
ಮೈಸೂರು
ವಿಶ್ವ ಆರೋಗ್ಯ ದಿನಾಚರಣೆ ಪ್ರಯುಕ್ತ ವೈದ್ಯರನ್ನು ಸನ್ಮಾನಿಸಿದ ಮಾಜಿ ಶಾಸಕ ಎಂ.ಕೆ.ಸೋಮಶೇಖರ್
ಮೈಸೂರು,ಏ.7:-ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ನೇತೃತ್ವದಲ್ಲಿ ಜನಸ್ಪಂದನ ಟ್ರಸ್ಟ್ ನಡೆಸುತ್ತಿರುವ ಸಮಾಜ ಸೇವಾ ಕಾರ್ಯ ಹದಿನೈದನೇ ದಿನಕ್ಕೆ ಕಾಲಿರಿಸಿದ್ದು, ಇಂದು ಜಯನಗರ, ಚನ್ನಗಿರಿ ಕೊಪ್ಪಲು, ಮಳಲವಾಡಿ ಈ ಭಾಗದ 2000ಜನರಿಗೆ ಮಾಸ್ಕ್, ನೀರು, ಆಹಾರ ವಿತರಿಸಲಾಯಿತು. ವಿಶ್ವ ಆರೋಗ್ಯ ದಿನಾಚರಣೆ ಪ್ರಯುಕ್ತ ಕೊರೋನಾ ವಿರುದ್ಧ ಹೋರಾಡುತ್ತಿರುವ ವೈದ್ಯರುಗಳನ್ನು ಸನ್ಮಾನಿಸಲಾಯಿತು.
ಕೃಷ್ಣಮೂರ್ತಿಪುರಂನ ಪೈಲಟ್ ಸರ್ಕಲ್ ಬಳಿ ಇರುವ ಮೋಹನ್ ತುಳಸಿದಾಸ್ ಹೆರಿಗೆ ಆಸ್ಪತ್ರೆ ಮುಂಭಾಗ ನಗರದ ಕೆ.ಆರ್.ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರುಗಳು, ಶುಶ್ರೂಷಕರುಗಳಿಗೆ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಶಾಲು ಹೊದೆಸಿ, ಮೈಸೂರು ಪೇಟ ತೊಡಿಸಿ, ಫಲಪುಷ್ಪ ನೀಡಿ ಸನ್ಮಾನಿಸಿದರು.
ಕೆ.ಆರ್.ಆಸ್ಪತ್ರೆಯ ರಕ್ತ ನಿಧಿ ಅಧಿಕಾರಿ ಡಾ.ಬಿ.ಎಸ್.ಮಂಜುನಾಥ್, ಮೆಡಿಸಿನ್ ವಿಭಾಗದ ಹೆಚ್ ಒ ಡಿ ಡಾ.ಇಂಬನಾಥನ್, ಪ್ರೊ.ಡಾ.ಎಂ.ಎಂ.ಬಸವರಾಜು, ಡಾ.ಮಧು, ಡಾ.ಅನುಪ್ ಶೆರಿಯನ್, ಡಾ.ಅಭಿನಯ್ ಇವರನ್ನು ಸನ್ಮಾನಿಸಿದರು.
ಈ ಸಂದರ್ಭ ಕಾಂಗ್ರೆಸ್ ಮುಖಂಡರಾದ ಶೇಖರ್,ಬ್ಲಾಕ್ ಅಧ್ಯಕ್ಷ ಜಿ ಸೋಮಶೇಖರ್ ,ವಾರ್ಡ್ ಅಧ್ಯಕ್ಷ ಕೇಬಲ್ ಮಹದೇವು,ಯುವಕಾಂಗ್ರೆಸ್ ಮುಖಂಡರಾದ ವಿನಯ್, ಚಿನ್ನಂಬಳ್ಳಿ ಮಹದೇವು,ಬಾಳೆ ಕಾಯಿ ಕುಮಾರ್,ಆಟೋ ರವಿ, ದೊಡ್ಡ,ಗುಣ,ವಿಶ್ವ,ರವಿ ಮತ್ತಿರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)