ಕರ್ನಾಟಕ

ಮಂಡ್ಯ: ಜಾನುವಾರಗಳ ಆಹಾರ ಅಂಗಡಿ, ಎಲೆಕ್ಟ್ರಿಕಲ್ ಅಂಗಡಿ ತೆರೆಯಲು ಅನುಮತಿ

ಮಂಡ್ಯ (ಏ.7): ಜಾನುವಾರಗಳ ಹಿತದೃಷ್ಟಿಯಿಂದ ಪಶುಆಹಾರ ಅಥವಾ ಮೇವನ್ನು ಜಿಲ್ಲೆಯ ಒಳಗೆ ಮಾರಾಟ ಮತ್ತು ಸಾಗಣಿಕೆ ಮಾಡಲು ಹಾಗೂ ರೈತರ ಬೋರ್‍ವೆಲ್ ದುರಸ್ತಿ ಸಮಯದಲ್ಲಿ ಎಲೆಕ್ಟ್ರಿಕಲ್ ವಸ್ತುಗಳು ಮತ್ತು ಬೋರ್‍ವೆಲ್ ಪಂಪ್ ಸೆಟ್ ಬಿಡಿ ಭಾಗಗಳು ಅಗತ್ಯ ಸೇವೆಗಳಡಿಯಲ್ಲಿ ಬರುವುದರಿಂದ ಷರತ್ತುಗೊಳಪಟ್ಟು ಎಲೆಕ್ಟ್ರಿಕಲ್ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ.

ಪಶು ಆಹಾರವನ್ನು ಮಾರಾಟ ಮಾಡುವಾಗ ಅಥವಾ ಎಲೆಕ್ಟ್ರಿಕಲ್ ಅಗಂಡಿಗಳಿಗಳಲ್ಲಿ ವಸ್ತು ನೀಡುವಾಗ ವ್ಯಕ್ತಿಯಿಂದ ವ್ಯಕ್ತಿಗೆ 3 ಅಡಿ ಅಂತರ ಕಾಯ್ದುಕೊಂಡು ಅಗತ್ಯ ವಸ್ತುಗಳನ್ನು ವಿತರಿಸಬೇಕು. ಅಗತ್ಯ ವಸ್ತುಗಳನ್ನು ಪಡೆಯಲು ಬರುವ ಸಾರ್ವಜನಿಕರಿಗೆ ಸೋಂಕು ತಡೆಯುವ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಲು ಅರಿವು ಮೂಡಿಸಿ ಮಾರಾಟ ಮಾಡುವ ಸ್ಥಳದಲ್ಲಿ ಶುಚಿತ್ವ ಕಾಪಾಡಿಕೊಳ್ಳಬೇಕು. ಮತ್ತು ಆಚಿಟಿ ಸೆಪ್ಟಿಕ್ ಸೆಲ್ಯೂಷನ್ ಮತ್ತು ಸ್ಯಾನಿಟೈಸರ್‍ನಿಂದ ಆಗಾಗ್ಗೆ ಕೈಯನ್ನು ಸ್ವಚ್ಛಗೊಳಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

(ಎನ್.ಬಿ)

Leave a Reply

comments

Related Articles

error: