ಮೈಸೂರು

ವಾಟ್ಸ್  ಆ್ಯಪ್ ಮೂಲಕ ಕೊರೋನಾ ರೋಗ ಹರಡುವಿಕೆ  ಸುಳ್ಳು ಸುದ್ದಿ : ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಮೈಸೂರು,ಏ.8:- ಮೈಸೂರಿನ ವಿವಿಧ ಸ್ಥಳಗಳಲ್ಲಿ ಇರುವ ಲಾಯಲ್ ವರ್ಲ್ಡ್  ಸೂಪರ್ ಮಾರ್ಕೆಟ್ ನ ಮಾಲೀಕರಾದ ಮೊಹಮ್ಮದ್ ಎಂಬವವರ  ವಾಟ್ಸ್  ಆ್ಯಪ್ ಮೊಬೈಲ್ ನಂಬರ್‍ ಗೆ  06/04/2020 ರಂದು ಒಂದು ಮೇಸೆಜ್ ಹಾಗೂ ಒಂದು ಫೋಟೋ ಪಾರ್ವರ್ಡ್ ಆಗಿದ್ದು, ಅದರಲ್ಲಿ ಎರಡು ದಿನಗಳ ಹಿಂದೆ  ಕುವೆಂಪುನಗರದ ಲಾಯಲ್ ವರ್ಲ್ಡ್ ತರಕಾರಿ ಅಂಗಡಿಯ ಮಾಲೀಕರಿಗೆ  ಕೊರೋನಾ ಟೆಸ್ಟ್ ನಲ್ಲಿ ಧನಾತ್ಮಕ  ಅಂಶವಿದೆ.  ಅವರು ದೆಹಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅವರ ಮನೆ ಜಯರಾಮ್ ಕ್ಲಿನಿಕ್ ಎದುರಿನ ರಸ್ತೆಯ ನೆಕ್ಸ್ಟ್ ರಸ್ತೆಯಲ್ಲಿದೆ.  ಅಂತ ಒಂದು ಫೋಟೋ ಸಹ ಶೇರ್ ಆಗಿದ್ದು, ಕುವೆಂಪುನಗರದಲ್ಲಿರುವ  ಲಾಯಲ್ ವರ್ಲ್ಡ್ ಮಾಲೀಕರು ಈ ಕುರಿತು ದೂರು ನೀಡಿದ್ದಾರೆ.

ಯಾರೋ ವ್ಯಕ್ತಿ ಈ ರೀತಿಯ ಸುಳ್ಳು ಸುದ್ದಿಯನ್ನು ವಾಟ್ಸ್ ಆ್ಯಫ್ ಹಾಗೂ ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಟ್ಟಿದ್ದು, ಹಾಗೂ ನ್ಯೂಸ್ ಚಾನೆಲ್ ಗಳಲ್ಲೂ ಸಹ ಪ್ರಸಾರ ಆಗಿದೆ. ಈ ಬಗ್ಗೆ ಲಾಯಲ್ ವರ್ಲ್ಡ್ ಸೂಪರ್ ಮಾರ್ಕೆಟ್‍ಗೆ ಬರುವ ಸಾರ್ವಜನಿಕರು ಗಾಬರಿಗೊಂಡಿದ್ದು, ಅಲ್ಲಿ ಕೆಲಸ ಮಾಡುವವರು ಸಹ ಭಯಭೀತರಾಗಿರುತ್ತಾರೆ. ಸುಳ್ಳು ಸುದ್ದಿಯಲ್ಲಿ ಹೇಳಿದಂತೆ ಲಾಯಲ್ ವರ್ಲ್ಡ್ ಸೂಪರ್ ಮಾರ್ಕೇಟ್  ಗೆ ಸಂಬಂಧಿಸಿದ ಯಾರೊಬ್ಬರು ಸಹ ದೆಹಲಿಯ ತಬ್ಲಿಘಿ ಜಮಾತ್ ಸಭೆಗೆ ಹೋಗಿರುವುದಿಲ್ಲ. ಮಹಮ್ಮದ್‍ ಅವರ ಮಾಲೀಕತ್ವದ ಲಾಯಲ್ ವರ್ಲ್ಡ್  ಸೂಪರ್ ಮಾರ್ಕೆಟ್ ವಿರುದ್ಧ ಈ ರೀತಿ ಸುಳ್ಳು ಸುದ್ದಿ ಹಬ್ಬಿಸಿ ಜನರು ಅವಶ್ಯಕ ವಸ್ತುಗಳನ್ನು ನಮ್ಮ ಅಂಗಡಿಯಲ್ಲಿ ಖರೀದಿಸದಂತೆ ಭೀತಿ ವಾತಾವರಣವನ್ನು ಸೃಷ್ಟಿಸಿರುತ್ತಾರೆ. ಲಾಯಲ್ ವರ್ಲ್ಡ್ ಸೂಪರ್ ಮಾರ್ಕೆಟ್ ಮಾಲೀಕರಿಗೆ ಸಾಮಾಜಿಕ ಜಾಲತಾಣದಲ್ಲಿ ಕೊರೋನಾ ಖಾಯಿಲೆ ಇದೆಯೆಂದು ಸುಳ್ಳು ಸುದ್ದಿ ಹಬ್ಬಿಸಿರುವವನನ್ನು ಪತ್ತೆ ಮಾಡಿ ಕಾನೂನಿನ ರೀತ್ಯಾ ಕ್ರಮ ಕೈಗೊಳ್ಳಿ ಎಂದು ಮಹಮ್ಮದ್‍ ಅವರು ದೂರಿನಲ್ಲಿ ತಿಳಿಸಿದ್ದಾರೆ.

ಈ ಸಂಬಂಧ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,  ಆರೋಪಿ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: