ಮೈಸೂರು

ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಗೃಹಿಣಿ ನೇಣಿಗೆ ಶರಣು

ಮೈಸೂರು,ಏ.8:- ವಿವಾಹಿತ ಮಹಿಳೆಯೋರ್ವರು ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ನಂಜನಗೂಡು ತಾಲೂಕಿನ ನಗರ್ಲೆ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ನಗರ್ಲೆ ಗ್ರಾಮದ ಮಧುಕುಮಾರ ಅವರ ಪತ್ನಿ ಸುಮಿತ್ರಾ(23) ಎಂದು ಹೇಳಲಾಗಿದೆ.  ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ತನ್ನ ವೇಲ್ ನಿಂದ ಮನೆಯ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೇಣು ಬಿಗಿದುಕೊಂಡು ಅರೆಜೀವವಾಗಿದ್ದ ಇವರನ್ನು ನಂಜನಗೂಡುಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸುವ ವೇಳೆ ಅವರು ಮೃತಪಟ್ಟಿದ್ದರು ಎನ್ನಲಾಗಿದೆ. ತನ್ನ ಮಗಳ ಸಾವಿಗೆ ಅವಳೇ ಕಾರಣವಾಗಿದ್ದಾಳೆ ಎಂದು ಹೊಸಕೋಟೆಯ ನಿವಾಸಿ ಸುಮಿತ್ರಾಳ ತಂದೆ ನಾಗರಾಜು ದೂರಿನಲ್ಲಿ ತಿಳಿಸಿದ್ದು, ಬಿಳಿಗೆರೆ ಠಾಣಾಧಿಕಾರಿ ಆರತಿ ಅವರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೃತ ಗೃಹಿಣಿಗೆ 2ವರ್ಷದ ಮಗುವಿದೆ ಎನ್ನಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: