ಕ್ರೀಡೆದೇಶ

ಕೊರೋನಾ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಲು ಟ್ರೋಫಿಗಳನ್ನೆ ಮಾರಿದ ಕ್ರೀಡಾಪಟು

ನವದೆಹಲಿ (ಏ.8): ಕೊರೋನಾ ವಿರುದ್ಧದ ಹೋರಾಟಕ್ಕಾಗಿ ದೇಣಿಗೆ ನೀಡಲು ಭಾರತದ ಕ್ರೀಡಾ ಕ್ಷೇತ್ರದ ಕೊಡುಗೆ ಅಪಾರ. ಅದರಲ್ಲೂ ಭಾರತದ ಗಾಲ್ಫರ್ ಅರ್ಜುನ್ ಭಾಟಿಯಂತೂ ತಾವು ಗೆದ್ದ ಟ್ರೋಫಿಗಳನ್ನೇ ಮಾರಲು ಮುಂದಾಗಿದ್ದಾರೆ.

15 ವರ್ಷದ ಯುವ ಗಾಲ್ಫರ್ ತಾವು ಇದುವರೆಗೆ ಗೆದ್ದ ಟ್ರೋಫಿಗಳನ್ನು ಮಾರಿ 4.5 ಲಕ್ಷ ರೂ. ಸಂಗ್ರಹಿಸಿದ್ದಾರೆ. ಈ ಹಣವನ್ನು ಅವರು ಕೊರೋನಾ ಪರಿಹಾರ ನಿಧಿಗೆ ನೀಡಲಿದ್ದಾರೆ. ಈ ಟ್ರೋಫಿಗಳ ಪೈಕಿ ಮೂರು ವಿಶ್ವ ಚಾಂಪಿಯನ್ ಶಿಪ್ ಮತ್ತು ರಾಷ್ಟ್ರೀಯ ಚಾಂಪಿಯನ್ ಶಿಪ್ ಮೆಡಲ್ ಗಳೂ ಸೇರಿವೆ.

ತಾವು ಗೆದ್ದ ಟ್ರೋಫಿಗಳನ್ನು ತನಗಾಗಿ ಮಾತ್ರ ಇಟ್ಟುಕೊಳ್ಳದೇ ಅವುಗಳನ್ನು ಮಾರಿ ಅದನ್ನು ಜನೋಪಯೋಗಿ ಕಾರ್ಯಕ್ಕೆ ನೆರವಾಗಲು ಬಳಸಿರುವುದು ಸಾರ್ವಜನಿಕರಿಂದ ಭಾರೀ ಮೆಚ್ಚುಗೆ ಗಳಿಸಿದೆ. (ಎನ್.ಬಿ)

Leave a Reply

comments

Related Articles

error: