ಮೈಸೂರು

ನೇಗಿಲಯೋಗಿ  ಸಮಾಜ ಸೇವಾ ಟ್ರಸ್ಟ್ ವತಿಯಿಂದ ದಿನಸಿ ವಿತರಣೆ

ಮೈಸೂರು,ಏ.7:- ಜಯನಗರದಲ್ಲಿರುವ ನೇಗಿಲಯೋಗಿ  ಸಮಾಜ ಸೇವಾ ಟ್ರಸ್ಟ್ ವತಿಯಿಂದ ಸ್ಥಳೀಯ ಐವತ್ತು ಕುಟುಂಬಗಳಿಗೆ ದಿನಸಿ ವಿತರಿಸಲಾಯಿತು.

ನೇಗಿಲಯೋಗಿ ಸಮಾಜಸೇವಾ ಟ್ರಸ್ಟ್ ನ ಕಛೇರಿಯಲ್ಲಿಂದು ದಿವ್ಯಾನಂದ್ ಅವರು ಸ್ಥಳೀಯ 50 ಕುಟುಂಬಗಳಿಗೆ ದಿನಸಿ ವಿತರಿಸಿದರು. ಕೊರೋನಾ ವೈರಸ್ ಸೋಂಕು ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದಿನಸಿ ಮಳಿಗೆಗಳು ತೆರೆಯದೇ ಇದ್ದು, ಯಾವುದೇ ಕೆಲಸವಿಲ್ಲದೆ, ಕೈನಲ್ಲಿ ಕಾಸಿಲ್ಲದೇ ಊಟಕ್ಕೂ ಹೆಣಗಾಡುವ ಪರಿಸ್ಥಿತಿ ಬಂದೊದಗಿದ ಕುಟುಂಬಗಳಿಗೆ ಪಡಿತರ ವಿತರಿಸಲಾಯಿತು.

ಈ ಸಂದರ್ಭ ಟ್ರಸ್ಟ್ ಮುಖ್ಯಸ್ಥರಾದ ರವಿಕುಮಾರ್ ಇನ್ನಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: