಸಂದೇಶ ನೀಡುವರು‌.

ವೈಭವ್‌ ಬಿ. ಅವರು ಉತ್ತಮ ವಾಗ್ಮಿಗಳಾಗಿದ್ದು, ಮೂಲತಃ ಮೈಸೂರಿನವರು. ಆಧ್ಯಾತ್ಮಿಕತೆ ಮತ್ತು ಮಾನಸಿಕ ಖಿನ್ನತೆಯನ್ನು ಗುಣಪಡಿಸುವಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಪಶ್ಚಿಮ ಆಫ್ರಿಕಾಕ್ಕೆ ತೆರಳಿ ಅಲ್ಲಿನ 3 ದೇಶಗಳಲ್ಲಿ ಪ್ರಾಣಿಕ್ ಗುಣಪಡಿಸುವಿಕೆಯನ್ನು ಸಕ್ರಿಯವಾಗಿ ಕಲಿಸಿದ್ದಾರೆ. ಪ್ರಾಣಿಕ್ ಬೋಧಿಸುವುದರಲ್ಲಿ ಅಗಮ್ಯ ಅನುಭವವನ್ನು ಹೊಂದಿದ್ದಾರೆ. ಅಲ್ಲದೆ ಇವರು ಕರ್ನಾಟಕದ ಯೋಗ ವಿದ್ಯಾ ಪ್ರಾನಿಕ್ ಹೀಲಿಂಗ್ ಫೌಂಡೇಶನ್‌ನ ಟ್ರಸ್ಟಿಗಳಲ್ಲಿ ಒಬ್ಬರಾಗಿದ್ದಾರೆ‌. https://www.facebook.com/mysorevarthe/ಈ ಲಿಂಕ್ ಮೂಲಕ   ಸಾರ್ವಜನಿಕರು, ವಿಶೇಷವಾಗಿ ಕ್ವಾರಂಟೈನ್ ನಲ್ಲಿ ಇರುವವರು ಈ ಸಂದೇಶ ವೀಕ್ಷಿಸಬಹುದು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: