ಮೈಸೂರು

ಮೈಸೂರು ನಾಗರಿಕರಿಗೆ 10ರೂ.ಗೆ ತರಕಾರಿ, 20ರೂ.ಗೆ ಅಕ್ಕಿ ವಿತರಿಸುತ್ತಿರುವ ಶಿವಪ್ರಕಾಶ್ : ಈ ಕಾರ್ಯ ಇತರರಿಗೂ ಮಾದರಿಯಾಗಲಿ ; ಸಂಸದ ಪ್ರತಾಪ್ ಸಿಂಹ

ಮೈಸೂರು,ಏ.7:- ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಮೈಸೂರಿನಲ್ಲಿ ದಿನದಿಂದ ದಿನಕ್ಕೆ ಏರುತ್ತಿದ್ದು, ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮೈಸೂರಿನ ನಾಗರಿಕರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಎಸ್ ಎಂ ಪಿ ಫೌಂಡೇಶನ್ ಮಾಲೀಕರಾದ ಶಿವಪ್ರಕಾಶ್ ಅವರು  ಒಂದು ಕೆ.ಜಿ ಗೆ 10ರೂ.ಗೆ ತರಕಾರಿ ಮತ್ತು ಒಂದು ಕೆ.ಜಿ.ಗೆ 20ರೂ.ನ ಕ್ವಾಲಿಟಿಯುಳ್ಳ ಅಕ್ಕಿಯನ್ನು ವಿತರಿಸುತ್ತಿದ್ದಾರೆ.

ಇಂದು ವಿಶ್ವೇಶ್ವರ ನಗರದಲ್ಲಿರುವ  ಎಸ್.ಎಂ.ಪಿ ಅಸೋಸಿಯೇಶನ್ ನಲ್ಲಿ ಸಂಸದ ಪ್ರತಾಪ್ ಸಿಂಹ ಈ ಒಂದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಕೊರೋನಾ ಬಂದಿರುವ ಸಂದರ್ಭದಲ್ಲಿ ಮೈಸೂರಿನ ಜನರಿಗೆ ಅನುಕೂಲವಾಗಲಿ ಎಂದು ಶಿವಪ್ರಕಾಶ್ ಅವರು ಯಾವುದೇ ತರಕಾರಿ ಕೊಂಡರೂ ಹತ್ತುರೂ.ಗೆ ಅಕ್ಕಿಯನ್ನು 20ರೂ ದರದಲ್ಲಿ ಜನರಿಗೆ ಒದಗಿಸಿಕೊಟ್ಟಿದ್ದಾರೆ. ಟೊಮೆಟೋ ಹತ್ತು ರೂ.ಗೆ ಸಿಗಬಹುದು ಆದರೆ ಬೆಂಡೆಕಾಯಿ, ತೊಂಡೆ ಕಾಯಿ, ಉಳಿದ ಯಾವುದೇ ತರಕಾರಿ 50ರೂ.ಗಿಂತ ಕಡಿಮೆ ಸಿಗಲ್ಲ.  ಆದರೆ ಶಿವಪ್ರಕಾಶ್, ಅವರು ತಮ್ಮ ಸ್ವಂತ ಹಣವನ್ನು ಸದ್ವಿನಿಯೋಗ ಮಾಡಿ ಜನರಿಗೆ ಯಾವುದೇ ತರಕಾರಿ ತೆಗೆದುಕೊಂಡರೂ ಕೂಡ 10ರೂ. ಚಾರ್ಜ್ ಮಾಡಿ ಒಳ್ಳೆ ಕೆಲಸಕ್ಕೆ ಕೈ ಹಾಕಿದ್ದಾರೆ. ಹಾಗೆ ಒಳ್ಳೆ ಕ್ವಾಲಿಟಿ ಅಕ್ಕಿಯನ್ನು 20ರೂ.ಕೆಜಿಗೆ ನೀಡುತ್ತಿದ್ದಾರೆ. ಇಂದು ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಚಾಲನೆ ನೀಡಬೇಕಿತ್ತು. ಆದರೆ ಅವರು ನಾಳೆ ಬರುತ್ತಿರುವುದರಿಂದ ಜನರಿಗೆ ತಲುಪಬೇಕು ಎಂದು ಇಂದೇ ಚಾಲನೆ ನೀಡಲಾಗಿದೆ. ಅವರೊಂದು ಮೇಲ್ಪಂಕ್ತಿ ಹಾಕಿಕೊಟ್ಟಿದ್ದು, ಇತರರಿಗೂ ಮಾದರಿಯಾಗಲಿ  ಎಂದು ತಿಳಿಸಿದರು.

ಈ ಸಂದರ್ಭ ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ, ಪ್ರಭಾರಿ ಮೈ.ವಿ.ರವಿಶಂಕರ್ , ಎಸ್ ಎಂ ಪಿ ಮಾಲೀಕ ಶಿವಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: