ಮೈಸೂರು

ಲಾಕ್ ಡೌನ್ ಹಿನ್ನೆಲೆ: ವಾರ್ಡಿನ ಜನತೆಗೆ ನೆರವಿನ ಹಸ್ತ ಚಾಚಿದ ಪಾಲಿಕೆ ಸದಸ್ಯೆ ಶುಭಾ ಎಂ.ಎಸ್

ಮೈಸೂರು,ಏ.8:- ಮೈಸೂರಿನ ಜಯನಗರ 48ನೇ ವಾರ್ಡಿನ ನಗರ  ಪಾಲಿಕೆ ಸದಸ್ಯೆ ಶುಭಾ ಎಂ.ಎಸ್, ಲಾಕ್ ಡೌನ್ ಹಿನ್ನೆಲೆಯಲ್ಲಿ ವಾರ್ಡಿನ ಜನತೆಗೆ ನೆರವಿನ ಹಸ್ತ ಚಾಚಿದ್ದಾರೆ.

ಸ್ಲಂ ಬೋರ್ಡ್ ವತಿಯಿಂದ ಪ್ರತಿದಿನ ಬೆಳಿಗ್ಗೆ 600 ಲೀಟರ್ ಗಳ ಹಾಲಿನ ಪ್ಯಾಕೆಟ್ ಗಳನ್ನು  ಬಡವರಿಗೆ ವಿತರಿಸಲಾಗುತ್ತಿದೆ. ಜತೆಗೆ ಬೆಳಗಿನ ಉಪಹಾರ ಹಾಗೂ  ಮಧ್ಯಾಹ್ನದ ಊಟವನ್ನು  ಚಿನ್ನಗಿರಿ  ಕೊಪ್ಪಲಿನ ಬಡವರಿಗೆ  ವಿತರಿಸುತ್ತಿದ್ದಾರೆ.  ಇದಲ್ಲದೆ ಬಡ ಕುಟುಂಬಗಳಿಗೆ ಉಚಿತವಾಗಿ  ದಿನನಿತ್ಯ ಬಳಸುವ ದಿನಸಿ ಪದಾರ್ಥಗಳನ್ನು ಕೆಲವು ದಾನಿಗಳ ಜೊತೆಗೂಡಿ ಪಾಲಿಕೆ ಸದಸ್ಯೆ ಶುಭಾ ವಿತರಿಸಿದರು . (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: