ಮೈಸೂರು

ಷಬ್ ಎ ಬರಾತ್ ಸಂಬಂಧ ಸಭೆ

ಮೈಸೂರು,ಏ.9:- ಇಂದು  ಮುಸ್ಲಿಂ ಬಾಂಧವರು ನಡೆಸಲಿರುವ ಷಬ್ ಎ ಬರಾತ್ ಸಂಬಂಧ ನಿನ್ನೆ ಲಕ್ಷ್ಮೀಪುರಂ ಪೋಲಿಸ್ ಠಾಣೆಯಲ್ಲಿ ಮೊಹಲ್ಲಾದ ನಿವಾಸಿಗಳಿಗೆ ಸಭೆ ನಡೆಸಲಾಯಿತು.

ಲಕ್ಷ್ಮೀಪುರಂ ಠಾಣೆ ಇನ್ಸಪೆಕ್ಟರ್ ಗಂಗಾಧರ್ ನೇತೃತ್ವದಲ್ಲಿ ಮೊಹಲ್ಲಾದ ನಿವಾಸಿಗಳಿಗೆ ಸಭೆ ನಡೆಸಿ ಮನೆಯಲ್ಲಿಯೇ ಷಬ್ ಎ ಬರಾತ್ ಹಬ್ಬ ಆಚರಿಸುವಂತೆ ಮುಸ್ಲಿಂ ಬಾಂಧವರಿಗೆ ಮನವಿ ಮಾಡಿದರು. ಕೊರೋನಾ ವೈರಸ್ ಸೋಂಕು ಹರಡುವುದನ್ನು ತಡೆಯಲು ಲಾಕ್ ಡೌನ್ ಘೋಷಿಸಲಾಗಿದ್ದು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಅವಶ್ಯಕತೆಯಿದೆ.  ಅದಕ್ಕಾಗಿ ಮಸೀದಿಗಳಿಗೆ ತೆರಳಲು ಅವಕಾಶವಿರುವುದಿಲ್ಲ. ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿಯೇ  ಪ್ರಾರ್ಥನೆಯನ್ನು ಸಲ್ಲಿಸಿ ಎಂದರು. ಈ  ಸಂದರ್ಭ ಠಾಣೆಯ ಸಿಬ್ಬಂದಿಗಳು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: