ಕರ್ನಾಟಕ

ಕೆಪಿಟಿಸಿಎಲ್‍ನಿಂದ ಸಿಎಂ ‘ಕೋವಿಡ್-19’ ಪರಿಹಾರ ನಿಧಿಗೆ 43 ಕೋಟಿ ರೂ. ಹಸ್ತಾಂತರ

ಬೆಂಗಳೂರು (ಏ.7): ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಒಟ್ಟು 43 ಕೋಟಿ ರೂ.ಗಳನ್ನು ಮುಖ್ಯಮಂತ್ರಿಗಳ ಕೋವಿಡ್ -19ರ ಪರಿಹಾರ ನಿಧಿಯ ಚೆಕ್ಕನ್ನು ಮುಖ್ಯಮಂತ್ರಿಗಳಿಗೆ ಇಂಧನ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಇತ್ತೀಚೆಗೆ ಹಸ್ತಾಂತರಿಸಿದರು.

ಸಂಸ್ಥೆಯ ಸಾಮಾಜಿಕ ಜವಬ್ದಾರಿ ಅಡಿಯಲ್ಲಿ (ಸಿ.ಎಸ್.ಆರ್) ರೂ.25 ಕೋಟಿ ಹಾಗೂ ಕ.ವಿ.ಪ್ರ.ನಿ.ನಿ ಹಾಗೂ ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳ ಅಧಿಕಾರಿ ಹಾಗೂ ನೌಕರರ ಎರಡು ದಿನದ ಸಂಬಳದಿಂದ ಕ್ರೋಡಿಕರಿಸಿದ ರೂ. 18 ಕೋಟಿ ಸೇರಿ ಒಟ್ಟು 43 ಕೋಟಿ ರೂ.ಗಳನ್ನು ಇಂದು ಮುಖ್ಯಮಂತ್ರಿಗಳಿಗೆ ಹಸ್ತಾಂತರಿಸಲಾಯಿತು.

ಈ ಅವಧಿಯಲ್ಲಿ ವ್ಯವಸ್ಥಾಪಕ ನಿರ್ದೇಶಕರು ಕ.ವಿ.ಪ್ರ.ನಿ.ನಿ. ನಿರ್ದೇಶಕರು (ಆಡಳಿತ ಮತ್ತು ಮಾನವ ಸಂಪನ್ಮೂಲ), ನಿರ್ದೇಶಕರು (ಪ್ರಸರಣ), ನಿರ್ದೇಶಕರು (ಹಣಕಾಸು), ಅಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳು, ಕೆ.ಇ.ಬಿ. ಇಂಜನೀಯರುಗಳ ಸಂಘ, ಕ.ವಿ.ಪ್ರ.ನಿ.ನಿ.ದ ನೌಕರರ ಸಂಘ ಮತ್ತು ಲೆಕ್ಕಾಧಿಕಾರಿಗಳು ಸಂಘ ರವರು ಉಪಸ್ತಿತರಿದ್ದರು. (ಎನ್.ಬಿ)

Leave a Reply

comments

Related Articles

error: