ಮೈಸೂರು

ಎಪ್ರಿಲ್-ಮೇ ನಲ್ಲಿ ಸಮ್ಮರ್ ಸ್ವಿಮಿಂಗ್ ಕ್ಯಾಂಪ್ ಆಯೋಜನೆ

ಗ್ಲೋಬಲ್ ಸ್ಪೋರ್ಟ್ಸ್ ಅಸೋಸಿಯೇಶನ್ ವತಿಯಿಂದ ಮೈಸೂರಿನ ಜೆ.ಪಿ.ನಗರದ ಪುಟ್ಟರಾಜು ಗವಾಯಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ವಿಮಿಂಗ್ ಪೂಲ್ ನಲ್ಲಿ ‘ಸಮ್ಮರ್ ಸ್ವಿಮಿಂಗ್ ಕ್ಯಾಂಪ್’ ನ್ನು ಆಯೋಜಿಸಲಾಗಿದೆ ಎಂದು ಪ್ರಧಾನ್ ಜೈನ್ ತಿಳಿಸಿದರು.

ಮೈಸೂರು ಪತ್ರಕರ್ತರ ಭವನದಲ್ಲಿ ಗುರುವಾರ  ನಡೆದ ಸುದ್ದಿಗೋಷ‍್ಠಿಯಲ್ಲಿ ಮಾತನಾಡಿದ ಅವರು, ಎರಡು ತಿಂಗಳ ಸ್ವಿಮಿಂಗ್ ಕೋಚಿಂಗ್ ತರಗತಿಗಳು ಎರಡು ಹಂತವಾಗಿ ಆರಂಭವಾಗಲಿವೆ. ಏಪ್ರಿಲ್ 1 ರಿಂದ ಏಪ್ರಿಲ್ 28 ರವರೆಗೆ ಮೊದಲ ಕ್ಯಾಂಪ್, ಹಾಗೂ ಮೇ 2 ರಿಂದ ಮೇ 29 ರವರೆಗೆ ಎರಡನೇ ಕ್ಯಾಂಪ್ ಆಯೋಜಿಸಲಾಗಿದೆ. ಎಲ್ಲಾ ವಿಭಾಗದವರು ಸ್ವಿಮಿಂಗ್ ಕೋಚ್ ನಲ್ಲಿ ಭಾಗವಹಿಸಬಹುದಾಗಿದ್ದು, ತಲಾ 3 ಸಾವಿರ ರೂ.ನಿಗದಿಪಡಿಸಲಾಗಿದೆ. ಪ್ರತಿ ತಂಡದಲ್ಲಿ 30 ಮಂದಿ ಇರಲಿದ್ದು, ಒಂದು ಗಂಟೆಯ ಕಾಲ ತಜ್ಞ ಈಜುಗಾರರಿಂದ ಪ್ರತ್ಯೇಕವಾಗಿ ತರಬೇತಿ ನೀಡಲಾಗುತ್ತದೆ ಎಂದರು.

ಇಲ್ಲಿಗೆ ಬಂದು ಕಲಿಯುವವರು ರಾಜ್ಯ ಹಾಗೂ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಮಾಡುವಷ್ಟು ತರಬೇತಿ ನೀಡುತ್ತೇವೆ. 11 ಬ್ಯಾಚ್ ಗಳಿಗೆ ಈ ತರಬೇತಿ ನೀಡಲಾಗುತ್ತದೆ ಎಂದು ಹೇಳಿದರು. ಸುದ್ದಿಗೋಷ್ಠೀಯಲ್ಲಿ ತರಬೇತುದಾರ ವಿಜಯಕುಮಾರ್ ಉಪಸ್ಥಿತರಿದ್ದರು. (ಎಸ್.ಎನ್-ಎಸ್.ಎಚ್)

Leave a Reply

comments

Related Articles

error: