ಮೈಸೂರು

ಕ್ವಾರೆಂಟೈನ್ ಪ್ರದೇಶದಲ್ಲಿ ಪಾಲಿಕೆ ನೀಡಿದ ಡ್ರೆಸ್ ಧರಿಸಿಯೇ ಬರುವ ಪೌರಕಾರ್ಮಿಕರು

ಮೈಸೂರು,ಏ.7:- ದೇಶಾದ್ಯಂತ ಕೊರೋನಾ ಭೀತಿ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಹೈ ಆಲರ್ಟ್ ಘೋಷಿಸಲಾಗಿದ್ದು, ಕ್ವಾರೆಂಟೈನ್ ನಲ್ಲಿ‌ ಇರುವರ ಮೇಲೆ ತೀವ್ರ ನಿಗಾವಹಿಸಲಾಗಿದೆ.

ಖಾಸಗಿ ಹೋಟೆಲ್ ಗಳನ್ನು ಕ್ವಾರೆಂಟೈನ್ ಕೇಂದ್ರ ಗಳನ್ನಾಗಿ ಪರಿವರ್ತನೆ ಮಾಡಲಾಗಿದ್ದು, ಕ್ವಾರೆಂಟೈನ್ ಕೇಂದ್ರ ಗಳನ್ನು ಸ್ವಚ್ಛ ಮಾಡುವ ಪೌರ‌ಕಾರ್ಮಿಕರಿಗೆ ವಿಶೇಷ ರಕ್ಷಾ ಕವಚ ನೀಡಲಾಗಿದೆ. ಮೈಸೂರು ನಗರ ಪಾಲಿಕೆ  ಪೌರಕಾರ್ಮಿಕರ ಆರೋಗ್ಯದ ಹಿತದೃಷ್ಟಿಯಿಂದ ವಿನೂತನ ಹೆಜ್ಜೆಯನ್ನಿರಿಸಿದ್ದು, ಕ್ವಾರೆಂಟೈನ್ ಗೆ ಒಳಗಾಗಿರುವ  ಮನೆಗಳಲ್ಲಿ ಕಸ ಪಡೆಯುವ ವೇಳೆ ಮುಂಜಾಗ್ರತೆಗೆ  ಪಾಲಿಕೆ ಆದ್ಯತೆ ನೀಡಿದೆ. ಪೌರ ಕಾರ್ಮಿಕರಿಗೆ ನೂತನ ಡ್ರೆಸ್ ನೀಡಿದ್ದು, ಮನೆಗಳಲ್ಲಿ ಕಸ ಪಡೆಯಲು ಹಾಗೂ ಮನೆಗಳಿಗೆ ಔಷಧಿ ಸಿಂಪಡಿಸಲು ಈ ಡ್ರೆಸ್ ಬಳಕೆಯಾಗಲಿದೆ. ಮೈಸೂರಿನ ಎಲ್ಲಾ ಝೋನ್ ಗಳಲ್ಲಿ ಇಬ್ಬರಿಗೆ ಈ ಡ್ರೆಸ್ ನೀಡಿದ್ದು, ಕ್ವಾರೆಂಟೈನ್ ಪ್ರದೇಶದಲ್ಲಿ ಇದೇ ಡ್ರೆಸ್ ಧರಿಸಿಯೇ ಅವರು ತೆರಳಬೇಕಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: