ಮೈಸೂರು

ಜಿಲ್ಲಾಧಿಕಾರಿಗಳಿಗೆ ಸ್ಯಾನಿಟೈಜರ್‌, ಫೇಸ್ ಶೀಲ್ಡ್ಸ್, ಮಾಸ್ಕ್ ನೀಡಿದ ಸೈಕಲ್ ಪ್ಯೂರ್ ಅಗರಬತ್ತೀಸ್

ಮೈಸೂರು,ಏ.7:- ಅಗರಬತ್ತಿಯಿಂದ ಏರೋಸ್ಪೇಸ್‍ವರೆಗೆ ಖ್ಯಾತಿ ಗಳಿಸಿರುವ ಎನ್‍ಆರ್ ಗ್ರೂಪ್‍ನ ಸೈಕಲ್ ಪ್ಯೂರ್ ಅಗರಬತ್ತೀಸ್ ಕೋವಿಡ್-19 ವಿರುದ್ಧದ ಹೋರಾಟವನ್ನು ಕೈಗೊಂಡಿರುವ ಸರ್ಕಾರಕ್ಕೆ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದೆ.

5000 ಹ್ಯಾಂಡ್ ಸ್ಯಾನಿಟೈಜರ್‌ಗಳು, 5000 ಫೇಸ್ ಶೀಲ್ಡ್ಸ್ ಮತ್ತು 5000 ಎನ್ 95 ಮುಖವಾಡಗಳನ್ನು ಪೊಲೀಸ್ ಪಡೆ, ಆಸ್ಪತ್ರೆ ಸಿಬ್ಬಂದಿ, ತುರ್ತು ಕಾರ್ಮಿಕರು ಮತ್ತು ನಗರದ ಅಗತ್ಯವಿರುವ ನಾಗರಿಕರಿಗೆ ವಿತರಿಸಲು, ಸೈಕಲ್ ಪ್ಯೂರ್ ಅಗರಬತ್ತೀಸ್ ನ ವ್ಯವಸ್ಥಾಪಕ ನಿರ್ದೇಶಕರಾದ   ಅರ್ಜುನ್ ರಂಗಾ ಅವರು ಮೈಸೂರಿನ  ಜಿಲ್ಲಾಧಿಕಾರಿ  ಅಭಿರಾಮ್ ಜಿ.ಶಂಕರ್ ಅವರಿಗೆ ನೀಡಿದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: