ಮೈಸೂರು

ನಿರ್ಗತಿಕರಿ ಊಟ ಹಂಚಿಕೆ

ಮೈಸೂರು,ಏ.7:- ಮೈಸೂರಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೂ ಕೊರೋನಾ ಭೀತಿಯನ್ನೂ ಲೆಕ್ಕಿಸದೇ ಉಮೇಶಣ್ಣ ಸ್ನೇಹ ಬಳಗ ಮತ್ತು ರಾಷ್ಟ್ರೀಯ ಮಾನವನ ಹಕ್ಕುಗಳ ಸಮಿತಿ ವತಿಯಿಂದ ನಿರ್ಗತಿಕರಿಗೆ ಊಟ ಹಂಚಲಾಗುತ್ತಿದೆ.

ಉಮೇಶಣ್ಣ ಸ್ನೇಹ ಬಳಗ ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಸಮಿತಿ ವತಿಯಿಂದ ಖ್ಯಾತ ವಕೀಲರಾದ ಉಮೇಶ್ ಹಾಗೂ  ಉಮೇಶಣ್ಣ ಸ್ನೇಹ ಬಳಗದ ಸದಸ್ಯರು ಮೈಸೂರಿನ ಹಲವು ಕಡೆ ಹಸಿವಿನಿಂದ ನೊಂದವರಿಗೆ, ನಿರ್ಗತಿಕರಿಗೆ, ಪೌರಕಾರ್ಮಿಕರಿಗೆ ಹಾಗೂ ಆರಕ್ಷಕ ಬಂಧುಗಳಿಗೆ ಹಂಚಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: