ಮೈಸೂರು

ಕ್ವಾರೆಂಟೈನ್ ಗೆ ಒಳಪಡುವವರ ಸಂಖ್ಯೆಯಲ್ಲಿ  ಇಳಿಕೆ

ಮೈಸೂರು,ಏ.7:-  ಮೈಸೂರಿನಲ್ಲಿ ಕೊರೋನಾ ಮಹಾಮಾರಿ ಪ್ರಕರಣ ದಿನೇ ದಿನೇ ಹೆಚ್ಚುತ್ತಿದ್ದು, ಕ್ವಾರೆಂಟೈನ್ ಗೆ ಒಳಪಡುವವರ ಸಂಖ್ಯೆ ಯಲ್ಲಿ  ಇಳಿಕೆಯಾಗಿದೆ.

ವಿದೇಶದಿಂದ ಬಂದ ಕ್ವಾರೆಂಟೈನ್ ಪೂರ್ಣಗೊಂಡಿದ್ದು, ವಿದೇಶದಿಂದ ಬಂದವರಿಂದ ಯಾವುದೇ ತೊಂದರೆ ಇಲ್ಲ ಎನ್ನಲಾಗಿದೆ. 2902 ಮಂದಿ ಮೇಲೆ ನಿಗಾ ವಹಿಸಲಾಗಿತ್ತು. ಇವರಲ್ಲಿ 1533 ಮಂದಿ‌ 14 ದಿನ ಹೋಂ ಕ್ವಾರಂಟೈನ್‌ ಮುಗಿಸಿದ್ದಾರೆ. ಇನ್ನೂ 1334 ಮಂದಿಯನ್ನು ಹೋಂ ಕ್ವಾರಂಟೈನ್‌ನಲ್ಲಿಡಲಾಗಿದೆ. ಇದರಲ್ಲಿ ದೆಹಲಿ ಹಾಗೂ ಜ್ಯುಬಿಲಿಯಂಟ್ ಕಾರ್ಖಾನೆಯ ಸಿಬಂದಿಗಳ ಸಂಖ್ಯೆಯೇ ಹೆಚ್ಚಿದೆ. 287 ಮಂದಿಯ ಸ್ಯಾಂಪಲ್ ಟೆಸ್ಟ್ ಮಾಡಲಾಗಿದೆ. 35  ಮಂದಿಗೆ ಪಾಸಿಟಿವ್ ರಿಪೋರ್ಟ್ ಬಂದಿದೆ. 174 ಮಂದಿಗೆ ನೆಗೆಟಿವ್ ರಿಪೋರ್ಟ್ ಬಂದಿದೆ. ಮೂವರ ಸ್ಯಾಂಪಲ್‌ ರಿಪೋರ್ಟ್ ಪೆಂಡಿಂಗ್ ಇದೆ. ನಾಲ್ವರ ಸ್ಯಾಂಪಲ್ ಮರು ಪರೀಕ್ಷೆಗೆ ಮನವಿ ಮಾಡಲಾಗಿದೆ. 70 ಮಂದಿಯ ರಿಸಲ್ಟ್‌ಗಾಗಿ  ಕಾಯಲಾಗುತ್ತಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: