ಪ್ರಮುಖ ಸುದ್ದಿ

ಸಿಎಂ ಪರಿಹಾರ ನಿಧಿಗೆ 40.22 ಕೋಟಿ ದೇಣಿಗೆ

ರಾಜ್ಯ(ಬೆಂಗಳೂರು)ಏ.8:- ಕೋವಿಡ್-19 ವೈರಾಣುವನ್ನು ತಡೆಗಟ್ಟಲು ಸರ್ಕಾರ ಯುದ್ಧೋಪಾದಿಯಲ್ಲಿ ಕ್ರಮ ಕೈಗೊಳ್ಳಲು ನಾಡಿನ ನಾಗರಿಕರಿಗೆ ವೈದ್ಯೋಪಚಾರಗಳನ್ನು ಮತ್ತು  ಪ್ರಯೋಗಾಲಯಗಳು ಹಾಗೂ ಮೆಡಿಕಲ್‌ ಕಿಟ್‌ಗಳು ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು   ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡುವಂತೆ ಮಾಡಿರುವ ಮನವಿಯ ಹಿನ್ನೆಲೆಯಲ್ಲಿ   03.04.2020 ಕ್ಕೆ ಇದ್ದಂತೆ ರೂ. 31.85 ಕೋಟಿ ದೇಣಿಗೆ ನೀಡಿದ್ದು,   ಸಹಕಾರ ಸಂಘಗಳು / ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಂದ ನೀಡಿದ ದೇಣಿಗೆಯು ಸೇರಿದಂತೆ “ಸಹಕಾರ ಇಲಾಖೆ”ಯ ವತಿಯಿಂದ ಇಂದಿಗೆ ಒಟ್ಟಾರೆ ಮೊತ್ತ ರೂ. 40.22 ಕೋಟಿಗಳನ್ನು ದೇಣಿಗೆಯಾಗಿ ಸಲ್ಲಿಸಲಾಗಿದೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

ಇಂದು (ಬುಧವಾರ) ರೂ. 8 ಕೋಟಿಗಳನ್ನು ದೇಣಿಗೆಯಾಗಿ ನೀಡಲಾಗಿದ್ದು, ಈ ಸಂದರ್ಭದಲ್ಲಿ ಕೆಎಂಎಫ್ ಅಧ್ಯಕ್ಷರಾಗಿರುವ  ಬಾಲಚಂದ್ರ ಜಾರಕಿಹೊಳಿ, ಸಚಿವ ರಾದ ಡಾ ಸುಧಾಕರ್ ಹಾಗೂ  ವಿಧಾನಪರಿಷತ್ ಸದಸ್ಯರಾಗಿರುವ ಎಸ್.ರವಿ ಹಾಗೂ ಅಧಿಕಾರಿ ವರ್ಗದವರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: