ದೇಶಪ್ರಮುಖ ಸುದ್ದಿಮನರಂಜನೆ

ಬಾಲಿವುಡ್ ನಿರ್ಮಾಪಕ ಕರೀಮ್ ಮೊರಾನಿಗೂ ಕೊರೊನಾ ವೈರಸ್ ಸೋಂಕು

ಮುಂಬೈ,ಏ.9-ಬಾಲಿವುಡ್ ನಿರ್ಮಾಪಕ ಕರೀಮ್ ಮೊರಾನಿಗೂ ಕೂಡ ಕೊರೊನಾ ವೈರಸ್ ಸೋಂಕು ತಗುಲಿದೆ. ತಮ್ಮ ಅವಳಿ ಮಕ್ಕಳಾದ ಜೋಯಾ ಮತ್ತು ಶಾಜಾ ಮೊರಾನಿ ಅವರ ಬಳಿಕ ಕರೀಮ್ ಮೊರಾನಿಗೂ ಸೋಂಕು ತಗುಲಿದೆ.

ಈಗ ಒಂದೇ ಕುಟುಂಬದ ಮೂವರಲ್ಲಿ ಕೊರೊನಾ ವೈರಸ್ ಕಂಡುಬಂದಿದೆ. ಕರೀಮ್ ಅವರನ್ನು ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕರೀಮ್ ಅವರಿಗೆ ಸೋಂಕು ತಗುಲಿರುವುದನ್ನು ಕರೀಮ್ ಅವರ ಸಹೋದರ ಖಚಿತಪಡಿಸಿದ್ದಾರೆ. ‘ಅವರು ತಮ್ಮ ಹೆಣ್ಣುಮಕ್ಕಳ ಜತೆಯಲ್ಲಿಯೇ ಇದ್ದಿದ್ದರಿಂದ ಈ ವೈದ್ಯಕೀಯ ವರದಿಯನ್ನು ನಾವು ನಿರೀಕ್ಷಿಸಿದ್ದೆವು. ಕರೀಮ್ ಅವರಲ್ಲಿ ಕೊರೊನಾ ವೈರಸ್ ಪಾಸಿಟಿವ್ ಕಂಡುಬಂದಿದೆ’ ಎಂದು ತಿಳಿಸಿದ್ದಾರೆ.

ಶಾಜಾ ಮೊರಾನಿ ಕೂಡ ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಆಕೆಯ ಅಕ್ಕ, ಬಾಲಿವುಡ್ ನಟಿ ಜೊಯಾ ಮೊರಾನಿ ಕೋಕಿಲಾ ಬೆನ್ ಅಂಬಾನಿ ಆಸ್ಪತ್ರೆಯಲ್ಲಿದ್ದಾರೆ.

ಶಾಜಾ ಮೊರಾನಿ ಮಾರ್ಚ್ ಮೊದಲ ವಾರದಲ್ಲಿ ಶ್ರೀಲಂಕಾದಿಂದ ವಾಪಸ್ ಆಗಿದ್ದರು. ಜೋಯಾ ಮೊರಾನಿ ರಾಜಸ್ಥಾನದಿಂದ ಮಾರ್ಚ್ ಮಧ್ಯದಲ್ಲಿ ಮನೆಗೆ ಮರಳಿದ್ದರು. (ಎಂ.ಎನ್)

Leave a Reply

comments

Related Articles

error: