ಕರ್ನಾಟಕಮೈಸೂರು

ಸ್ವಯಂ ಪ್ರೇರಣೆಯಿಂದ ಚಿಕಿತ್ಸೆ ಪಡೆಯಿರಿ: ತಬ್ಲೀಗಿ ಜಮಾತ್‌ ಸದಸ್ಯರಿಗೆ ರಾಜ್ಯ ಔಕಾಫ್‌ ಮಂಡಳಿ ಮನವಿ

ಬೆಂಗಳೂರು (ಏ.7): 2020ರ ಮಾರ್ಚ್‌ ತಿಂಗಳಲ್ಲಿ ದೆಹಲಿಯ ಮರ್ಕಜ್‌ ಹಝರತ್‌ ನಿಝಾಮುದ್ದೀನ್‌ನಲ್ಲಿ ತಬ್ಲೀಗಿ ಜಮಾತ್‌ ಸಮಾವೇಶ ನಡೆದಿದ್ದು, ಕರ್ನಾಟಕ ರಾಜ್ಯದಿಂದ ಭಾರಿ ಸಂಖ್ಯೆಯಲ್ಲಿ ತಬ್ಲೀಗಿ ಜಮಾತ್‌ ಸದಸ್ಯರು ಪಾಲ್ಗೊಂಡಿದ್ದಾರೆ. ಸಮಾವೇಶದಲ್ಲಿ ಪಾಲ್ಗೊಂಡ ಬಳಿಕ ಬಹಳಷ್ಟು ಮಂದಿ ಮರಳಿ ತಮ್ಮ ನಗರಗಳಿಗೆ ಹಾಗೂ ಮನೆಗಳಿಗೆ ಮರಳಿದ್ದಾರೆ.

ಈ ಸದಸ್ಯರು ಕೋವಿಡ್‌ 19 ಸೋಂಕಿಗೆ ಒಳಗಾಗಿರುವ ಸಾಧ್ಯತೆ ಇದ್ದು ಅವರು ತಪ್ಪದೇ ಆರೋಗ್ಯ ಇಲಾಖೆಯ ಸಹಾಯವಾಣಿ 080-29711171ಗೆ ಸಂಪರ್ಕಿಸುವುದು ಅಥವಾ ಕೂಡಲೇ ಹತ್ತಿರದ ಜಿಲ್ಲಾ ಅಥವಾ ತಾಲೂಕು ಮಟ್ಟದ ಆಸ್ಪತ್ರೆಗೆ ಭೇಟಿ ನಿಡಿ ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಔಕಾಫ್‌ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇಸ್ಲಾಹುದ್ದೀನ್‌ ಜೆ ಗಡ್ಯಾಲ್‌ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

2020ರ ಮಾರ್ಚ್‌ ತಿಂಗಳಲ್ಲಿ ದೆಹಲಿಯ ಮರ್ಕಜ್‌ ಹಝರತ್‌ ನಿಝಾಮುದ್ದೀನ್‌ನಲ್ಲಿ ತಬ್ಲೀಗಿ ಜಮಾತ್‌ ಸಮಾವೇಶದಲ್ಲಿ ಪಾಲ್ಗೊಂಡ ಸದಸ್ಯರು ಸ್ವಯಂ ಪ್ರೇರಣೆಯಿಂದ ಆರೋಗ್ಯ ಇಲಾಖೆಯ ಸಹಾಯವಾಣಿ ಆರೋಗ್ಯವನ್ನು 080-29711171ಗೆ ಸಂಪರ್ಕಿಸುವುದು ಅಥವಾ ಕೂಡಲೇ ಹತ್ತಿರದ ಜಿಲ್ಲಾ ಅಥವಾ ತಾಲೂಕು ಮಟ್ಟದ ಆಸ್ಪತ್ರೆಗೆ ಭೇಟಿ ನಿಡಿ ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಳ್ಳುವುದು ಮತ್ತು ಇದು ಸಮುದಾಯದ ಹಿತದೃಷ್ಟಿಯಿಂದ ಕೂಡಲೇ ತಪಾಸಣೆ ಮಾಡಿಸಿಕೊಳ್ಳಬೇಕಾಗಿ ಕೋರಿದ್ದಾರೆ.

ಜಿಲ್ಲಾ ವಕ್ಫ್‌ ಅಧಿಕಾರಿಗಳು/ಜಿಲ್ಲಾ ಆರೋಗ್ಯ ಅಧಿಕಾರಿಗಳು, ಆರೋಗ್ಯ ತಪಾಸಣೆಗೆ ಅಗತ್ಯವಾದ ನೆರವು ಒದಗಿಸಲಿದ್ದಾರೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 080-46848600 / 080-66692000/ 9745697456/ ಸಹಾಯವಾಣಿ ಸಂಖ್ಯೆ -ಟೋಲ್‌ ಫ್ರೀ -104 ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: