ಮೈಸೂರು

ರೈಲ್ವೆ ಮತ್ತು ಬಸ್ಸು ನಿಲ್ದಾಣಗಳಲ್ಲಿ ಇದ್ದಂತಹ ನಿರಾಶ್ರಿತರಿಗೆ ಅಗತ್ಯ ವಸ್ತು ವಿತರಣೆ

ಮೈಸೂರು,ಏ.8:- ಇಂದು ಸುಮತಿನಾಥ್ ಜೈನ್  ಶ್ವೇತಾಂಬರ್ ಮೂರ್ತಿ ಪೂಜಕ್ ಸಂಘದ ವತಿಯಿಂದ ಮೈಸೂರಿನಲ್ಲಿ ವಿವಿಧ ಜಿಲ್ಲೆಗಳಿಂದ ಕೆಲಸಕ್ಕೆ ಬಂದಿರುವ ಹಾಗೂ  ರೈಲ್ವೆ ಮತ್ತು ಬಸ್ಸು ನಿಲ್ದಾಣಗಳಲ್ಲಿ ಇದ್ದಂತಹ ನಿರಾಶ್ರಿತರಿಗೆ ಹಾಗೂ ಕೃಷ್ಣಮೂರ್ತಿಪುರಂ ನಲ್ಲಿರುವ ನಿತ್ಯೋತ್ಸವ ಕಲ್ಯಾಣ ಮಂಟಪದ ಗಂಜಿಕೇಂದ್ರದಲ್ಲಿರುವ 53 ನಿರಾಶ್ರಿತರಿಗೆ  ಆಯೋಜಿಸಲಾಗಿದ್ದ ನಿರಾಶ್ರಿತರ ಗಂಜಿ ಕೇಂದ್ರಗಳಲ್ಲಿ ಇರುವವರಿಗೆ ಶಾಸಕರಾದ ಎಸ್ ಎ ರಾಮದಾಸ್ ಅವರ ನೇತೃತ್ವದಲ್ಲಿ ಬೆಡ್ ಶೀಟ್, ಸೋಪು, ಬ್ರಷ್, ಬಿಸ್ಕತ್, ಬಕೆಟ್ ಮುಂತಾದವುಗಳನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ನಗರಪಾಲಿಕೆ ಸದಸ್ಯರಾದ ಪಲ್ಲವಿ ಬೇಗಂ, ನಗರಪಾಲಿಕೆ ಉಪ ಅಯುಕ್ತರಾದ ಶಶಿಕುಮಾರ್, ಕಂದಾಯ ಉಪ ಆಯುಕ್ತರಾದ ಕುಮಾರ್ ನಾಯಕ್, ಅಭಿವೃದ್ಧಿ ಅಧಿಕಾರಿಯಾದ ನಂಜುಂಡೇಗೌಡ, ನಗರಪಾಲಿಕೆ ಅಧಿಕಾರಿಗಳಾದ ದಯಾನಂದ್, ಕಿರಣ್, ಶಿವಸ್ವಾಮಿ ಹಾಗೂ ಲಕ್ಷ್ಮಿಪುರಂ ಪೋಲಿಸ್ ಠಾಣೆಯ ಸಬ್ ಇನ್ಸಪೆಕ್ಟರ್ ಭಂಡಿ ಮತ್ತು ಸಿಬ್ಬಂದಿಗಳು,  ಹನ್ಸರಾಜ್ ಜೈನ್, ಪರ್ವೀನ್ ಜೈನ್, ಅಮಿತ್ ಜೈನ್, ಪ್ರಕಾಶ್ ಜೈನ್, ವಿಕ್ರಂ ಜೈನ್, ಸಂಜಯ್ ಜೈನ್, ಮಹಾವೀರ್ ಜೈನ್, ದಲಿತನ್ ಜೈನ್ ಮುಂತಾದವರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: