ಮೈಸೂರು

ಪಡಿತರ ಸಾಮಾಗ್ರಿಗಳನ್ನು ಕೆ.ಆರ್.ನಗರದಲ್ಲಿ ಸಾಂಕೇತಿಕವಾಗಿ ವಿತರಿಸಿದ ಶಾಸಕ ಸಾ.ರಾ.ಮಹೇಶ್

ಮೈಸೂರು,ಏ.8:- ಕೊರೋನಾ ಸೋಂಕು ಹಿನ್ನೆಲೆಯಲ್ಲಿ  ದೇಶದಾದ್ಯಂತ ಲಾಕ್ ಡೌನ್ ಆಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದು ಶಾಸಕ ಸಾ.ರಾ.ಮಹೇಶ್ ತಾಲೂಕಿನ ಎಲ್ಲಾ ಬಿ.ಪಿಎಲ್. ಹಾಗೂ ಎಪಿಎಲ್ ಮತ್ತು ಅಂತ್ಯೋದಯ 70 ಸಾವಿರ ಕುಟುಂಬಗಳಿಗೆ  ದಿನಸಿ ವಿತರಿಸಲು ಮುಂದಾಗಿದ್ದಾರೆ.

ಶಾಸಕ ಸಾ.ರಾ.ಮಹೇಶ್ ಮೂರೂವರೆ ಕೋಟಿ ವೆಚ್ಚದಲ್ಲಿ 10 ಕೆ.ಜಿ.ಅಕ್ಕಿ. 1 ಕೆ.ಜಿ.ಬೆಳೆ, ಉಪ್ಪು ಸೇರಿದಂತೆ ಪಡಿತರ ಸಾಮಾಗ್ರಿಗಳನ್ನು ಇಂದು ಕೆ.ಆರ್.ನಗರದಲ್ಲಿ ಸಾಂಕೇತಿಕವಾಗಿ ವಿತರಿಸಲಾಯಿತು. ಸಾರ್ವಜನಿಕರು ಸರತಿ ಸಾಲಿನಲ್ಲಿ ಅಂತರ ಕಾಯ್ದುಕೊಂಡು ದಿನಸಿ ಸ್ವೀಕರಿಸಿದರು.

ಇದೇ ಸಂದರ್ಭ ತಾಲೂಕು ಜಾದಳ ಅಧ್ಯಕ್ಷ ಚಂದ್ರಶೇಖರ್, ನವನಗರ ಬ್ಯಾಂಕ್ ಅಧ್ಯಕ್ಷ ಕೆ.ಎನ್‌.ಬಸಂತ್.ಜಾದಳ ವಕ್ತಾರ ಕೆ.ಎಲ್.ರಮೇಶ್, ಸಾ.ರಾ.ಸ್ನೇಹ ಬಳಗದ ಅಧ್ಯಕ್ಷ ವಿಜಯ್ ಕುಮಾರ್ ಶಾಸಕರ ಆಪ್ತ ಸಹಾಯಕ ಅರುಣ್ ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: