ಮೈಸೂರು

ನಗರ ಸ್ವಚ್ಛಗೊಳಿಸುವ ಜೊತೆಗೆ  ಕೋವಿಡ್ 19 ವಿರುದ್ಧ ಹೋರಾಟ ನಡೆಸುತ್ತಿರುವ ಪೌರ ಕಾರ್ಮಿಕರಿಗೆ ಸಾರಿಗೆ ಸೌಲಭ್ಯ

ಮೈಸೂರು,ಏ.9:- ನಗರ ಸ್ವಚ್ಛಗೊಳಿಸುವ ಜೊತೆಗೆ  ಕೋವಿಡ್ 19 ವಿರುದ್ಧ ಹೋರಾಟ ನಡೆಸುತ್ತಿರುವ ಪೌರ ಕಾರ್ಮಿಕರಿಗಾಗಿ ಮೈಸೂರು ನಗರವನ್ನು ಸ್ವಚ್ಛವಾಗಿಡಲು ಅನುಕೂಲವಾಗುವಂತೆ ಮೈಸೂರು ನಗರ ಪಾಲಿಕೆಯಿಂದ ಸಾರಿಗೆ ಸೌಲಭ್ಯ ಒದಗಿಸಲಾಗಿದೆ.

ಕೊರೋನಾ ಹರಡುವುದನ್ನು ತಡೆಗಟ್ಟಲು ದೇಶಾದ್ಯಂತ ಲಾಕ್ ಡೌನ್ ಜಾರಿಗೊಳಿಸಿ ಸಾರಿಗೆ ಸಂಚಾರ ವ್ಯವಸ್ಥೆ ಸ್ಥಗಿತಗೊಳಿಸಲಾಗಿದೆ. ಇದರಿಂದ ವಿವಿಧೆಡೆಯಿಂದ ನಗರಕ್ಕೆ ಸ್ವಚ್ಛತೆಗೆ ಆಗಮಿಸುತ್ತಿದ್ದ ಪೌರಕಾರ್ಮಿಕರಿಗೆ ಸಮಸ್ಯೆ ಆಗುತ್ತಿತ್ತು. ಅವರಿಗೆ ಅನುಕೂಲವಾಗುವಂತೆ  ಪೌರಕಾರ್ಮಿಕರನ್ನು ಬೆಳಿಗ್ಗೆ ಅವರು ಇರುವ ಸ್ಥಳದಿಂದ ಅವರು ಕೆಲಸ ನಿರ್ವಹಿಸುವ ಸ್ಥಳಕ್ಕೆ ಹಾಗೂ ಕೆಲಸ ನಿರ್ವಹಿಸಿದ  ನಂತರ ಅಲ್ಲಿಂದ  ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡಲಾಗಿದೆ. ಮಂಡಕಳ್ಳಿ,ಸಾತಗಳ್ಳಿ,ಭಾರತ್ ನಗರ,ಜೆ.ಪಿ.ನಗರ ಸೇರಿದಂತೆ ಮೈಸೂರು ನಗರದಲ್ಲಿರುವ ಪೌರಕಾರ್ಮಿಕರನ್ನು ಕರೆದುಕೊಂಡು ಹೋಗಲು  4 ಬಸ್ ವ್ಯವಸ್ಥೆ ಮಾಡಲಾಗಿದೆ.  ಫೆ.2ರಿಂದ ಆರಂಭವಾಗಿದ್ದು, ಭಾರತ್ ಲಾಕ್ ಡೌನ್ ಮುಗಿಯುವವರೆಗೂ ಈ ವ್ಯವಸ್ಥೆ ಮುಂದುವರೆಯಲಿದೆ ಎಂದು ಪೌರಕಾರ್ಮಿಕರ ಮಾಜಿ ಅಧ್ಯಕ್ಷ ಮುರುಗನ್ ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: