ಮೈಸೂರು

ನಾಗರಿಕರೊಂದಿಗೆ ಬೇಜವಾಬ್ದಾರಿ ವರ್ತನೆ : ಕೆಲಸದಿಂದ ತೆಗೆದುಹಾಕಿದ ಮನಪಾ ಆಯುಕ್ತರು

ಮೈಸೂರು,ಏ.8:- ಮೈಸೂರು ಮಹಾನಗರ ಪಾಲಿಕೆಯ ಕಂಟ್ರೋಲ್ ರೂಂನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹೊರಗುತ್ತಿಗೆ ನೌಕರರೋರ್ವರು ನಾಗರಿಕರೊಂದಿಗೆ ಬೇಜವಾಬ್ದಾರಿಯಿಂದ ವರ್ತಿಸಿದ ಕಾರಣಕ್ಕೆ ಅವರನ್ನು ಸೇವೆಯಿಂದ ತೆಗೆದುಹಾಕಲಾಗಿದೆ ಎಂದು ನಗರ ಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ.

ಪಾಲಿಕೆಯ ಕಂಟ್ರೋಲ್ ರೂಂನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹೊರಗುತ್ತಿಗೆ ನೌಕರರಾದ ಲತಾಕುಮಾರಿ ಎಂಬವರು ನಾಗರಿಕರೊಂದಿಗೆ ಬೇಜವಾಬ್ದಾರಿಯಿಂದ ವರ್ತಿಸಿರುವ ಕುರಿತು ವಿಚಾರಣೆ ಮಾಡಲಾಗಿದ್ದು ನಂತರ ಈ ವಿಷಯವು ಸಾಬೀತಾಗಿರುವ ಕಾರಣ ಅವರನ್ನು ಸೇವೆಯಿಂದ ತೆಗೆದುಹಾಕಲಾಗಿದೆ ಎಂದು ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: