ಪ್ರಮುಖ ಸುದ್ದಿಮೈಸೂರು

ಕೋವಿಡ್ -19 ; ರಾಜ್ಯದ ಹದಿನೆಂಟು ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದುವರಿಸುವುದು ಅನಿವಾರ್ಯ : ಸಚಿವ ಶ್ರೀರಾಮುಲು

ಮೈಸೂರು,ಏ.8:-  ರಾಜ್ಯದಲ್ಲಿ ಕೋವಿಡ್-19 ವಿಚಾರದಲ್ಲಿ ಸರ್ಕಾರ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದರಿಂದಲೇ 181 ಪ್ರಕರಣಗಳಲ್ಲಿ 28ಮಂದಿ ಗುಣಮುಖರಾಗುವುದು ಸಾಧ್ಯವಾಗಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದರು. ಅಷ್ಟೇ ಅಲ್ಲದೇ ರಾಜ್ಯದ ಹದಿನೆಂಟು ಜಿಲ್ಲೆಗಳಲ್ಲಿ  ಏ.14ರ ನಂತರವೂ ಲಾಕ್ ಡೌನ್ ಮುಂದುವರಿಸುವುದು ಅನಿವಾರ್ಯ ಎಂದು ಅವರು ಅಭಿಪ್ರಾಯಪಟ್ಟರು.

ಅವರಿಂದು ಮೈಸೂರು ಪ್ರವಾಸ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ ಪ್ರಧಾನ ಮಂತ್ರಿಗಳು ಲಾಕ್ ಡೌನ್ ಮುಂದುವರಿಸಬೇಕಾ ಅಥವಾ ಇಲ್ಲಿಗೆ ಸ್ಟಾಪ್ ಮಾಡಬೇಕಾ ಎಂಬುದನ್ನು ವಿಪಕ್ಷ ನಾಯಕರ ಜೊತೆಯಲ್ಲಿ ವಿಡಿಯೋ ಕಾನ್ಸರನ್ಸ್ ಮಾಡುವ ಮೂಲಕ 11ನೇ ತಾರೀಖಿನಂದು ಒಂದು ಅಂತಿಮವಾದ ತೀರ್ಮಾನಕ್ಕೆ ಬರುವುದಾಗಿ ಹೇಳಿದ್ದಾರೆ .  ರಾಜ್ಯದಲ್ಲಿ ಕೂಡ ಕೊರೋನಾ ವೈರಸ್   181 ಪಾಸಿಟಿವ್ ಕೇಸ್ ಇದ್ದು ಅದರಲ್ಲಿ 28ಮಂದಿ ಗುಣಮುಖರಾಗಿದ್ದಾರೆ. 181ರಲ್ಲಿ  28ಮಂದಿ ಗುಣಮುಖರಾಗ್ತಿದ್ದಾರೆ ಅಂದರೆ ರಾಜ್ಯದಲ್ಲಿ ಕೋವಿಡ್-19 ವಿಚಾರದಲ್ಲಿ ಸರ್ಕಾರ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಈಗಷ್ಟೇ ಸುದ್ದಿ ಬಂತು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಏಪ್ರೀಲ್ 30ರವರೆಗೂ ಲಾಕ್ ಡೌನ್ ಮುಂದುವರಿಸಬೇಕೆಂದು ತೀರ್ಮಾನ ತಗೊಂಡಿದ್ದಾರೆ ಅಂತ. ಅದಕ್ಕೋಸ್ಕರ ನಮ್ಮ ಸಿಎಂ ಯಡಿಯೂರಪ್ಪನವರು 4ಗಂಟೆಗೆ ಎಲ್ಲ ಹಿರಿಯ ವೈದ್ಯರನ್ನು ಕರೆದು ಕೋವಿಡ್ 19ಬಗ್ಗೆ ಯಾವ ರೀತಿ ಎಕ್ಸಿಟ್ ಆಗಬೇಕು. ಈ ಕೋವಿಡ್ 19ಎಕ್ಸಿಟ್ ಸಲುವಾಗಿ ಅನೇಕ ಹಿರಿಯರನ್ನು ಕರೆದು ಸಲಹೆ ಪಡೆಯುತ್ತಿದ್ದಾರೆ. ನಾಳೆ ಕ್ಯಾಬಿನೆಟ್ ಇದೆ. ಅದರಲ್ಲಿ ಕೋವಿಡ್-19 ವಿಚಾರದಲ್ಲಿ  ಸುದೀರ್ಘ ಚರ್ಚೆ ಮಾಡಬೇಕಾಗಿದೆ. ರಾಜ್ಯದಲ್ಲಿ ಕೆಲವು ರೆಡ್ ಜೋನ್ ಗಳಾಗಿದೆ. ಮೈಸೂರು ಕೂಡ ರೆಡ್ ಜೋನ್ ಆಗಿದೆ.  35 ಪಾಸಿಟಿವ್ ಕೇಸ್ ಇದೆ. 35 ಪಾಸಿಟಿವ್ ಕೇಸ್ ಗಳಲ್ಲಿ ಸುಮಾರಾಗಿ ಒಬ್ಸರ್ವೇಶನ್ ನಲ್ಲಿ 3305ಮಂದಿ ಇದ್ದರೂ,  1715ಮಂದಿ ಕ್ವಾರೆಂಟೈನ್ ನಲ್ಲಿದ್ದಾರೆ. ಸಾಕಷ್ಟು ಮಂದಿ ಅವರ 14 ದಿನದ ಅವಧಿ ಮುಗಿದ ನಂತರ ಡಿಸ್ಚಾರ್ಜ್ ಆಗಿದ್ದಾರೆ. ಶಾಸಕ ಹರ್ಷವರ್ಧನ್  ಅವರು ನಂಜನಗೂಡಿನಲ್ಲೇ ಇದ್ದು ಅಲ್ಲಿನ ಜನರ ಜೊತೆ ಇದ್ದು ಎಲ್ಲ ರೀತಿಯಲ್ಲೂ ಜನರಿಗೆ ತೊಂದರೆಯಾಗಬಾರದೆಂದು ಕೆಲಸ ಮಾಡ್ತಿದ್ದಾರೆ. ಈ ನಂಜನಗೂಡು ಪ್ರದೇಶದಲ್ಲಿ  ತೊಂದರೆಯಲ್ಲಿರುವ ಜನರಿಗೆ ಸರ್ಕಾರದಿಂದ ಸವಲತ್ತು ಕೊಡಿಸುವ ಕೆಲಸ ಮಾಡ್ತಿದ್ದಾರೆ. ಜ್ಯುಬಿಲಿಯೆಂಟ್ ಕಂಪನಿಯದೆ 24ರಷ್ಟು ಕೇಸಿದೆ. 24ರಿಂದ ಝೀರೋ ಆಗಬೇಕು. ಅಲ್ಲಿಯವರೆಗೆ ಆ ಕಾರ್ಖಾನೆ ಪ್ರಾರಂಭವಾಗಬಾರದು ಅದು ಹರ್ಷವರ್ಧನ್ ಅವರ ಬೇಡಿಕೆಯಾಗಿದೆ..  ಅವರೇನು ಬೇಡಿಕೆ ಇಟ್ಟಿದ್ದಾರೋ ಅದನ್ನು ನಾನು ಮುಖ್ಯಮಂತ್ರಿಗಳ ಜೊತೆ ಮಾತಾಡಿ ಚರ್ಚೆ ಮಾಡಿ ಈ 24ಕೇಸ್ ಗಳು ಝೀರೋವರೆಗೆ ಬರೋತನಕವೂ ಕೆಲಸ ಆರಂಭವಾಗಬಾರದೆಂದು ಸಿಎಂ ಗೆ ನಾನು ಮನವರಿಕೆ ಮಾಡಿಕೊಡುತ್ತೇನೆ. ಅದಕ್ಕೋಸ್ಕರ ಇವತ್ತು ಕೋವಿಡ್ ಬೀದರ್, ಕಲ್ಬುರ್ಗಿ ಯಿಂದ ಚಾಮರಾಜನಗರ ಇಲ್ಲಿಯವರೆಗೆ ಪ್ರವಾಸ ಮಾಡ್ತಿದ್ದೇನೆ ಎಂದರು.

ಡಾಕ್ಟರ್, ಜಿಲ್ಲಾಡಳಿತ, ಪೊಲೀಸ್ ನವರ ಕೆಲಸ ಶ್ಲಾಘನೀಯ. ಅವರಲ್ಲಿ  ಆತ್ಮಸ್ಥೈರ್ಯ ತುಂಬಿಸಬೇಕೆಂಬ ಕಾರಣದಿಂದ ಇಡೀ ರಾಜ್ಯದಲ್ಲಿ ಪ್ರವಾಸ ಮಾಡ್ತಿದ್ದೇನೆ.   ಕೆಲವು ಕಡೆ ಜಾಸ್ತಿ ಪಾಸಿಟಿವ್ ಬಂದಾಗ ಶಾಸಕರು ಕುಗ್ಗಿ ಹೋಗ್ತಿದ್ದಾರೆ. ಅವರಿಗೆ ಆತ್ಮಸ್ಥೈರ್ಯ ತುಂಬಿಸುವ ಕೆಲಸ ಮಾಡಬೇಕು. ಜಿಲ್ಲಾಡಳಿತಕ್ಕೂ , ವೈದ್ಯರಿಗೂ ಆತ್ಮಸ್ಥೈರ್ಯ ಹೆಚ್ಚಿಸಬೇಕೆಂದು ಪ್ರವಾಸ ಮಾಡುತ್ತಿದ್ದೇನೆ ಎಂದರು.

ಕೋವಿಡ್ 19ಕುರಿತು ಟಾಸ್ಕ್ ಪೋರ್ಸ್ ಸಮಿತಿ ಜೊತೆ ಚರ್ಚೆ ನಡೆಯಲಿಕ್ಕಿದೆ.  ಅರಣ್ಯಪ್ರದೇಶದಲ್ಲಿ ಬುಡಕಟ್ಟು ಜನಾಂದವರೇನಿದ್ದಾರೋ , ಜೇನು ಕುರುಬರು, ಕಾಡು ಕುರುಬರು, ಸೋಲಿಗರು ಅವರಿಗೆ ಹಾಲು ಕೂಡ ಸಿಗ್ತಿಲ್ಲ. ನನಗೆ ಮಾಹಿತಿ ಬಂದ ಸಮಯದಲ್ಲಿ ಸಿಎಂ ಜೊತೆ ಮಾತಾಡಿದೆ. ತಕ್ಷಣ ಅವರಿಗೂ ಹಾಲು, ಆಹಾರ ಸಿಗುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದೇನೆ. ಚಾಮರಾಜನಗರ ಜಿಲ್ಲಾಧಿಕಾರಿಗಳಿಗೂ ಸೂಚನೆ ಕೊಟ್ಟಿದ್ದೇನೆ. ಕೊಡಗು, ಉತ್ತರಕನ್ನಡ, ದಕ್ಷಿಣ ಕನ್ನಡದಲ್ಲೂ ಕೂಡ ಇದು ಅನ್ವಯಿಸಲಿದೆ. ನಾಳೆ  ಸಿಎಂ ಜೊತೆ ಒಂದು ಆದೇಶವನ್ನು ಕೊಡಿಸುವ ಕೆಲಸವನ್ನೂ ಕೂಡ ಮಾಡ್ತೇನೆ ಎಂದರು.

ಲಾಕ್ ಡೌನ್ ಮೈಸೂರು ರೆಡ್ ಜೋನ್ ಮುಂದುವರಿಯುತ್ತಾ ಎಂದು ಮಾಧ್ಯಮದವರು ಪ್ರಶ್ನಿಸಿದಾಗ ಸಿಎಂ ಜೊತೆ, ಟಾಸ್ಕ್ ಪೋರ್ಸ್ ಸಮಿತಿ ಜೊತೆ ಚರ್ಚೆ ನಡೆಯುತ್ತಿದೆ. ರೆಡ್ ಜೋನ್ ನಲ್ಲಿ ಲಾಕ್ ಡೌನ್ ಮುಂದುವರಿಸಬೇಕಾ? ಕೆಲವು ಜಿಲ್ಲೆಗಳಿಗೆ ಬಿಟ್ಟು ಕೊಡಬೇಕಾ ಎಂದು ಚರ್ಚೆ ನಡೆಯತ್ತೆ, ಮಾತಾಡಿ ನಿಮಗೆ ಉತ್ತರ ಕೊಡ್ತೇನೆ ಎಂದರು.  ಮೈಸೂರಿನಲ್ಲಿ ಕೋವಿಡ್ -19 ಜ್ಯುಬಿಲಿಯೆಂಟ್ ನಲ್ಲಿ  ಮೊದಲು ಪ್ರಾರಂಭವಾಗಿದ್ದು. ನಂಜನಗೂಡು ಕ್ಷೇತ್ರ ನಮ್ಮ ಕೈ ಮೀರ್ತಿದೆ.  ಅದರ ತನಿಖೆ ಕೂಡ ಮುಂದುವರಿಯಲಿದೆ. ಮಾಲೀಕರಿಗೆ ನೋಟೀಸ್ ಕೂಡ ಕೊಡಲಾಗಿದೆ. ಅವರು ಸರಿಯಾಗಿ ಉತ್ತರ ನೀಡದಿದ್ದಲ್ಲಿ ಕಾನೂನು ರೀತಿ ಕ್ರಮ ತೆಗೆದುಕೊಳ್ಳಲಾಗುವುದು. ಚೀನಾದಿಂದ ಬಂದ ರಾ ಮೆಟೀರಿಯಲ್ ಮೂಲಕ ವೈರಸ್ ಬಂತು ಎನ್ನಲಾಗುತ್ತಿದೆ.  ಅದನ್ನು ಪುಣೆಗೆ ಲ್ಯಾಬ್ ಗೆ ಟೆಸ್ಟ್ ಗೆ ಕಳಿಸಲಾಗಿದೆ. ಅಲ್ಲಿಂದ ಉತ್ತರಕ್ಕೆ ಕಾಯುತ್ತಿದ್ದೇವೆ ಎಂದು ತಿಳಿಸಿದರು.

ಮುಖ್ಯವಾಗಿ ನಮಗೆ ಬಂದ ಸಂಖ್ಯೆ ಪ್ರಕಾರ ನಂಜನಗೂಡು ನಿಯಂತ್ರಣಕ್ಕೆ ಬರಬೇಕು. ಬೆಂಗಳೂರಲ್ಲೂ 57ರ ಹತ್ತಿರವಿದೆ. ಜಾಸ್ತಿ ಇದೆ.  181ಲ್ಲಿ  35  ಮೈಸೂರಿನಲ್ಲಿದೆ.   18 ಜಿಲ್ಲೆಗಳಲ್ಲೂ ಲಾಕ್ ಡೌನ್ ಮುಂದುವರಿಸಿ ಉಳಿದ ಜಿಲ್ಲೆಗಳಲ್ಲಿ ಬೇಕಾದರೆ ಲಾಕ್ ಡೌನ್ ತೆಗೆಯಲಿ ಎಂಬುದು  ನನ್ನ ಅಭಿಪ್ರಾಯವಾಗಿದೆ. ನಾಳೆ ಸಿಎಂ ಚರ್ಚೆ ನಡೆಸುತ್ತಾರೆ. ನೋಡೋಣ ಏನಾಗಲಿದೆ ಅಂತ ಎಂದು ತಿಳಿಸಿದರು.  (ಜಿ.ಕೆ,ಎಸ್.ಎಚ್)

Leave a Reply

comments

Related Articles

error: