ಮನರಂಜನೆಮೈಸೂರು

 ಆದಿವಾಸಿಗಳ ಹಸಿವು ನೀಗಿಸಲು ಆಹಾರದ ಕಿಟ್ ವಿತರಿಸಿದ  ಚಿತ್ರ ನಟಿ ಹಾಗೂ ನಿರ್ಮಾಪಕಿ ಶ್ರುತಿನಾಯ್ಡು

ಮೈಸೂರು,ಏ.7:- ಮಹಾಮಾರಿ ಕೊರೋನಾ ವೈರಸ್ ಹಾವಳಿಯಿಂದ ಮನೆಯಿಂದ ಹೊರಬರಲಾಗದೆ, ಆಹಾರವಿಲ್ಲದೆ ಪರಿತಪಿಸುತ್ತಿದ್ದ ಆದಿವಾಸಿಗಳಿಗೆ ಚಿತ್ರನಟಿ ಹಾಗೂ ನಿರ್ಮಾಪಕಿ ಶೃತಿ ನಾಯ್ಡು ಸ್ಪಂದಿಸಿದ್ದಾರೆ. ಆದಿವಾಸಿಗಳಿಗೆ ಆಹಾರದ ಕಿಟ್ ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಕೆಲ ದಿನಗಳ ಹಿಂದಷ್ಟೆ ನಂಜನಗೂಡು ತಾಲೂಕಿನ ಆದಿವಾಸಿಗಳು ಆಹಾರ ಪದಾರ್ಥಗಳು ಸಿಗದ ಹಿನ್ನೆಲೆಯಲ್ಲಿ ಪರದಾಡುತ್ತಿದ್ದ ವಿಷಯವನ್ನು ಮಾಧ್ಯಮಗಳಲ್ಲಿ ಪ್ರಸಾರ ಮಾಡಲಾಗಿತ್ತು. ಇದರ ಮಾಹಿತಿ ಅರಿತ ಶೃತಿ ನಾಯ್ಡು ಅವರು ಆದಿವಾಸಿಗಳ ತಾಣಕ್ಕೆ ಆಗಮಿಸಿ ಆಹಾರ ಪದಾರ್ಥಗಳ ಕಿಟ್ ವಿತರಿಸಿ ಮಾನವೀಯತೆ ಮೆರೆದಿದ್ದಾರೆ. ನಂಜನಗೂಡು ತಾಲೂಕಿನ ಡೋರನಕಟ್ಟೆ, ಕೊತ್ತಹಳ್ಳಿ‌ ಹಾಗೂ ಚಿಲಕನಹಳ್ಳಿ ಆದಿವಾಸಿಗಳ ಕಾಲೋನಿಯ 150 ಕುಟುಂಬಗಳಿಗೆ ರೇಷನ್ ವಿತರಣೆ ಮಾಡಿದ್ದಾರೆ.

ಐದು ಕೆಜಿ ಅಕ್ಕಿ , ಐದು ಕೆಜಿ ರಾಗಿ‌ಹಿಟ್ಟು, ಅಡುಗೆ ಎಣ್ಣೆ ಒಂದು ಲೀಟರ್, ತೊಗರಿಬೇಳೆ ಒಂದು ಕೆಜಿ, ಉಪ್ಪು ಒಂದು ಕೆಜಿ, ಹೆಸರು ಕಾಳು ಅರ್ಧ ಕೆಜಿ, ಕಡ್ಲೆಕಾಳು  ಅರ್ಧಕೆಜಿ   ಹೊಂದಿರುವ ಕಿಟ್ ವಿತರಿಸಿದ್ದಾರೆ.

ಶೃತಿ ನಾಯ್ಡು ಹಾಗೂ ತಂಡದವರಿಗೆ  ತಾಲೂಕು ಆಡಳಿತ ಮತ್ತು ಗ್ರಾಮಪಂಚಾಯಿತಿಯ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಸಾಥ್ ನೀಡಿದ್ದಾರೆ.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: