ಮನರಂಜನೆ

ರೈತನಾದ ರಿಯಲ್ ಸ್ಟಾರ್ ಉಪೇಂದ್ರ

ಬೆಂಗಳೂರು,ಏ.9-ಕೊರೊನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಭಾರತ ಲಾಕ್ ಡೌನ್ ಆಗಿದೆ. ಈ ನಡುವೆ ರಿಯಲ್ ಸ್ಟಾರ್ ಉಪೇಂದ್ರ ರೈತನಾಗಿ ಬದಲಾಗಿದ್ದಾರೆ.

ಉಪೇಂದ್ರ ಮೈಸೂರು ರಸ್ತೆಯ ರಾಮೋಹಳ್ಳಿಯಲ್ಲಿಯ ತಮ್ಮ ಜಮೀನಿನಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಟೊಮ್ಯೊಟೋ, ಬಾಳೆ ಸೇರಿದಂತೆ ಇತರ ಬೆಳೆಗಳನ್ನು ಸಾವಯವ ಕೃಷಿ ಮಾದರಿಯಲ್ಲಿ ನಾಟಿ ಮಾಡಿದ್ದಾರೆ‌. ಸದ್ಯ ಉಪೇಂದ್ರ ಮೆಣಸಿನ ಗಿಡಗಳನ್ನು ನೆಡುತ್ತಿದ್ದಾರೆ.

ಕೃಷಿಯ ಬಗ್ಗೆ ಅಪಾರ ಆಸಕ್ತಿಯನ್ನು ಹೊಂದಿರುವ ಉಪೇಂದ್ರ ವೈಜ್ಞಾನಿಕವಾಗಿ ಹೇಗೆ ನೀರನ್ನು ಸಮರ್ಪಕವಾಗಿ ಬಳಸಬಹುದು. ಬೆಳೆಗಳಿಗೆ ನೀರಿನ ಮಿತಬಳಕೆ ಹೇಗೆ, ಅಂತರ್ಜಾಲದ ಮಟ್ಟವನ್ನು ಕೃಷಿಯ ಮೂಲಕ ಹೇಗೆ ಏರಿಕೆ ಮಾಡಬಹುದು. ಕೃಷಿಯಲ್ಲಿ ನೀರಿನ ಸಮರ್ಪಕ ನಿರ್ವಹಣೆ ಹೇಗೆ ಮಾಡಬಹುದು ಎಂದು ಪ್ರಯೋಗ ಮಾಡುತ್ತಿದ್ದಾರೆ.

ಅಂತರ್ಜಲ ಮಟ್ಟವನ್ನು ಹೇಗೆ ಏರಿಕೆ ಮಾಡುವುದು, ಯಾವುದೇ ಕೆಮಿಕಲ್ ಗೊಬ್ಬರ ಬಳಸದೇ, ನೈಸರ್ಗಿಕವಾಗಿ ಹೇಗೆ ಕೃಷಿ ಮಾಡುವುದು ಎನ್ನುವುದನ್ನು ಪ್ರಾಯೋಗಿಕವಾಗಿ ಪರೀಕ್ಷೆ ಮಾಡುತಿದ್ದಾರೆ. ಕೆಲಸಗಾರರಿಗೆಲ್ಲ ರಜೆ ಕೊಟ್ಟಿರುವ ಉಪೇಂದ್ರ ಮನೆಯವರೊಂದಿಗೆ ಹಾಗೂ ಆತ್ಮೀಯ ಗೆಳೆಯರೊಂದಿಗೆ ಕೃಷಿ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ. ಉಪೇಂದ್ರ ಸದ್ಯ ಪ್ರಜಾಕೀಯದ ಜೊತೆಗೆ ಸಿನಿಮಾಗಳಲ್ಲಿಯೂ ಬ್ಯುಸಿಯಾಗಿದ್ದಾರೆ. ಉಪ್ಪಿ ಕಬ್ಜ ಸಿನಿಮಾದ ಶೂಟಿಂಗ್ ನಲ್ಲಿ ತೊಡಗಿಕೊಂಡಿದ್ದರು. (ಎಂ.ಎನ್)

Leave a Reply

comments

Related Articles

error: