ಪ್ರಮುಖ ಸುದ್ದಿ

ಕಾರ್ಮಿಕರ ಕುಂದು ಕೊರತೆ ಪರಿಶೀಲಿಸಿದ ತಹಶೀಲ್ದಾರ್

ರಾಜ್ಯ( ಮಡಿಕೇರಿ) ಏ.9 :- ಮಡಿಕೇರಿ ತಾಲೂಕು ತಹಶೀಲ್ದಾರರಾದ ಮಹೇಶ್ ರವರು ಇಂದು ನಗರದ ಚೈನ್‍ಗೇಟ್ ಬಳಿ ಇರುವ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಆಶ್ರಯ ಪಡೆದಿರುವ ಕಾರ್ಮಿಕರ ಕುಂದು-ಕೊರತೆಗಳನ್ನು ವಿಚಾರಿಸಿದರು.
ಈ ಸಂಧರ್ಭ 55 ಜನ ಕಾರ್ಮಿಕರು ಮತ್ತು 13 ಮಕ್ಕಳು ಸೇರಿದಂತೆ 68 ಜನರಿಗೆ ಕಾರ್ಮಿಕ ಇಲಾಖೆ ವತಿಯಿಂದ ಮಾಸ್ಕ್ ಮತ್ತು ಕೊಬ್ಬರಿ ಎಣ್ಣೆಯನ್ನು ವಿತರಿಸಲಾಯಿತು. ಕಾರ್ಮಿಕ ನಿರೀಕ್ಷಕರಾದ ಎಂ.ಎಂ. ಯತ್ನಟ್ಟಿ ಇತರರು ಹಾಜರಿದ್ದರು.
ಮತ್ತೊಂದೆಡೆ ಕುಶಾಲನಗರದ ಸಮೀಪದ ಬಸವನಹಳ್ಳಿಯ ಹೊಸಕಾಡಿನಲ್ಲಿ ಶೇಡ್‍ನಲ್ಲಿ ವಾಸವಾಗಿರುವ 3 ಸೋಲಿಗ, 4 ಬೆಟ್ಟಕುರುಬ, 2 ಕ್ರಿಶ್ಚನ್ ಮತ್ತು 1 ಜೇನುಕುರುಬ ಕುಟುಂಬದವರು ವಾಸವಿರುವ ಸ್ಥಳಕ್ಕೆ ಹಿರಿಯ ಕಾರ್ಮಿಕ ನಿರೀಕ್ಷಕರಾದಂತಹ ಎಂ.ಎಂ ಯತ್ನಟ್ಟಿ ಅವರು ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ಕುಟುಂಬದವರ ಕೆಲಸದ ಮತ್ತು ರೇಷನ್ ಕುರಿತು ಮತ್ತು ಕಂದು ಕೊರತೆಯ ಬಗ್ಗೆ ಮಾಹಿತಿ ಪಡೆಯಲಾಯಿತು. ಈ ವೇಳೆ ಅಲ್ಲಿನ ಕುಟುಂಬಸ್ಥರು ತಾವು ತೋಟದ ಕೆಲಸಕ್ಕೆ ಹೋಗುವುದಾಗಿ ತಿಳಿಸಿದ್ದಾರೆ. ಅವರೆಲ್ಲರಿಗೂ ಪಡಿತರ ಚೀಟಿ ಇದ್ದು ಅವರಿಗೆ ಪಡಿತರ ದೊರಕಿರುವುದಾಗಿ ತಿಳಿಸಿದ್ದಾರೆ ಎಂದು ಹಿರಿಯ ಕಾರ್ಮಿಕ ನಿರೀಕ್ಷಕರು ತಿಳಿಸಿದರು.
ಇದೇ ವೇಳೆ ಮಡಿಕೇರಿ ನಗರದ ವಿವಿಧ ಕಡೆ ಭೇಟಿ ನೀಡಿ ಕಾರ್ಮಿಕರ ಕೊಂದು ಕೊರತೆ ವಿಚಾರಿಸಲಾಯಿತು, ನಗರಸಭೆಯ ಹಿಂಭಾಗ ದರ್ಶನ ಚೆಂಗಪ್ಪ ಇವರ ಕಟ್ಟಡ ನಿರ್ಮಾಣದ ಸ್ಥಳದಲ್ಲಿ 13 ಜನ ಮಧ್ಯಪ್ರದೇಶದವರು ಮತ್ತು 5ಜನ ಜಾಖರ್ಂಡ್ ರಾಜ್ಯದ ಕಾರ್ಮಿಕರು ವಾಸವಿದ್ದು, ಇವರಿಗೆ ನಗರಸಭೆ ವತಿಯಿಂದ 6 ಕಿಟ್ ರೇಷನ್ ಒದಗಿಸಿದ್ದಾಗಿ ತಿಳಿಸಿದ್ದಾರೆ ಎಂದು ಹಿರಿಯ ಕಾರ್ಮಿಕ ನಿರೀಕ್ಷಕರು ಮಾಹಿತಿ ನೀಡಿದ್ದಾರೆ.
ವಿದ್ಯಾನಗರದ ವೆಂಕಟೇಶ ಪ್ರಸಾದ್ ಇವರ ಮನೆಯ ನಿರ್ಮಾಣದ ಸ್ಥಳದಲ್ಲಿರುವ ಜಾಖರ್ಂಡ್ ರಾಜ್ಯದ 7ಜನ ಕಾರ್ಮಿಕರಿಗೆ ನಗರಸಭೆಯಿಂದ 3 ಕಿಟ್ ರೇಷನ್ ನೀಡಿರುವುದಾಗಿ ಕಾರ್ಮಿಕರು ಮಾಹಿತಿ ನೀಡಿದ್ದಾರೆ. ಮಹದೇವಪೇಟೆಯ ಹಲೀಮ್ ಕಾಂಪ್ಲೆಕ್ಸ್‍ನಲ್ಲಿ ಇರುವ ಒಟ್ಟು 12 ಜನರಲ್ಲಿ 8 ಜನಕ್ಕೆ ಆಹಾರ ಸಾಮಾಗ್ರಿಯ ಕಿಟ್ ದೊರೆತಿದ್ದು, ಉಳಿದವರಿಗೆ ತಹಶೀಲ್ದಾರವರಿಂದ ಕಿಟ್ ಪಡೆದು ಪರಿಶೀಲಿಸಿ ಕೊಡುವುದಾಗಿ ಪೌರಾಯುಕ್ತರು ತಿಳಿಸಿದ್ದಾರೆ ಎಂದು ಎಂ.ಎಂ ಯತ್ನಟ್ಟಿ ಅವರು ಮಾಹಿತಿ ನೀಡಿದ್ದಾರೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: