ಪ್ರಮುಖ ಸುದ್ದಿವಿದೇಶ

ಡೊನಾಲ್ಡ್ ಟ್ರಂಪ್ ಗೆ ತಿರುಗೇಟು ನೀಡಿದ ಡಬ್ಲ್ಯುಎಚ್‌ಒ

ವಾಷಿಂಗ್ಟನ್,ಏ.9-ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ವಿರುದ್ಧ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟೀಕಾಪ್ರಹಾರ ನಡೆಸಿದ್ದಕ್ಕೆ ಡಬ್ಲ್ಯುಎಚ್‌ಒ ಕೂಡ ತಿರುಗೇಟು ನೀಡಿದೆ.

ವಿಶ್ವ ಆರೋಗ್ಯ ಸಂಸ್ಥೆ ಮಹಾ ನಿರ್ದೇಶಕ ಟ್ರೆಡೊಸ್ ಅಧಾನೊಮ್ ಘೆಬ್ರೆಯೆಸಸ್, ಟ್ರಂಪ್ ಗೆ ತಿರುಗೇಟು ನೀಡಿದ್ದಾರೆ. ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಎಲ್ಲರೂ ಒಗ್ಗಟ್ಟಾಗಿರಬೇಕು. ಒಗ್ಗಟ್ಟಿನಿಂದ ಮಾತ್ರ ಕೊರೊನಾ ವೈರಸ್ ಸೋಲಿಸಲು ಸಾಧ್ಯ. ನೀವು ಏಕತೆಯನ್ನು ನಂಬದಿದ್ದರೆ ಅಥವಾ ಏಕತೆಯನ್ನು ಮಾಡದಿದ್ದರೆ, ಇದಕ್ಕಿಂತಲೂ ಕೆಟ್ಟದಾದ ಪರಿಸ್ಥಿತಿ ಎದುರಿಸಲು ಸಿದ್ಧವಾಗಿರಿ ಎಂದು ಹೇಳಿದ್ದಾರೆ.

ದಯವಿಟ್ಟು ಕೋವಿಡ್ 19 ಅನ್ನು ರಾಜಕೀಯಗೊಳಿಸುವುದನ್ನು ಕ್ವಾರಂಟೈನ್ ಮಾಡಿ. ನಾವು ಕೆಲಸ ಮಾಡದಿದ್ದರೆ ನಮ್ಮ ಮುಂದೆ ಅನೇಕ ಬಾಡಿ ಬ್ಯಾಗ್‌ಗಳು ಬೀಳಲಿದೆ. ಅತ್ಯಂತ ಅಪಾಯಕಾರಿ ಕೊರೊನಾ ವೈರಸ್ ನಿರ್ಮೂಲನೆ ಮಾಡಲು ಅಮೆರಿಕ ಹಾಗೂ ಚೀನಾ ಒಗ್ಗಟ್ಟಾಗಿ ಕೆಲಸ ನಿರ್ವಹಿಸಬೇಕು. ಈ ಸಂದರ್ಭದಲ್ಲಿ ಜಾಗತಿಕ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಸ್ವಂತಕ್ಕಾಗಿ ಬಳಸಿಕೊಳ್ಳದಂತೆ ಮನವಿ ಮಾಡಿದರು.

ಕೊರೊನಾ ವೈರಸ್ ಪ್ರಕ್ರಿಯೆಯಲ್ಲಿ ತನ್ನ ಸಾಮರ್ಥ್ಯ ಹಾಗೂ ದೌರ್ಬಲ್ಯಗಳನ್ನು ಡಬ್ಲ್ಯುಎಚ್ಒ ಪರಿಶೀಲಿಸುತ್ತಿದೆ. ಅಲ್ಲಿ ತಿಳಿದಿರದ ಅನೇಕ ವಿಷಯಗಳಿವೆ.

ಡಬ್ಲ್ಯುಎಚ್‌ಒ ಕೊರೊನಾ ವೈರಸ್ ವಿಚಾರದಲ್ಲಿ ಚೀನಾ ಪರ ಮೃದು ಧೋರಣೆ ತಳೆದಿದೆ ಎಂದು ಆರೋಪಿಸಿ ಹಣಕಾಸಿನ ನೆರವನ್ನು ಕಡಿತಗೊಳಿಸುವುದಾಗಿ ಬೆದರಿಕೆ ಹಾಕಿದ್ದರು. ಕೊರೊನಾ ವೈರಸ್ ಚೀನಾದಿಂದಲೇ ಆರಂಭವಾಗಿದೆ. ಇದರ ಹೊರತಾಗಿಯೂ ಪ್ರಾರಂಭದಲ್ಲಿ ತಪ್ಪು ಮಾಹಿತಿಯನ್ನು ನೀಡಿರುವ ವಿಶ್ವ ಆರೋಗ್ಯ ಸಂಸ್ಥೆ, ಚೀನಾ ಜೊತೆಗಿನ ಬಾರ್ಡರ್ ತೆರೆದುಕೊಳ್ಳುವಂತೆ ಸೂಚಿಸಿತ್ತು. ಅದೃಷ್ಟವಶಾತ್ ಡಬ್ಲ್ಯುಎಚ್‌ಒ ಸಲಹೆಯನ್ನು ನಾನು ನಿರಾಕರಿಸಿದ್ದೆ ಎಂದು ಟ್ರಂಪ್ ಟೀಕಿಸಿದ್ದರು. ಕೊರೊನಾ ವೈರಸ್‌ ಬಗ್ಗೆ ಚೀನಾ ತಪ್ಪಾದ ಅಂಕಿ ಅಂಶಗಳನ್ನು ಬಯಲು ಮಾಡುತ್ತಿದೆ ಎಂದು ಆರೋಪಿಸಿದ್ದರು. (ಎಂ.ಎನ್)

Leave a Reply

comments

Related Articles

error: