ದೇಶಪ್ರಮುಖ ಸುದ್ದಿ

ಅಸ್ಸಾಂನಲ್ಲಿ ಮುಸ್ಲಿಂ ಗಾಯಕಿ ವಿರುದ್ಧ ಫತ್ವಾ : ಶಿವಸೇನೆ ಆಕ್ರೋಶ

ಮುಂಬೈ: ಭಯೋತ್ಪಾದನೆಯ ಕರಾಳ ಮುಖದ ವಿರುದ್ಧ ಹಾಡುಗಳ ಜಾಗೃತಿ ಮೂಡಿಸುತ್ತಿರುವ 16 ವರ್ಷದ ಉದಯೋನ್ಮುಖ ಗಾಯಕಿ ನಹೀದ್ ಅಫ್ರಿನ್ ವಿರುದ್ಧ ಅಸ್ಸಾಮ್ನ 42 ಮೌಲ್ವಿಗಳು ಫತ್ವಾ ಹೊರಡಿಸಿರುವುದಕ್ಕೆ ಶಿವಸೇನೆ ಆಕ್ರೋಶ ವ್ಯಕ್ತಪಡಿಸಿದೆ.

ಈ ಕುರಿತು ಮಾತನಾಡಿರುವ ಶಿವಸೇನೆ ಮುಖಂಡ ಸಂಜಯ್ ರಾವುತ್ ಅವರು, ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನದ ಮೇಲಿ ತಾಲಿಬಾನಿಗಳ ಹಿಡಿತವಿರಬಹುದು. ಅದನ್ನು ಭಾರತದಲ್ಲೂ ಪ್ರಯೋಗಿಸಬಹುದು ಎಂದು ತಿಳಿಯಬೇಡಿ. ಭಾರತ ದೇಶ ತಾಲಿಬಾಲಿಗಳ ಕೈಯಡಿಯಲ್ಲಿಲ್ಲ. ಭಾರತ ಪ್ರಜಾಪ್ರಭುತ್ವ ರಾಷ್ಟ್ರ. ಮೌಲ್ವಿಗಳು ಫತ್ವಾ ಹೊರಡಿಸುವ ಮೂಲಕ ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.

2015ರಲ್ಲಿ ಖಾಸಗಿ ಟಿವಿ ಚಾನೆಲ್‍ ನಡೆಸಿದ್ದ ರಿಯಾಲಿಟಿ ಶೋನಲ್ಲಿ ಅಫ್ರಿನ್ ಮೊದಲ ರನ್ನರ್ ಅಪ್ ಆಗಿದ್ದರು. ಇಸಿಸ್ ಸೇರಿದಂತೆ ಹಲವು ಭಯೋತ್ಪಾದಕ ಸಂಘಟನೆಗಳು ನಡೆಸುತ್ತಿರುವ ಉಗ್ರವಾದದ ವಿರುದ್ಧದ ಗೀತೆಗಳನ್ನು ನಹೀದ್ ಅಫ್ರಿನ್ ಅವರು ಇತ್ತೀಚೆಗೆ ಹಾಡಿದ್ದರು. ಈ ಹಿನ್ನಲೆಯಲ್ಲಿ ಅಫ್ರಿನ್ ಸಾರ್ವಜನಿಕ ಸಂಗೀತ ಕಾರ್ಯಕ್ರಮ ನೀಡದಂತೆ ಅಸ್ಸಾಮಿನ 42 ಮೌಲ್ವಿಗಳು ಫತ್ವಾ ಹೊರಡಿಸಿದ್ದರು.

(ಎನ್‍.ಬಿ.ಎನ್)

Leave a Reply

comments

Related Articles

error: