ಮೈಸೂರು

ತಮ್ಮ ವಾರ್ಡ್ ವ್ಯಾಪ್ತಿಯಲ್ಲಿ ಸಾವಿರಕ್ಕೂ ಹೆಚ್ಚು ಜನರಿಗೆ ದಿನಸಿ ವಿತರಿಸಿದ ಪಾಲಿಕೆ ಸದಸ್ಯ ಮಾ.ವಿ.ರಾಮ್ ಪ್ರಸಾದ್; ಮೇಯರ್ ತಸ್ನೀಂ ಸಾಥ್

ಮೈಸೂರು,ಏ.9:- ಕೊರೋನಾ ಲಾಕ್ ಡೌನ್ ಎಫೆಕ್ಟ್ ಹಿನ್ನಲೆಯಲ್ಲಿ  ಪಾಲಿಕೆ ಸದಸ್ಯ ಮಾ.ವಿ.ರಾಮ್ ಪ್ರಸಾದ್ ಅವರು ಮೇಯರ್ ತಸ್ನೀಂ ಅವರ ಜೊತೆ  ವಾರ್ಡ್ ವ್ಯಾಪ್ತಿಯಲ್ಲಿ ದಿನಸಿ ವಸ್ತುಗಳನ್ನು  ವಿತರಿಸಿದರು.

ಇಂದು ವಾರ್ಡ್ ನಂಬರ್ 55ರ ವ್ಯಾಪ್ತಿಯ ಬಡ ನಿವಾಸಿಗಳಿಗೆ ದಿನಸಿ ವಿತರಿಸಲಾಯಿತು. ವಾರ್ಡ್ ನ ಸಾವಿರಕ್ಕೂ ಹೆಚ್ಚು ಜನರಿಗೆ ದಿನಸಿ ವಿತರಿಸಲಾಯಿತು.

ಈ ಸಂದರ್ಭ ಮೇಯರ್ ತಸ್ನೀಂ ಮಾತನಾಡಿ  ಕೊವೀಡ್-19  ವೈರಸ್ ಬಂದಿದೆ. ಈ ವೈರಸ್ ನಿಂದ ಮಾರ್ಚ್ 22ರಿಂದ ದೇಶವೇ ಲಾಕ್ ಡೌನ್ ಆಗಿದೆ. ಲಾಕ್ ಡೌನ್ ನಿಂದ ಸಾಕಷ್ಟು ಜನ ಬಡವರಿಗೆ  ತೊಂದರೆಯಾಗ್ತಿದೆ ಅಂತ ನಮ್ಮ ಮಹಾನಗರ ಪಾಲಿಕೆ ಸದಸ್ಯರು ಅವರ ಸ್ವಂತ ಖರ್ಚಿನಿಂದ ಈ ತರಹದ ದಿನಸಿ ಕಿಟ್ ಗಳನ್ನು ಮಾಡಿ  ವಿತರಿಸುತ್ತಿದ್ದಾರೆ. ಸಾಕಷ್ಟು ಸದಸ್ಯರು ಇದೇ ರೀತಿ ಮಾಡಿ ಕಿಟ್ ವಿತರಿಸುತ್ತಿದ್ದಾರೆ. ಇಂದು ಮಾವಿ ರಾಮ್ ಪ್ರಸಾದ್ ಅವರು ಅವರ ವಾರ್ಡಿನಲ್ಲಿ ವಿತರಿಸುತ್ತಿದ್ದಾರೆ.  ಮೈಸೂರಿನಲ್ಲಿ ದಿನೇ ದಿನೇ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಆದರೆ ಮೈಸೂರು ಜನತೆಗೆ ಇದರ ಸೀರಿಯಸ್ ನೆಸ್ ಬಂದಿಲ್ಲ, ಎಲ್ಲರೂ ದಯವಿಟ್ಟು ಮನೆಯಲ್ಲೇ ಇರಿ, ಸೇಫ್ ಆಗಿರಿ ಎಂದರು.

ಷಬ್ ಎ ಬರಾತ್ ದಿನದಂದು ಮುಸ್ಲಿಮರು ಸ್ಮಶಾನಕ್ಕೆ ಹೋಗಿ ಪ್ರಾರ್ಥನೆ ಮಾಡಿ ಬರ್ತಾರೆ. ಆದರೆ ನಮಗೆ ಮನೆಯಲ್ಲೇ ಪ್ರಾರ್ಥನೆ ಮಾಡುವಂತೆ  ಆದೇಶ ಬಂದಿದೆ. ಯಾರೂ ಮನೆಯಿಂದ ಹೊರಗೆ ಹೋಗಬೇಡಿ, ಮನೆಯಲ್ಲೆ ಇರಿ, ಸರ್ಕಾರದ ಆದೇಶ ಪಾಲಿಸಿ, ಮನೆಯಲ್ಲೇ ಪ್ರಾರ್ಥನೆ ಮಾಡಿ ಎಂದು ಈಗಾಗಲೇ ಹೇಳಿದ್ದೇವೆ ಎಂದರು. ಕೆಲವು ಬಡವರಿಗೆ ದಿನಸಿ ತಲುಪುತ್ತಿಲ್ಲ ಎನ್ನುತ್ತಿದ್ದಾರೆ ಎಂದು ಮಾಧ್ಯಮದವರು ಪ್ರಶ್ನಿಸಿದಾಗ ಸ್ಥಳೀಯ ಕಾರ್ಪೋರೇಟರ್ ಅವರಿಗೆ ರೆವೆನ್ಯೂ ಇನ್ಸಪೆಕ್ಟರ ಜೊತೆ ಸೇರಿ ದಿನಸಿ ಯಾರಿಗೆ ತಲುಪಿಲ್ಲ ಅಂತ ಪಟ್ಟಿ ಮಾಡಿ ನೀಡೋದಕ್ಕೆ ಹೇಳಿದ್ದೇನೆ. ಅವರು ಶೀಘ್ರ ಆ ಕೆಲಸ ಮಾಡ್ತಾರೆ. ಅವರಿಗೆ ತಲುಪಿಸುವ ಕೆಲಸವಾಗಲಿದೆ ಎಂದರು.

ಪಾಲಿಕೆ ಸದಸ್ಯ ಮಾ.ವಿ.ರಾಂ ಪ್ರಸಾದ್ ಮಾತನಾಡಿ ನಮ್ಮ 55ನೇ ವಾರ್ಡ್ ಸಾವಿರ ಮನೆಗಳಿಗೆ ರೇಷನ್ ಕಿಟ್  ಕಳುಹಿಸುವ ಕೆಲಸ ಮಾಡ್ತಿದ್ದೇವೆ. ಇಲ್ಲಿ ಸಾಕಷ್ಟು ಬಡವರಿದ್ದಾರೆ.  ಆ ದಿನ ದುಡಿದು ಅಂದೇ ತಿನ್ನುವವವರಿದ್ದಾರೆ, ಅವರಿಗೆ ಅಕ್ಕಿ, ಕಾಳು, ರವೆ, ಸಕ್ಕರೆ, ಪ್ಯಾಕ್ ಮಾಡಿ ನೀಡುತ್ತಿದ್ದೇವೆ. ಸಂಘ-ಸಂಸ್ಥೆಗಳು, ಜನಪ್ರತಿನಿಧಿಗಳು ಎಷ್ಟು ಮಾಡಿದರೂ  ನಮ್ಮ ಕಣ್ಣಮುಂದೆ ಮತ್ತೆ ಲಕ್ಷಾಂತರ ಮಂದಿ ಕಾಣ್ತಾರೆ.  ಮೈಸೂರಿನಲ್ಲಿ ಸಾಕಷ್ಟು ಉಳ್ಳವರಿದ್ದೇವೆ. ಅವರೆಲ್ಲರೂ ಸೇರಿ  ಅಕ್ಕಪಕ್ಕದ ಬೀದಿಯಲ್ಲಿರುವ ನಿರ್ಗತಿಕರಿಗೆ ಸಹಾಯ ಮಾಡೋಣ, ಲಾಕ್ ಡೌನ್ ಕಟ್ಟುನಿಟ್ಟಾಗಿ ಪಾಲನೆ ಮಾಡಿದರೆ  ಆದಷ್ಟು ಬೇಗ ಕೊರೋನಾ ನಿರ್ಮೂಲನೆ ಮಾಡಬಹುದು ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: