ಪ್ರಮುಖ ಸುದ್ದಿ

ಪತ್ರಕರ್ತನ ಮೇಲೆ ಹಲ್ಲೆ : ದೂರು

ರಾಜ್ಯ(ಮಂಡ್ಯ)ಏ.9:- ಪತ್ರಕರ್ತರೋರ್ವರ ಮೇಲೆ ಪೊಲೀಸ್ ಪೇದೆಯೋರ್ವರು  ದೌರ್ಜನ್ಯ ನಡೆಸಿದ ಘಟನೆ ಮಂಡ್ಯದ ಸ್ವರ್ಣ ಸಂದ್ರ ಬಡಾವಣೆಯಲ್ಲಿ ನಡೆದಿದೆ.

ಪತ್ರಕರ್ತನೆಂದು ಗುರುತಿನ ಚೀಟಿ ತೋರಿಸಿದರೂ ಲಾಠಿ ಬೀಸಿ ಪೇದೆ ದೌರ್ಜನ್ಯ ವೆಸಗಿದ್ದಾರೆ ಎನ್ನಲಾಗಿದ್ದು, ಪೇದೆಯ ಲಾಠಿ ದೌರ್ಜನ್ಯದಿಂದ ಪತ್ರಕರ್ತನಿಗೆ ಗಾಯವಾಗಿದೆ ಎನ್ನಲಾಗಿದೆ. ನ್ಯೂಸ್-18 ಕನ್ನಡ ವಾಹಿನಿಯ ಕ್ಯಾಮರಮೆನ್ ಮಧು ಕುಮಾರ್ ಮೇಲೆ ದೌರ್ಜನ್ಯ ನಡೆದಿದ್ದು, ಕರ್ತವ್ಯದ ನಿಮಿತ್ತ ನಗರಕ್ಕೆ ತೆರಳುತ್ತಿದ್ದ ವೇಳೆ ಬೈಕ್ ಅಡ್ಡಗಡ್ಡಿ ದೌರ್ಜನ್ಯವೆಸಗಿದ್ದಾರೆ. ಮಾಧ್ಯಮದವರ ಕರ್ತವ್ಯಕ್ಕೆ  ಅಡ್ಡಿಪಡಿಸದಂತೆ ಪ್ರಧಾನಿ ಸೇರಿ ಸಿ.ಎಂ.ಸೂಚಿಸಿದ್ದರೂ  ಪೇದೆ  ದೌರ್ಜನ್ಯ ನಡೆಸಿದ್ದಾರೆ. ಲಾಕ್ಡೌನ್ ಸಮಯದಲ್ಲಿ ಅನಾವಶ್ಯಕ ವಾಗಿ ಓಡಾಡುತ್ತಿದ್ದ ನೆಂದು ಆರೋಪಿಸಿ ಪೇದೆ  ಹಲ್ಲೆ ನಡೆಸಿದ್ದು, ದೌರ್ಜನ್ಯ ಕ್ಕೊಳಗಾದ ಪತ್ರಕರ್ತ ಪೇದೆ ವಿರುದ್ದ ಎಸ್ಪಿಗೆ ದೂರು ನೀಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: