ಮೈಸೂರು

ಸಿಎಂ ಕೋವಿಡ್ ಪರಿಹಾರ ನಿಧಿಗೆ ಶ್ರೀ ಜೈನ್ ಶ್ವೇತಾಂಬರ್ ತೇರಾಪಂತ್ ಮಹಿಳಾ ಮಂಡಲ್ ವತಿಯಿಂದ ದೇಣಿಗೆ

ಮೈಸೂರು,ಏ.7:- ಮುಖ್ಯ ಮಂತ್ರಿಗಳ ಕೋವಿಡ್ 19  ಪರಿಹಾರ ನಿಧಿಗೆ   ಶ್ರೀ ಜೈನ್ ಶ್ವೇತಾಂಬರ್ ತೇರಾಪಂತ್ ಮಹಿಳಾ ಮಂಡಲ್  ಮೈಸೂರು ಶಾಖೆಯಿಂದ  ಒಂದು ಲಕ್ಷ ಒಂದುಸಾವಿರ ರೂ ದೇಣಿಗೆ ನೀಡಲಾಯಿತು.

ಮೈಸೂರಿನ   ಶ್ರೀ ಜೈನ್ ಶ್ವೇತಾಂಬರ್ ತೇರಾಪಂತ್ ಮಹಿಳಾ ಮಂಡಲ್   ವತಿಯಿಂದ ಮುಖ್ಯ ಮಂತ್ರಿಗಳ ಕೋವಿಡ್ 19  ಪರಿಹಾರ ನಿಧಿಗೆ   ಒಂದು ಲಕ್ಷ ಒಂದುಸಾವಿರ ರೂಪಾಯಿಯ ಡಿ ಡಿ ಯನ್ನು  ಮೈಸೂರು ಅಪರ ಜಿಲ್ಲಾಧಿಕಾರಿಯವರಾದ   ಪೂರ್ಣಿಮಾ ಬಿ ಆರ್  ಅವರಿಗೆ  ನೀಡಲಾಯಿತು .

ಈ ಸಂದರ್ಭದಲ್ಲಿ ತೇರಾಪಂಥ್ ಮಹಿಳಾ ಮಂಡಳಿಯ ಅಧ್ಯಕ್ಷೆ    ಸುಧಾನೋಲ್ಕಾ ,ಉಪಾಧ್ಯಕ್ಷೆ   ಇಂದು ಜಿ ಪಿಟ್ಲಿಯ &  ಅನಿತಾ ಕಠಾರಿಯ ,ಕಾರ್ಯದರ್ಶಿನಿ   ಸೀಮಾ ದೇರಾಸರಿಯ , ಶ್ರೀ ಜೈನ್ ಶ್ವೇತಾಂಬರ್  ತೇರಾಪಂತ್ ಸಭಾದ ರಮೇಶ್ ಚಂದ್ ಜೈನ್ ಹಾಗೂ ಉದ್ಯಮಿ ಸುರೇಶ ಕುಮಾರ್ ಜೈನ್ ಇದ್ದರು.,

ಇದೇ ಸಂದರ್ಭದಲ್ಲಿ ಸುಧಾನೋಲ್ಕಾ ರವರು ಅಪರ ಜಿಲ್ಲಾಧಿಕಾರಿಗಳಿಗೆ  ಮಹಿಳಾ ಮಂಡಲದ ಕಾರ್ಯ ಚಟುವಟಿಕೆ  ಅಂಗರಚನೆಗಳನ್ನು ವಿವರಿಸಿದರು . (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: