ಮೈಸೂರು

  ಕೊರೋನಾ ವಿರುದ್ಧದ ಸಮರಕ್ಕೆ  ಕೈ ಜೋಡಿಸಿದ ಮೈಸೂರಿನ ಮಾನವ ಸಂಪನ್ಮೂಲ ಅಧಿಕಾರಿಗಳು  

ಮೈಸೂರು,ಏ.7:- ಮೈಸೂರಿನ ಎಡಿನ್ ಸಿನರ್ಜಿ  ಮೈಸೂರಿನಲ್ಲಿ ವಿಶಿಷ್ಟ ಸಾಮಾಜಿಕ ಹೊಣೆಗಾರಿಕಾ ಕಾರ್ಯಕ್ರಮಗಳಿಗೆ ಹೆಸರುವಾಸಿಯಾಗಿದೆ, ಕೊರೋನದ ಈ ಸಂಕಷ್ಟದ ಸಮಯದಲ್ಲಿ ಕೋವಿಡ್19- ಎಡಿನ್ ಟಾಸ್ಕ್ ಫೋರ್ಸ್ಅನ್ನು ಸ್ಥಾಪಿಸಿ ಮೈಸೂರು ಮತ್ತು ಸುತ್ತಮುತ್ತಲಿನ ಅಗತ್ಯವಿರುವವರಿಗೆ ದಿನಕ್ಕೆ 1000 ಮಂದಿಗೆ ಊಟಗಳನ್ನು ನೀಡುತ್ತಿದೆ. ಈ ಉದಾತ್ತ ಕಾರಣಕ್ಕಾಗಿ ಮೈಸೂರಿನ ಸುಮಾರು 150 ಮಾನವ ಸಂಪನ್ಮೂಲ ವ್ಯಕ್ತಿಗಳು ಜೋಡಿಸಿದ್ದಲ್ಲದೆ ಇದರ ಸಮಗ್ರ ಪರಿಣಾಮಕಾರಿ ಅನುಷ್ಠಾನಕ್ಕಾಗಿ. ಕೋವಿಡ್19- ಎಡಿನ್ ಟಾಸ್ಕ್ ಫೋರ್ಸ್ ಅನ್ನು ಎಡಿನ್ ಆನ್ಸೈಟ್ ಸ್ವಯಂಸೇವಕರು ಮತ್ತು ಎಡಿನ್ ಆಫೀಸ್ ಫೆಸಿಲಿಟೇಟರ್ಗಳಾಗಿ ವಿಂಗಡಿಸಲಾಗಿದೆ.

ಮೈಸೂರು ಮತ್ತು ಸುತ್ತಮುತ್ತಲಿನ ಹಸಿದ ಜೀವಿಗಳಿಗೆ ಅಗತ್ಯ ಆಹಾರ ಪೊಟ್ಟಣಗಳೊಂದಿಗೆ  ನೀರಿನ ಬಾಟಲಿಗಳೊಂದಿಗೆ ದಿನ ನಿತ್ಯ ಸುಮಾರು 1000 ಆಹಾರ ಪ್ಯಾಕೆಟ್‌ಗಳನ್ನು ವಿತರಿಸಲಾಗುತ್ತದೆ. ಎಡಿನ್ ಆನ್-ಸೈಟ್ ಸ್ವಯಂಸೇವಕರಾದ ಬಿ ವಿಜಯ್ ಮಚಯ್ಯ, ಪೂಜಾ ವಿ, ಕುಶಾಲ್ ರಾವ್ ಟಿ, ಶರತ್ ಚಂದ್ರ ಆರ್, ಗೌತಮ್ ಬಿಎಂ, ಭಾರತ್ ಎಸ್, ರಾಘವೇಂದ್ರ ಡಿ, ಎಚ್ಎಸ್ ಮೋಹನ್ ಕುಮಾರ್, ರವಿ ನಂದನ್, ಮಂಜುನಾಥ್ ಎನ್, ಬಿಂದು ಜಿಪಿ ಮತ್ತು ಕೆ ರಾಘವ್ ಪ್ರಸಾದ್ ಅವರು ಈ ತಂಡದ ಸಕ್ರಿಯ ಸದಸ್ಯರಾಗಿದ್ದಾರೆ, ಏಪ್ರಿಲ್ 2, 2020 ರಂದು ಪ್ರಾರಂಭವಾದ ಈ ಕಾರ್ಯ ಕೋವಿಡ್ 19 ಸಂಕಷ್ಟ ಕಾಲ ಕೊನೆಗೊಳ್ಳುವವರೆಗೂ ಮುಂದುವರೆಯಲಿದೆ.

ಈ ಆಹಾರ ಪ್ಯಾಕೆಟ್‌ಗಳನ್ನು ಕೆಆರ್ ಆಸ್ಪತ್ರೆಯಲ್ಲಿನ ರೋಗಿಗಳ ಸಂಬಂಧಿಕರಿಗೆ, ಮನೆಯಿಲ್ಲದ ವಲಸಿಗರು, ನಾಗರಿಕ ಕಾರ್ಮಿಕರು, ಒಂಟಿ ಹಿರಿಯ ನಾಗರಿಕರು, ಕೈಬಿಟ್ಟ ಸಾಕುಪ್ರಾಣಿಗಳು ಮತ್ತು ಮೈಸೂರು ಮತ್ತು ಸುತ್ತಮುತ್ತಲಿನ ಕರ್ತವ್ಯನಿರತ ಪೊಲೀಸ್ ಸಿಬ್ಬಂದಿಗೆ ದಿನ ನಿತ್ಯ ವಿತರಿಸಲಾಗುತ್ತದೆ. ವಿತರಣೆಯು ಪ್ರತಿದಿನ ಬೆಳಿಗ್ಗೆ 11.30 ಕ್ಕೆ ಪ್ರಾರಂಭವಾಗುತ್ತದೆ ಮತ್ತು  ಅಗತ್ಯಕ್ಕನುಗುಣವಾಗಿ ತಂಡವು ನಗರದ ಹೊರವಲಯ ಮತ್ತು ದೂರದ ಸ್ಥಳಗಳನ್ನು ಒಳಗೊಂಡಂತೆ ಮೈಸೂರಿನ ವಿವಿಧ ಸ್ಥಳಗಳಿಗೆ ಆನ್‌ಸೈಟ್ ಸ್ವಯಂಸೇವಕರು ತಮ್ಮ ದ್ವಿಚಕ್ರವಾಹನಗಳಲ್ಲಿ ಸಂಚರಿಸುತ್ತಾ ಪ್ರತಿಯೊಬ್ಬರೂ 20 ರಿಂದ 30 ಫುಡ್ ಪ್ಯಾಕೆಟ್‌ಗಳನ್ನು ವಿತರಿಸುವ  ಕೆಲಸ ಮಾಡುತ್ತಿದ್ದಾರೆ.

ಈ ತಂಡವು ಮೈಸೂರಿನ ವಿವಿಧ ಸ್ಥಳಗಳಲ್ಲಿ ಸಂಚರಿಸುತ್ತಾ ಆಹಾರದ ಅಗತ್ಯವಿರುವವರನ್ನು ತಿಳಿದುಕೊಳ್ಳಲು ಮಹಾನಗರಪಾಲಿಕೆಯ ಸಿಬ್ಬಂದಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತದೆ.  ಅಲ್ಲದೆ ತಂಡವು ವಿತರಿಸುವ ಆಹಾರವನ್ನು ಸ್ವಚ್ಛ ಹಾಗೂ ಆರೋಗ್ಯಕರ ವಾತಾವರಣದಲ್ಲಿ ಶುದ್ಧ ಸಾಮಗ್ರಿಗಳಿಂದ ತಯಾರಿಸಲಾಗುತ್ತದೆ. ವಿತರಿಸುವ ಮೆನುವಿನಲ್ಲಿ ರೈಸ್ ಬಾತ್, ಚಿತ್ರಾನ್ನ ಮತ್ತು ಮೊಸರನ್ನ ಸೇರಿವೆ. ಈ ಕಾರ್ಯಕ್ರಮವನ್ನು ಎಡಿನ್ ಗ್ರೂಪ್ ಸದಸ್ಯರ  ಧನಸಹಾಯದಿಂದ ನಡೆಸಲಾಗುತ್ತಿದ್ದು,  ಮೈಸೂರಿನ ಯಾವುದೇ  ಜನರು ಈ ಸಂಕಷ್ಟ ಸಮಯದಲ್ಲಿ ಹಸಿವಿನಿಂದ ಬಳಲದಂತೆ ನೋಡಿಕೊಳ್ಳುವುದು ಈ  ಗ್ರೂಪ್ ನ ಮುಖ್ಯ ಧ್ಯೇಯವಾಗಿದೆ.

ಆಹಾರದ ಅಗತ್ಯವಿರುವವರು    ಕುಶಲ್ ರಾವ್ ಟಿ, 9986625070, ರಾಘವೇಂದ್ರ ಡಿ, 9538469916, ಭರತ್ ಎಸ್, 9880875412, ಬಿಂದು ಜಿಪಿ, 9980802873, ಎಚ್ಎಸ್ ಮೋಹನ್ ಕುಮಾರ್, 9886316464 ಮತ್ತು ಪೂಜಾ ವಿ, 9538920692 ಇವರಿಗೆ ಕರೆ ಮಾಡಬಹುದು . ಏಪ್ರಿಲ್ 30 ರ ವರೆಗಿನ ಈ ಉತ್ತಮ ಅಭಿಯಾನವನ್ನು  ಮೈಸೂರು ಸ್ಟೇ ಹೋಟೆಲ್, ಮೈಸೂರಿನ ಸ್ಮಾರ್ಟ್ ಸೊಲ್ಯೂಷನ್ಸ್ ಈವೆಂಟ್ಸ್ ಆಹಾರವನ್ನು ತಯಾರಿಸುವ ಮತ್ತು ವಿತರಿಸುವ ಕಾರ್ಯವನ್ನು ಮಾಡುತ್ತಿದೆ.

ಎಡಿನ್ ಆಫ್-ಸೈಟ್ ಫೆಸಿಲಿಟೇಟರ್ಸ್  

ಮನೆಯಲ್ಲಿರುವ ಫೆಸಿಲಿಟರುಗಳು  ಸಾಮಾಜಿಕ ವೇದಿಕೆಗಳನ್ನು ಬಳಸಿಕೊಂಡು ಕೋವಿಡ್19 ಜಾಗೃತಿಯನ್ನು ಮೂಡಿಸುವುದು, ಸಮುದಾಯಕ್ಕೆ ಬೇಕಾದ ಖರೀದಿಗೆ ಸಹಾಯ ಮಾಡುವುದು. ಹಿರಿಯ ನಾಗರಿಕರಿಗೆ ತುರ್ತು ವೈದ್ಯಕೀಯ ಸಹಾಯ ಮಾಡುವುದು. ಯಾವುದೇ ಕೋವಿಡ್ ಅಲ್ಲದ ವೈದ್ಯಕೀಯ ತುರ್ತು ಪರಿಸ್ಥಿತಿಗಳಿಗೆ ವಾಹನದ ವ್ಯವಸ್ಥೆ ಮಾಡುವುದು. ಹಸಿದ ಸಾಕುಪ್ರಾಣಿಗಳಿಗೆ ಆಹಾರ,ಯಾವುದೇ ಇತರ ಅಗತ್ಯ ತುರ್ತು ಸಹಾಯದಂತಹ   ಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ.

ಸಮುದಾಯದ ವಾಟ್ಸಾಪ್ ಗುಂಪನ್ನು ರಚಿಸುವಚಿಸುವ ಮೂಲಕ, ಮನೆಯಲ್ಲಿ ಉಳಿಯುವುದರ ಪ್ರಾಮುಖ್ಯತೆ, ಸಾಮಾಜಿಕ ಅಂತರದ ಮಹತ್ವ, ಮಾಸ್ಕ್ ಗಳನ್ನು  ಬಳಸುವುದು, ಸ್ಯಾನಿಟೈಜರ್‌ಗಳೊಂದಿಗೆ ಕೈ ತೊಳೆಯುವುದು ಮತ್ತು ಸ್ವಯಂ ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸುತ್ತಾ. ಅಗತ್ಯ ತುರ್ತು ಸಹಾಯವಾಣಿ ಸಂಖ್ಯೆಯನ್ನು ಹಮ್ಚಿಕೊಳ್ಳಲಾಗುತ್ತಿದೆ.

ಸದಸ್ಯರು ತಮಗೆ  ಹತ್ತಿರವಿರುವ ಅಂಗಡಿಯೊಂದನ್ನು ಗುರುತಿಸಿ,ರಚಿಸಿದ ವಾಟ್ಸಾಪ್ ಗುಂಪಿನ ಸಹಾಯದಿಂದ, ಅಗತ್ಯವಿರುವವರಿಗೆ ಅವರ ಅಗತ್ಯೆಗನುಗುಣವಾಗಿ ಅದು ಆಹಾರ ಪದಾರ್ಥಗಳು / ಔಷಧಿಗಳನ್ನು ಮನೆಗೆ ತಲುಪಿಸುತ್ತದೆಯಲ್ಲದೆ ಅವರಿಗೆ ಬೇಕಾದ ಖರೀದಿಗೆ ಸಹಾಯ ಮಾಡುತ್ತಾರೆ.

ಹಿರಿಯ ನಾಗರಿಕರಿಗೆ ಸಹಾಯ

ಹಿರಿಯ ನಾಗರಿಕರಿಗೆ ಅಗತ್ಯ ಆಹಾರ ವಸ್ತುಗಳು, ತುರ್ತು ಮೆಡಿಸಿನ್ಸ್ ಮತ್ತು ಯಾವುದೇ ಇತರ ತುರ್ತು ವಸ್ತುಗಳನ್ನು ಖರೀದಿಸಲು ಆಫ್‌ಸೈಟ್ ಫೆಸಿಲಿಟೇಟರ್ ಅನುಕೂಲ ಮಾಡಿಕೊಡುತ್ತಾರೆ.

ಫೆಸಿಲಿಟೇಟರ್ಗಳಿಗೆ ಮನೆಯಲ್ಲಿಯೇ ಇರಲು ಮತ್ತು ಅಗತ್ಯವಿರುವವರನ್ನು ಬೆಂಬಲಿಸಲು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ಅವರು ಅಗತ್ಯವಿರುವವರಿಗೆ ಸಾಧ್ಯವಾದಷ್ಟು ಮಾಹಿತಿ / ಅರಿವು ಮೂಡಿಸುತ್ತಾ ಆಧುನಿಕ ಸೌಲಭ್ಯಗಳನ್ನು ಬಳಸಿ ಕಾರ್ಯ ನಿರ್ವಹಿಸುತ್ತಾ ವೈಯುಕ್ತಿಕ ಭೇಟಿ ನೀಡುವುದನ್ನು ತಪ್ಪಿಸುತ್ತಾರೆ. ಸುಮಾರು 40 ಆಫ್‌ಸೈಟ್ ಫೆಸಿಲಿಟೇಟರ್‌ಗಳು ಈಗಾಗಲೇ ಕಾರ್ಯದಲ್ಲಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: