ದೇಶಪ್ರಮುಖ ಸುದ್ದಿಮನರಂಜನೆ

ಬಾಲಿವುಡ್ ನಟಿ ಜೊಯಾ ಮೊರಾನಿ ಹಾಗೂ ಆಕೆಯ ಸಹೋದರಿಗೆ ಕೊರೊನಾ ವೈರಸ್ ಸೋಂಕು

ಮುಂಬೈ,ಏ.7-ಬಾಲಿವುಡ್ ನ ಖ್ಯಾತ ನಟಿ ಜೊಯಾ ಮೊರಾನಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಅವರ ಸಹೋದರಿ ಶಾಜಾ ಮೊರಾನಿ ಕೂಡ ವೈರಸ್ನಿಂದ ಬಳಲುತ್ತಿದ್ದಾರೆ.

ನಿರ್ಮಾಪಕ ಕರೀಮ್ಮೊರಾನಿ ಪುತ್ರಿಯರಾದ ಇವರಿಬ್ಬರೂ ಅವಳಿ ಸಹೋದರಿಯರು. ಮಾರ್ಚ್ನಲ್ಲಿ ಶ್ರೀಲಂಕಾದಿಂದ ಮುಂಬೈಗೆ ಶಾಜಾ ಮರಳಿದಿದ್ದರು. ಅವರಲ್ಲಿ ಕೊರೊನಾದ ಯಾವ ಲಕ್ಷಣಗಳು ಕಾಣಿಸದೇ ಇದ್ದರೂ, ಅವರನ್ನು ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲು ಮಾಡಿ, ಪರೀಕ್ಷೆ ಮಾಡಲಾಗಿತ್ತು. ಅವರ ರಿಪೋರ್ಟ್ನಲ್ಲಿ ಕೊರೊನಾ ಪಾಸಿಟಿವ್ಇರುವುದು ಖಚಿತಗೊಂಡಿತ್ತು.

ಇನ್ನು, ರಾಜಸ್ಥಾನಕ್ಕೆ ಹೋಗಿದ್ದ ಜೊಯಾಗೆ ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ಧೀರೂಬಾಯಿ ಆಸ್ಪತ್ರೆಗೆ ದಾಖಲಿಸಿ, ಪರೀಕ್ಷೆ ಮಾಡಲಾಗಿತ್ತು. ಅವರಿಗೂ ಕೊರೊನಾ ಪಾಸಿಟಿವ್ ಇರುವುದು ತಿಳಿದುಬಂದಿದೆ. ಇದೀಗ ಇಡೀ ಕುಟುಂಬದ ಮೇಲೆ ನಿಗಾ ಇಡಲಾಗಿದೆ.

ಜೊಯಾ ನಿರ್ಮಾಪಕರ ಪುತ್ರಿಯಾಗಿದ್ದರೂ, ಸಹ ನಿರ್ದೇಶಕಿಯಾಗಿ ವೃತ್ತಿ ಜೀವನ ಆರಂಭಿಸಿದ್ದರು. ‘ಓಂ ಶಾಂತಿ ಓಂ‘, ‘ಹಲ್ಲಾ ಬೋಲ್‌’ ಸಿನಿಮಾಗಳಿಗೆ ಸಹ ನಿರ್ದೇಶಕಿಯಾಗಿ ಕೆಲಸ ಮಾಡಿದ್ದರು. ನಂತರಅಲ್ವೇಸ್ಕಭೀ ಕಭೀ‘, ‘ಭಾಗ್ಜಾನಿಸೇರಿ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. (ಎಂ.ಎನ್)

Leave a Reply

comments

Related Articles

error: