ಮೈಸೂರು

ನಕಲಿ ಪತ್ರಕರ್ತನ ವಿರುದ್ಧ ಪ್ರಕರಣ ದಾಖಲು : ವ್ಯಕ್ತಿಗಾಗಿ ಪೊಲೀಸರ ಶೋಧ

ಮೈಸೂರು,ಏ.7:-  ಪತ್ರಕರ್ತನೆಂದು ಹೇಳಿಕೊಂಡು ಅನಾವಶ್ಯಕವಾಗಿ ಓಡಾಡುತ್ತಿದ್ದ ನಕಲಿ ಪತ್ರಕರ್ತನೋರ್ವನ ವಿರುದ್ಧ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಕಲಿ ಪತ್ರಕರ್ತನಿಗಾಗಿ ಶೋಧಕಾರ್ಯ ನಡೆದಿದೆ.

ಮಂಡಿ ಠಾಣೆಯಲ್ಲಿ ಠಾಣಾ ನಿರೀಕ್ಷಕರಾದ ನಾರಾಯಣ ಸ್ವಾಮಿ ಪ್ರಕರಣ ದಾಖಲಿಸಿದ್ದಾರೆ.. ಅವರು ಏ.5ರಂದು ಸಂಜೆ 6.30ಕ್ಕೆ ತಮ್ಮ ಠಾಣಾ ಸಿಬ್ಬಂದಿಗಳ ಜೊತೆಗೆ ತಮ್ಮ ಠಾಣಾ ಸರಹದ್ದು ಚರ್ಚ್ ಸರ್ಕಲ್ ಬಳಿ ಅನಾವಶ್ಯಕವಾಗಿ ಓಡಾಡುವ ವಾಹನಗಳನ್ನು ಮತ್ತು ವ್ಯಕ್ತಿಗಳನ್ನು ಚೆಕ್ ಮಾಡುತ್ತಿದ್ದ ವೇಳೆ ಅಶೋಕ ರಸ್ತೆ ಸಿಸಿಬಿ ಕಛೆರಿ ಕಡೆಯಿಂದ ಓರ್ವ ವ್ಯಕ್ತಿ  ಪದೇ ಪದೇ ದ್ವಿಚಕ್ರವಾಹನವನ್ನು ಓಡಿಸಿಕೊಂಡು ಹೋಗಿ ಬರುತ್ತಿರುವುದು ಮಾಡುತ್ತಿದ್ದ. ಈ ವಾಹನವನ್ನು ಸಂಜೆ  6.45ರ ಸಮಯದಲ್ಲಿ ತಡೆದು ವಿಚಾರ ಮಾಡಲಾಗಿ ಆತನ ಹೆಸರು ಇರ್ಫಾನ್ ಪಾಷಾ ಎಂದು ತಿಳಿಸಿದ ಈ ವ್ಯಕ್ತಿ ಒಂದು ಗುರುತಿನ ಚೀಟಿಯನ್ನು ತೋರಿಸಿ ತಾನು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಪರಿಷತ್ ವೈಸ್ ಪ್ರೆಸಿಡೆಂಟ್ ಮೈಸೂರು ಜಿಲ್ಲೆ ಎಂದಿದ್ದು, ಮತ್ತೊಮ್ಮೆ ಕೇಳಿದಾಗ ಹ್ಯೂಮನ್ ರೈಟ್ಸ್ ಇಂಡಿಯಾ ಫೌಂಡೇಶನ್ &ಲೇಬರ್ ಲಿಬರಲ್ ನವ ನಿರ್ಮಾಣ ಸೇನೆಯ ವೈಸ್ ಪ್ರೆಸಿಡೆಂಟ್ ಎಂದು ಹಾಗೂ ಇಂಡಿಯನ್ ಹ್ಯೂಮನ್ ರೈಟ್ಸ್ ನ್ಯೂಸ್ ಟೈಮ್ಸ್ ಮೀಡಿಯಾ ಜರ್ನಲಿಸ್ಟ್ ಎಂದು ತಿಳಿಸಿ ಐಡಿ ಕಾರ್ಡ್ ನೀಡಿದ್ದ. ನಂತರ ಹೆಸರು, ವಿಳಾಸ, ಮೊಬೈಲ್ ನಂಬರ್ ಮತ್ತು ಕಾರ್ಡ್ ನಲ್ಲಿದ್ದ ಸಂಸ್ಥೆಗಳ ಬಗ್ಗೆ ಕೂಲಂಕುಷವಾಗಿ ವಿಚಾರ ಮಾಡಲ಻ಗಿ ಮೊದಲಿಗೆ ಮೊಬೈಲ್ ನಂಬರ್ 7019306390 ಎಂದು ತಿಳಿಸಿದ್ದ. ನಂತರ ಉಳಿದ ಎಲ್ಲಾ  ಪ್ರಶ್ನೆಗಳಿಗೆ ಸಮಂಜಸವಾದ ುತ್ತರ ನೀಡದೆ ತಬ್ಬಿಬ್ಬಾಗಿದ್ದ. ಐಡಿ ಕಾರ್ಡ್ ಗಳನ್ನು ಪೊಲೀಸರ ಬಳಿ ಬಿಟ್ಟು  ತಾನು ಬಂದ ಬೈಕ್ ನಲ್ಲಿ ಜೋರಾಗಿ ಓಡಿಸಿಕೊಂಡು ತಪ್ಪಿಸಿಕೊಂಡು ಹೋಗಿದ್ದಾನೆ. ಹಿಂಬಾಲಿಸಿದಾಗ ಪತ್ತೆಯಾಗಿಲ್ಲ. ಆತನ ದ್ವಿಚಕ್ರವಾಹನದ ಮುಂದೆ ಮತ್ತು ಹಿಂಭಾಗದ ನಂಬರ್  ನೋಡಲಾಗಿ ಅಸ್ಪಷ್ಟವಾಗಿರುವುದು ಕಂಡು  ಬಂದಿದೆ. ಕೋವಿಡ್-19 ಎಂಬ ಸಾಂಕ್ರಾಮಿಕ ರೋಗ ದಿನೇ ದಿನೇ ಮೈಸೂರು ಭಾಗದಲ್ಲಿ ಹೆಚ್ಚುತ್ತಿದ್ದು  ಈ ಸಾಂಕ್ರಾಮಿಕ ರೋಗ ಹರಡುವಿಕೆ ವಿಧಾನದ ಬಗ್ಗೆ ಈತನಿಗೆ ಅರಿವು ಮತ್ತು ಜ್ಞಾನ ಇದ್ದರೂ  ಸಹ ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯತೆಯಿಂದ ಸಾರ್ವಜನಿಕವಾಗಿ , ಅನಗತ್ಯವಾಗಿ ತಿರುಗಾಡುವುದರಿಂದ ಈತನಿಂದಲೇ ಸಾಂಕ್ರಾಮಿಕ ರೋಗ ಬೇರೆಯವರಿಗೆ ಹರಡುವ ಸಾಧ್ಯತೆ ಇದೆ. ಈತ ಪತ್ರಕರ್ತನಲ್ಲದಿದ್ದರೂ ಸಹ ಪತ್ರಕರ್ತ ಎಂದು ತಿರುಗಾಡುತ್ತಿದ್ದರಿಂದ ನಕಲಿ ಪತ್ರಕರ್ತನಾದ ಇರ್ಫಾನ್ ಪಾಷಾ ವಿರುದ್ಧ ಮಂಡಿ ಠಾಣೆಯಲ್ಲಿ ಮೊ.ಸಂ.44/2020 ಕಲಂ 188,269,419,420 ಐಪಿಸಿ ಪ್ರಕರಣ ದಾಖಲು ಮಾಡಿಕೊಂಡು ಆರೋಪಿ ಪತ್ತೆಕಾರ್ಯ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: