ಪ್ರಮುಖ ಸುದ್ದಿ

ಮಂಡ್ಯ ಜಿಲ್ಲೆಯ ಮಳವಳ್ಳಿಗೆ ಪ್ರವೇಶಿಸಿದ ಕೊರೋನಾ : ಕಾನೂನು ಸುವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಿದ ಐಜಿಪಿ ವಿಪುಲ್ ಕುಮಾರ್

ರಾಜ್ಯ(ಮಂಡ್ಯ)ಏ.7:- ವಿಶ್ವವನ್ನೇ ನಡುಗಿಸುತ್ತಿರುವ ಕೊರೋನಾ ಸೋಂಕು ಮಂಡ್ಯ ಜಿಲ್ಲೆಯ ಮಳವಳ್ಳಿಗೆ ಪ್ರವೇಶಿಸಿದ ಹಿನ್ನೆಲೆ ದಕ್ಷಿಣ ವಲಯ ಐಜಿಪಿ ವಿಪುಲ್ ಕುಮಾರ್ ಭೇಟಿ ನೀಡಿ ಕಾನೂನು ಸುವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಿದರು.

ಪಟ್ಟಣದ ಈದ್ಗಾ ಮೊಹಲ್ಲಾ ಪ್ರದೇಶಕ್ಕೆ ಭೇಟಿ ನೀಡಿ ಮಾತನಾಡಿದ ಅವರು ಕೊರೋನಾ ಸೋಂಕು ಮಳವಳ್ಳಿಯಲ್ಲಿ ವ್ಯಾಪಿಸಿರುವ ಹಿನ್ನೆಲೆಯಲ್ಲಿ ಸೋಂಕು ಹರಡುವುದನ್ನು ತಡೆಗಟ್ಟಲು ಸಾರ್ವಜನಿಕರ ಸಹಕಾರ ಮುಖ್ಯ. ಹೀಗಾಗಿ ಜನರು ಮನೆಯಿಂದ ಹೊರಬಾರದೆ ಸರ್ಕಾರದ ಜೊತೆಗೆ ಕೈಜೋಡಿಸಬೇಕು ಎಂದರು.

ಈ ಪ್ರದೇಶದ ಸುತ್ತಮುತ್ತಲಿನ ಮೂರು ಕಿಲೋ ಮೀಟರ್ ವ್ಯಾಪ್ತಿಯನ್ನು ಕಂಟೋನ್ಮೆಂಟ್ ಝೋನ್ ಆಗಿರುವುದರಿಂದ ಯಾರೂ ಓಡಾಟ ನಡೆಸಬಾರದು. ಸಂಪೂರ್ಣವಾಗಿ ಪೊಲೀಸ್ ವಶದಲ್ಲಿ ಇರುತ್ತದೆ ಎಂದರು. ಇದನ್ನು ಮೀರಿ ಕಾನೂನು ಉಲ್ಲಂಘನೆ ಮಾಡಿದವರಿಗೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಇದೇ ಸಂದರ್ಭದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಕೆ. ಪರಶುರಾಮ. ಅಪರ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ .ಡಿವೈಎಸ್ಪಿ ಪೃಥ್ವಿ ತಹಸೀಲ್ದಾರ್ ಚಂದ್ರಮೌಳಿ. ಪುರಸಭೆ ಮುಖ್ಯಾಧಿಕಾರಿ ಗಂಗಾಧರ್ . ಸರ್ಕಲ್ ಇನ್ಸ್ಪೆಕ್ಟರ್ ರಮೇಶ್. ಧರ್ಮೇಂದ್ರ .ತಾಲೂಕು ಅಧಿಕಾರಿ ವೀರಭದ್ರಪ್ಪ ಇದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: