ಮೈಸೂರು

ಜನನಿ ಸೇವಾ ಟ್ರಸ್ಟ್ ವತಿಯಿಂದ ಅಗತ್ಯ ವಸ್ತು ವಿತರಣೆ

ಮೈಸೂರು,ಏ.9:- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸ್ತ್ರೀ ಸೇವಾ ನಿಕೇತನ ದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಬಂದಿರುವ  ಸುಮಾರು 100 ಮಹಿಳೆಯರು ಮತ್ತು ಮಕ್ಕಳು ಆಶ್ರಯ ಪಡೆದಿದ್ದು ಅವರಿಗೆ ಜನನಿ ಸೇವಾ ಟ್ರಸ್ಟ್ (ರಿ) ವತಿಯಿಂದ ಅಗತ್ಯ ವಸ್ತು ವಿತರಿಸಲಾಯಿತು.

ಈ ಸಂಸ್ಥೆಗೆ ಕೆಪಿಸಿಸಿ ಸದಸ್ಯರು, ಸಿಟಿ ಕೋಪರೇಟಿವ್ ಬ್ಯಾಂಕಿನ ಡೈರೆಕ್ಟರ್, ಟ್ರಸ್ಟ್ ಗೌರವಾಧ್ಯಕ್ಷರಾದ ಡಾ, ಎಸ್. ನಾಗರತ್ನ, ಮಹಾನಗರ ಪಾಲಿಕೆ ಮಾಜಿ ಸದಸ್ಯ, ಪ್ರಚಾರ ಸಮಿತಿಯ ಅಧ್ಯಕ್ಷರು, ಟ್ರಸ್ಟ್ ಅಧ್ಯಕ್ಷರಾದ ಎಂ.ಕೆ. ಅಶೋಕ ಅವರು ಆಶ್ರಯ ಪಡೆಯುತ್ತಿರುವವರಿಗೆ  ಅಕ್ಕಿ, ಬಾಳೆಹಣ್ಣು, ಹೆಣ್ಣುಮಕ್ಕಳಿಗೆ ಅವಶ್ಯಕವಾದ ಒಳಉಡುಪುಗಳು, ಅವಶ್ಯಕವಾದ ಬಟ್ಟೆಗಳು,  ಟೂತ್ ಬ್ರಷ್, ಫೇಸ್ಟನ್ನು  ನೀಡಲಾಯಿತು.

ಈ ಸಂದರ್ಭದಲ್ಲಿ ಟ್ರಸ್ಟ್ ನ ತನುಜ, ತಿಲಕ್ ನಗರ ಅಧ್ಯಕ್ಷರು ಮೈಸೂರು ಮಹಿಳಾ ಸಂಘಗಳ ಒಕ್ಕೂಟ. ಪುಟ್ಟರಾಜು ಇಲಾಖೆಯ ವೀಣಾ, ಗೀತಾಂಜಲಿ ಹಲವಾರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: